ವಿಜಯ್ ಆಂಟೋನಿ ಮಗಳ ಸಾವಿಗೆ ʼಇದೇ ಕಾರಣʼ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಗಾಯಕಿ ಸುಚಿತ್ರಾ 

Suchitra on Vijay Antony daughter : ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆಂಟೋನಿ ಅವರ ಪುತ್ರಿ ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಕುರಿತು ಖ್ಯಾತ ಗಾಯಕಿ ಸುಚಿತ್ರಾ ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ. 

Written by - Krishna N K | Last Updated : May 23, 2024, 06:08 PM IST
    • ನಟ ವಿಜಯ್ ಆಂಟೋನಿ ಅವರ ಪುತ್ರಿ ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
    • ಇದೀಗ ಸಿಂಗರ್‌ ವಿಜಯ್ ಆಂಟೋನಿ ಮಗಳ ಸಾವಿನ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.
    • ವಿಜಯ್ ಆಂಟೋನಿ ಅವರ 16 ವರ್ಷ ವಯಸ್ಸಿನ ಹಿರಿಯ ಮಗಳು ಆತ್ಮಹತ್ಯೆಗೆ ಶರಣಾಗಿದ್ದರು.
ವಿಜಯ್ ಆಂಟೋನಿ ಮಗಳ ಸಾವಿಗೆ ʼಇದೇ ಕಾರಣʼ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಗಾಯಕಿ ಸುಚಿತ್ರಾ  title=

Singer Suchitra interview : ಗಾಯಕಿ ಸುಚಿತ್ರಾ ಅವರ ಇತ್ತೀಚಿನ ಸಂದರ್ಶನಗಳು ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡಿಂಗ್ ಆಗಿವೆ. ಕಾರ್ತಿಕ್ ಕುಮಾರ್, ಧನುಷ್, ತ್ರಿಷಾ ಮತ್ತು ವಿಜಯ್ ಬಗ್ಗೆ ಅವರು ಹೇಳಿರುವ ಎಲ್ಲಾ ಸುದ್ದಿಗಳು ಕೆಲವು ದಿನಗಳಿಂದ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಇದೀಗ ಸಿಂಗರ್‌ ವಿಜಯ್ ಆಂಟೋನಿ ಮಗಳ ಸಾವಿನ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. 

ತಮಿಳು ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿದ ವಿಜಯ್ ಆಂಟೋನಿ ಈಗ ಉದಯೋನ್ಮುಖ ನಟ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ವಿಜಯ್ ಆಂಟೋನಿ ಅವರ 16 ವರ್ಷ ವಯಸ್ಸಿನ ಹಿರಿಯ ಮಗಳು ಕಳೆದ ವರ್ಷ ಸೆಪ್ಟೆಂಬರ್ 17 ರಂದು ತನ್ನ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಯು ವಿಜಯ್ ಆಂಟೋನಿ ಕುಟುಂಬಕ್ಕೆ ಮಾತ್ರವಲ್ಲದೆ ತಮಿಳು ಚಿತ್ರರಂಗ ಮತ್ತು ತಮಿಳು ಜನರಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. 

ಇದನ್ನೂ ಓದಿ:ಹುಟ್ಟು ಹಬ್ಬದಲ್ಲಿ ಸಂಭ್ರಮದಲ್ಲಿ ಸಂಯುಕ್ತ..! ನಟಿ ಟಾಪ್‌ 9 ಸಿನಿಮಾಗಳ ಲಿಸ್ಟ್‌ ಇಲ್ಲಿದೆ

ಬಾಲಕಿಯ ಆತ್ಮಹತ್ಯೆಗೆ ಕಾರಣಗಳ ಬಗ್ಗೆ ಅಂತರ್ಜಾಲದಲ್ಲಿ ವಿಭಿನ್ನ ಮಾಹಿತಿಗಳು ವೈರಲ್ ಆಗಿದ್ದರೂ, ವಿಜಯ್ ಆಂಟನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತನ್ನ ಮಗುವಿನ ಸಾವಿನ ನಂತರ, ತನ್ನಿಂದ ಯಾರಿಗೂ ತೊಂದರೆಯಾಗಬಾರದು ಎಂದು ಬಯಸಿದ ವಿಜಯ್ ಆಂಟೋನಿ, ತಮ್ಮ ಸಿನಿಮಾ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಗಾಯಕಿ ಸುಚಿತ್ರಾ ನೀಡಿದ ಮಾಹಿತಿಯೊಂದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

ಗಾಯಕಿ ಸುಚಿತ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಜಯ್ ಆಂಟೋನಿ ಮಗಳ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ವಿಜಯ್ ಆಂಟೋನಿ ಅವರು ಹೀರೋ ಆಗಿ ನಟಿಸಲು ತಮ್ಮ ದೇಹಕ್ಕೆ ಹಲವಾರು ಸರ್ಜರಿ ಮಾಡಿಸಿಕೊಂಡಿದ್ದಾರೆ. ತಮ್ಮ ಮಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಆತ್ಮಹತ್ಯೆಗೂ ಮುನ್ನ ವಿಜಯ್ ಆಂಟೋನಿ ತನ್ನ ಮಗಳ ಜೊತೆ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಕೋಪದಿಂದ ಮಾತನಾಡಿದ್ದರು. ಇದಾದ ಬಳಿಕ ಮಗು ಆತ್ಮಹತ್ಯೆ ಮಾಡಿಕೊಂಡಿತ್ತು ಅಂತ ಸುಚಿತ್ರಾ ಹೇಳಿದ್ದಾರೆ. 

ಇದನ್ನೂ ಓದಿ:ಆ ಬ್ಯಾಚ್‌ ವಿಜಯ್ ದೇವರಕೊಂಡರನ್ನು ತುಳಿಯುತ್ತಿದೆ..! ನಟ ಆನಂದ್‌ ಶಾಕಿಂಗ್‌ ಹೇಳಿಕೆ

ನಟ ವಿಜಯ್ ಆಂಟೋನಿ ತಮ್ಮ ಪುತ್ರಿಯ ಸಾವಿನ ನಂತರ ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಬಾಲಕಿಯು ಬಹಳ ದಿನಗಳಿಂದ ಒತ್ತಡಕ್ಕೆ ಒಳಗಾಗಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಆಸ್ಪತ್ರೆ ತಿಳಿಸಿದೆ. ಹೀಗಿರುವಾಗ ಸುಚಿತ್ರಾ ಅವರು ಯಾವುದೇ ಮೂಲ ಸಾಕ್ಷಿ ಇಲ್ಲದೆ ಮಾತನಾಡಿರುವುದು ಟೀಕೆಗೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News