Diabetes Tips: ಈ ಬದಲಾದ ಜೀವನಶೈಲಿಯಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ, ಭಾರತದಲ್ಲಿ ಮಧುಮೇಹ ರೋಗಿಗಳು (Diabetic Patients) ವೇಗವಾಗಿ ಹೆಚ್ಚಾಗುತ್ತಿದ್ದು, ಭಾರತವನ್ನು ಮಧುಮೇಹದ ರಾಜಧಾನಿ ಎಂದು ಹೇಳಲಾಗುತ್ತಿದೆ. ಮಧುಮೇಹ ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ಒಮ್ಮೆ ಈ ಕಾಯಿಲೆಗೆ ತುತ್ತಾದರೆ ಜೀವನದುದ್ದಕ್ಕೂ ಈ ಸಮಸ್ಯೆಯಿಂದ ಪಾರಾಗಲು ಸಾಧ್ಯವಿಲ್ಲ.
ಗಮನಾರ್ಹವಾಗಿ, ಕೆಲವು ದಶಕಗಳ ಹಿಂದೆ 40-45 ವರ್ಷ ಮೇಲ್ಪಟ್ಟವರು ಮಧುಮೇಹಕ್ಕೆ (Diabetic) ಬಲಿಯಾಗುತ್ತಿದ್ದರು. ಆದರೆ, ಈ ವೇಗದ ಜೀವನಶೈಲಿಯಲ್ಲಿ ನವಜಾತ ಶಿಶುಗಳು, ಯುವಕರು ಕೂಡ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಈ ಬಗ್ಗೆ ನಿಗಾವಹಿಸದಿದ್ದರೆ, ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಇದು ಅಪಾಯಕಾರಿ ಎಂತಲೂ ಸಾಬೀತು ಪಡಿಸಬಹುದು. ಮಧುಮೇಹದ ಅಪಾಯವನ್ನು ತಪ್ಪಿಸಲು, ವಯಸ್ಸಿಗೆ ತಕ್ಕಂತೆ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಎಷ್ಟಿರಬೇಕು ಎಂಬುದನ್ನೂ ತಿಳಿದಿರುವುದು ತುಂಬಾ ಮುಖ್ಯ.
ಇದನ್ನೂ ಓದಿ- ಆರೋಗ್ಯ ಸಮೃದ್ಧ ಗೋಡಂಬಿ: ನಿತ್ಯ ತಿಂದರೆ ಈ ಆರೋಗ್ಯ ಸಮಸ್ಯೆಗಳೂ ಶಾಶ್ವತ ದೂರ
ಮಧುಮೇಹದ ಅಪಾಯ ತಪ್ಪಿಸಲು ವಯಸ್ಸಿಗೆ ತಕ್ಕಂತೆ ಎಷ್ಟಿರಬೇಕು ಬ್ಲಡ್ ಶುಗರ್ ಲೆವೆಲ್ :-
* 18ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವು (Blood sugar level) ಊಟಕ್ಕೂ ಮೊದಲು 99 mg/dL ಆಗಿರಬೇಕು. ಆಹಾರ ಸೇವಿಸಿದ ಒಂದು ಅಥವಾ ಎರಡು ಗಂಟೆಗಳ ನಂತರ ಪ್ರತಿ ಡೆಸಿಲಿಟರ್ (mg/dL) ಗೆ 140 ಮಿಲಿಗ್ರಾಂ ಆಗಿದ್ದರೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ.
* 40ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅಥವಾ 40 ರಿಂದ 50 ವರ್ಷ ವಯಸ್ಸಿನವರಿಗಿನ ಜನರಲ್ಲಿ ಬ್ಲಡ್ ಶುಗರ್ ಲೆವೆಲ್ ಊಟಕ್ಕೂ ಮೊದಲು 90 ರಿಂದ 130 mg/dL ಆಗಿರಬೇಕು. ಅಂತೆಯೇ ಊಟದ ನಂತರ 150 mg/dl ಗಿಂತ ಹೆಚ್ಚಿರಬರದು.
ಮಧುಮೇಹದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳು:
ದೀರ್ಘ ಕಾಲದ ಆರೋಗ್ಯ ಸಮಸ್ಯೆಯಾದ ಮಧುಮೇಹವು ದೃಷ್ಟಿಹೀನತೆ, ಅಧಿಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡದಂತಹ ಇತರ ಕಾಯಿಲೆಗಳಿಗೆ ಮೂಲವಾಗಬಹುದು. ಇದರಿಂದಾಗಿ, ಕ್ರಮೇಣ ದೇಹವು ದುರ್ಬಲಗೊಳ್ಳುತ್ತದೆ.
ಇದನ್ನೂ ಓದಿ- International Tea Day: ಮಧುಮೇಹ ನಿಯಂತ್ರಣಕ್ಕೆ ಚಮತ್ಕಾರಿ ಚಹಾಗಳಿವು
ಮಧುಮೇಹವನ್ನು ನಿಯಂತ್ರಿಸಲು ಏನು ಮಾಡಬೇಕು?
ನೀವು ಒಂದೊಮ್ಮೆ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರೆ ಎಂತಹುದೇ ಸ್ಥಿತಿಯಲ್ಲಿ ನಿಮ್ಮ ಶುಗರ್ ಲೆವೆಲ್ ಹೆಚ್ಚಾಗದಂತೆ ಕಾಳಜಿವಹಿಸಿ. ಇದಕ್ಕಾಗಿ ನಿಮ್ಮ ಆಹಾರಾಭ್ಯಾಸಗಳ ಬಗ್ಗೆ ವಿಶೇಷ ಗಮನವಿರಲಿ. ಇದಲ್ಲದೆ, ಪ್ರತಿ ದಿನ ದೈಹಿಕ ಚಟುವಟಿಗೆಗಳಿಗೆ ಒತ್ತು ನೀಡುವುದನ್ನು ಮರೆಯಬೇಡಿ.,
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.