ದೇವರ ಚಿತ್ರಕ್ಕೆ 'A' ಸರ್ಟಿಫಿಕೇಟ್..! ಅಕ್ಷಯ್‌ ʼಓ ಮೈ ಗಾಡ್-2ʼ ಚಿತ್ರದಲ್ಲಿ ಅಂತಹದ್ದೇನಿದೆ

Akshay Kumar : ಓ ಮೈ ಗಾಡ್-2 ಚಿತ್ರದಲ್ಲಿ ಅಕ್ಷಯ್ ಕುಮಾರ್ ದೇವರ ಪಾತ್ರ ಮಾಡುತ್ತಿದ್ದಾರೆ. ಅಮಿತ್ ರಾಯ್ ನಿರ್ದೇಶನದ ಈ ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್ 'ಎ' ಸರ್ಟಿಫಿಕೇಟ್ ನೀಡಿದ್ದು, ಬಾಲಿವುಡ್ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.   

Written by - Krishna N K | Last Updated : Aug 1, 2023, 08:36 PM IST
  • ಓ ಮೈ ಗಾಡ್-2 ಚಿತ್ರದಲ್ಲಿ ಅಕ್ಷಯ್ ಕುಮಾರ್ ದೇವರ ಪಾತ್ರ ಮಾಡುತ್ತಿದ್ದಾರೆ.
  • 'ಓ ಮೈ ಗಾಡ್-2' ರಿಲೀಸ್‌ಗೆ ರೆಡಿಯಾಗಿದೆ.
  • ಈ ಸಿನಿಮಾಗೆ ಸೆನ್ಸಾರ್ ಮಂಡಳಿ A ಪ್ರಮಾಣ ಪತ್ರ ನೀಡಿದೆ.
ದೇವರ ಚಿತ್ರಕ್ಕೆ 'A' ಸರ್ಟಿಫಿಕೇಟ್..! ಅಕ್ಷಯ್‌ ʼಓ ಮೈ ಗಾಡ್-2ʼ ಚಿತ್ರದಲ್ಲಿ ಅಂತಹದ್ದೇನಿದೆ title=

Om my God 2 :  ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಮುಂಬರುವ ಸಿನಿಮಾ 'ಓ ಮೈ ಗಾಡ್-2' ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಯಾಮಿ ಗೌತಮಿ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಮಿತ್ ರಾಯ್ ನಿರ್ದೇಶನದ ಈ ಚಿತ್ರವು ಒಂಬತ್ತು ವರ್ಷಗಳ ಹಿಂದಿನ ಚಿತ್ರ 'ಓ ಮೈ ಗಾಡ್' ಭಾಗ 2 ಆಗಿದೆ.

ವಕಾವೋ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಓ ಮೈ ಗಾಡ್‌-2 ಚಿತ್ರವು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಆದರೆ ಇತ್ತೀಚೆಗಷ್ಟೇ ಈ ಸಿನಿಮಾಗೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಈಗ ಅದು ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ.

ಇದನ್ನೂ ಓದಿ: ಈ ನಟಿಯರು ನಗ್ನರಾಗಿ ತೆರೆಯ ಮೇಲೆ ಸಂಚಲನ ಮೂಡಿಸಿದರು

ಸಾಮಾನ್ಯವಾಗಿ ದೇವರ ಹಿನ್ನೆಲೆಯಲ್ಲಿ ಬರುವ ಚಿತ್ರಗಳಿಗೆ ಕ್ಲೀನ್ ಯು ಸರ್ಟಿಫಿಕೇಟ್ ಅಥವಾ ಯು/ಎ ಸರ್ಟಿಫಿಕೇಟ್ ನೀಡುವುದನ್ನು ನೋಡುತ್ತೇವೆ. ಆದರೆ ಈ ಸಿನಿಮಾಗೆ 'ಎ' ಸರ್ಟಿಫಿಕೇಟ್ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ. ದೇವರ ಕಥೆ ಆಧಾರಿತ ಸಿನಿಮಾ ಎ ಸರ್ಟಿಫಿಕೇಟ್‌ ಸಿಕ್ಕಿರುವುದು ಇದೇ ಮೊದಲು. ಅಷ್ಟೊಂದು ಅಡಲ್ಟ್ ಕಂಟೆಂಟ್ ಸಿನಿಮಾದಲ್ಲಿ ಇದೆಯಾ..? ಎಂಬ ಪ್ರಶ್ನೆ ಹುಟ್ಟುಹಾಕಿದೆ. 

ಈ ಹಿಂದೆ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರು 20 ಕಟ್‌ಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಶಿಫಾರಸು ಮಾಡಿದ್ದರು. ಇದಕ್ಕೆ ಒಪ್ಪದರೆ ಮಾತ್ರ ಪ್ರಮಾಣಪತ್ರ ನೀಡುವುದಾಗಿ ಸೆನ್ಸಾರ್ ಮಂಡಳಿ ನಿರ್ಮಾಪಕರಿಗೆ ತಿಳಿಸಿತ್ತು. ಇದೀಗ ಕೆಲವೊಂದಿಷ್ಟು ದೃಶ್ಯಗಳನ್ನು ತೆಗೆದ ನಂತರವೂ ಚಿತ್ರಕ್ಕೆ ಆ A ಸರ್ಟಿಫಿಕೇಟ್‌ ಸಿಕ್ಕಿರುವುದು ಆಚ್ಚರಿ ತಂದಿದೆ. ಸದ್ಯಕ್ಕೆ ಅಕ್ಷಯ್ ಕುಮಾರ್ ಈ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಅಕ್ಷಯನ್‌ ನಟನೆಯ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದವು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News