BBK 10 : ಪ್ರೀತಿ, ಸ್ನೇಹ ಅಂತಿದ್ದ ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್..!

Bigg boss 10 : ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ. ಹಾಗಾದರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಖರೀದಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..

Written by - Krishna N K | Last Updated : Dec 21, 2023, 03:28 PM IST
  • ಬಿಗ್‌ಬಾಸ್ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿಯೇ ಸಾಗಿದೆ.
  • ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ.
  • ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ?
BBK 10 : ಪ್ರೀತಿ, ಸ್ನೇಹ ಅಂತಿದ್ದ ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್..! title=

Bigg Boss Kannada : ಬಿಗ್‌ಬಾಸ್ ಮನೆಯೊಳಗೆ ಬಿಡ್ಡಿಂಗ್ ಭರಾಟೆ ಜೋರಾಗಿಯೇ ಸಾಗಿದೆ. ತಂಡ ರಚನೆಯಲ್ಲಿ ಗುಪ್ತವಾಗಿದ್ದ ಖರೀದಿ ಕೆಲಸ ಈಗ ಖುಲ್ಲಂಖುಲ್ಲಾ ನಡೆಯುತ್ತಿದೆ. ಇದರ ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಒಂದು ದಿನದ ಟಾಸ್ಕ್ ಮುಗಿದ ನಂತರ ತನಿಷಾ ಮತ್ತು ಸಂಗೀತಾ ಅವರಿಗೆ ಬಿಗ್‌ಬಾಸ್‌ ಮತ್ತೊಂದು ಬಿಡ್ಡಿಂಗ್ ಪ್ರಕ್ರಿಯೆ ಮಾಡಲು ಸೂಚಿಸಿದ್ದಾರೆ. ವಿನಯ್ ಮತ್ತು ನಮ್ರತಾ ಅವರನ್ನು ಹೊರತುಪಡಿಸಿ ಎಲ್ಲ ಆಟಗಾರರ ಪೈಕಿ ತಲಾ ಮೂವರು ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ. ಆದರೆ ಕಾರ್ತಿಕ್‌ ಅವರನ್ನು ಕೊಂಡುಕೊಳ್ಳುವ ಸರದಿ ಬಂದಾಗ ತನಿಷಾ ಮತ್ತು ಸಂಗೀತಾ ಇಬ್ಬರೂ ಬಿಡ್ ಮಾಡಲೇ ಇಲ್ಲ! ಇದರ ಮೇಲೆ ತನಿಷಾ, ‘ನನ್ನ ಕಳಪೆ ಖರೀದಿ ಕಾರ್ತಿಕ್‌ ಅವರು’ ಎಂದು ಬೇರೆ ಹೇಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಇದನ್ನೂ ಓದಿ: ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಸೋಲುಂಡ ಕನ್ನಡ ಸಿನಿಮಾಗಳಿವು

ಇದನ್ನು ನೋಡಿ ತುಕಾಲಿ ಸಂತೋಷ್‌, ‘ಅವನಿಗೋಸ್ಕರ ಗುದ್ದಾಡಿದ ಅದೇ ಫ್ರೆಂಡ್ಸು ಅವನನ್ನೇ ಹತ್ ರೂಪಾಯಿಗೂ ಕೇಳಿಲ್ವಲ್ಲ ಅವನ್ನ’ ಎಂದು ಮಾತಾಡಿಕೊಳ್ಳುತ್ತಿದ್ದಾರೆ.  ಕಳೆದ ಸಲ ಸಂಗೀತಾ ಅವರಿಂದ ಹಣ ತೆಗೆದುಕೊಂಡು ನಂತರ ಪಕ್ಷ ಬದಲಾಯಿಸಿ ತನಿಷಾ ಹೆಚ್ಚು ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಅವರ ತಂಡ ಸೇರಿಕೊಂಡಿದ್ದರು ಕಾರ್ತಿಕ್. 

ಆಗ ವ್ಯಕ್ತಿಗತ ಆಟ ಮತ್ತು ನೈತಿಕತೆಯ ಬಗ್ಗೆಯೂ ಮಾತುಕತೆಗಳು ನಡೆದಿದ್ದವು. ಈ ಪಕ್ಷಾಂತರವೇ ಕಾರ್ತಿಕ್‌ಗೆ ಮುಳುವಾದಂತಿದೆ. ಹಾಗಾದರೆ ಸಂಗೀತಾ ಮತ್ತು ತನಿಷಾ ಇಬ್ಬರೂ ಯಾರು ಯಾರನ್ನೆಲ್ಲ ಖರೀದಿಸಿದ್ದಾರೆ? ಯಾವ ಬೆಲೆಗೆ ಖರೀದಿಸಿದ್ದಾರೆ? ಎಂಬುದನ್ನು ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News