ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌

Bollywood Actress: ಅನೇಕ ಸ್ಟಾರ್‌ ನಟ ನಟಿಯರು ಸಿನಿರಂಗ ಪ್ರವೇಶಿಸಿದ ಮೇಲೆ ಸಾಕಷ್ಟು ಏಳುಬೀಳುಗಳನ್ನು ಅನುಭವಿಸುತ್ತಾರೆ.. ಸಿಹಿಕಹಿಯಲ್ಲಿ ಮಿಂದೆದ್ದು ಯಶಸ್ಸು ಪಡೆದ ನಟಿಯೊಬ್ಬರ ಕುರಿತು ಮಾಹಿತಿಯೊಂದು ಲಭಿಸಿದೆ.. 

Written by - Savita M B | Last Updated : Jan 31, 2024, 03:46 PM IST
  • 1998 ರಲ್ಲಿ ಶಾರುಖ್ ಖಾನ್ ಮತ್ತು ಮನಿಶಾ ಕೊಯಿರಾಲಾ ಅಭಿನಯದ 'ದಿಲ್ ಸೇ' ಚಿತ್ರ ಬಿಡುಗಡೆಯಾಯಿತು
  • ಆದರೆ ಈ ಚಿತ್ರವು ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ
  • ಬಾಬಿಡಿಯೋಲ್‌ ಹಾಗೂ ಪ್ರೀತಿ ಕಾಂಬಿನೇಷನ್‌ ಚಿತ್ರವು ತೆರೆ ಮೇಲೆ ಸೂಪರ್ ಹಿಟ್ ಆಗಿತ್ತು..
ಎರಡನೇ ಸಿನಿಮಾದಲ್ಲಿಯೇ ಶೂಟಿಂಗ್ ಬಿಟ್ಟು ದಿಢೀರ್ ನಾಪತ್ತೆಯಾಗಿದ್ದ ಈಕೆ ಸದ್ಯ ಸೂಪರ್‌ ಸ್ಟಾರ್!‌ title=

Bollywood Actress Preity Zinta: 1998 ರಲ್ಲಿ ಶಾರುಖ್ ಖಾನ್ ಮತ್ತು ಮನಿಶಾ ಕೊಯಿರಾಲಾ ಅಭಿನಯದ 'ದಿಲ್ ಸೇ' ಚಿತ್ರ ಬಿಡುಗಡೆಯಾಯಿತು. ಈ ಚಿತ್ರದ ಹಾಡುಗಳು ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದವು.. ಆದರೆ ಇದು ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ಹೊಸ ನಟಿಯೊಬ್ಬರು ಎಂಟ್ರಿಯಾದರು.. ಮತ್ತು 1998 ರಲ್ಲಿಯೇ ಈ ಹೊಸ ನಟಿಯ ಎರಡನೇ ಸಿನಿಮಾ ಸಹ ಬಿಡುಗಡೆಯಾಯಿತು, ಇದರಿಂದಾಗಿ ಅವರು ರಾತ್ರೋರಾತ್ರಿ ಸ್ಟಾರ್ ಆದರು.. ಆ ನಟಿ ಬೇರೆ ಯಾರು ಅಲ್ಲ..  'ದಿಲ್ ಸೇ' ಚಿತ್ರದ ನಾಯಕಿ ಪ್ರೀತಿ ಜಿಂಟಾ.. 

'ದಿಲ್ ಸೇ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರೀತಿ ಜಿಂಟಾ.. ಅದೇ ವರ್ಷದಲ್ಲಿ ಬಿಡುಗಡೆಯಾದ 'ಸೋಲ್ಜರ್' ಚಿತ್ರದಿಂದ ನಿಜವಾದ ಮನ್ನಣೆ ಪಡೆದರು. ಬಾಬಿಡಿಯೋಲ್‌ ಹಾಗೂ ಪ್ರೀತಿ ಕಾಂಬಿನೇಷನ್‌ ಚಿತ್ರವು ತೆರೆ ಮೇಲೆ ಸೂಪರ್ ಹಿಟ್ ಆಗಿತ್ತು..

ಇದನ್ನೂ ಓದಿ-ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್.. ಹೇಗಿದೆ ‘S/o ಮುತ್ತಣ್ಣ’ ಫಸ್ಟ್ ಲುಕ್?

ಆದರೆ ಎರಡನೇ ಚಿತ್ರದ ಸೆಟ್‌ನಲ್ಲಿ ಅನುಭವಿ ನಟಿ ಪ್ರೀತಿ ಏನನ್ನೂ ಯೋಚಿಸದೆ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದರಂತೆ... ಈ ವಿಷಯವನ್ನು ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಬಹಿರಂಗಪಡಿಸಿದ್ದರು... ನವೆಂಬರ್ 20, 2022 ರಂದು ಇನ್‌ಸ್ಟಾಗ್ರಾಮ್‌ನಲ್ಲಿ 'ಸೋಲ್ಜರ್' ಚಿತ್ರದ ಶೀರ್ಷಿಕೆ ಟ್ರ್ಯಾಕ್ ಅನ್ನು ಹಂಚಿಕೊಳ್ಳುವಾಗ, ಚಿತ್ರದ ಶೂಟಿಂಗ್‌ನ್ನು ಮಧ್ಯದಲ್ಲಿ ಬಿಟ್ಟು ಸೆಟ್‌ನಿಂದ ನಾಪತ್ತೆಯಾಗಿದ್ದೇ.. ಈ ಚಿತ್ರದ ಶೂಟಿಂಗ್ ರಾಜಸ್ಥಾನದಲ್ಲಿ ನಡೆಯುತ್ತಿದ್ದು, ಅದನ್ನು ಬಿಟ್ಟು ನಾನು ಮನಶಾಸ್ತ್ರ ಪರೀಕ್ಷೆಗೆ ಹೋಗಿದ್ದೆ... ಒಂದು ವಾರದ ನಂತರ ಸೆಟ್‌ಗೆ ಹಿಂತಿರುಗಿದಾಗ, ಅವರ ಚಿತ್ರದ ನಿರ್ದೇಶಕ ಅಬ್ಬಾಸ್-ಮಸ್ತಾನ್ ನನ್ನ ಮೇಲೆ ಕೋಪಗೊಂಡು.. ಯಾರೂ ನನಗೆ ಏನನ್ನೂ ಹೇಳಲಿಲ್ಲ" ಎಂದು ಘಟನೆಯ ಕುರಿತು ಮಾತನಾಡಿದ್ದರು.. 

'ಸೋಲ್ಜರ್' ಯಶಸ್ಸಿನ ನಂತರ ಪ್ರೀತಿ ಜಿಂಟಾ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದರಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಇವರು ಬಹಳ ಸಮಯದಿಂದ ಪರದೆಯಿಂದ ದೂರವಿದ್ದಾರೆ.. ಆದರೆ ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ನಟಿ ಸನ್ನಿ ಡಿಯೋಲ್ ಜೊತೆಗಿನ 'ಲಾಹೋರ್ 1947' ಚಿತ್ರದ ಮೂಲಕ ತೆರೆಗೆ ಮರಳಬಹುದು ಎನ್ನಲಾಗಿದೆ. 

ಇದನ್ನೂ ಓದಿ-2 ನೇ ವಯಸ್ಸಿಗೆ ಸಿನಿರಂಗಕ್ಕೆ ಕಾಲಿಟ್ಟ ಈಕೆ ಭಾರತದ ಅತ್ಯಂತ ಶ್ರೀಮಂತ ಬಾಲ ಕಲಾವಿದೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News