ಕ್ಯಾಬ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಕ್ಕೆ ಮಹಿಳೆಗೆ ಅಶ್ಲೀಲ ಫೋಟೋ ಕಳುಹಿಸಿದ ಟ್ಯಾಕ್ಸಿ ಚಾಲಕ!

Bangalore crime: ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ, ಮಹಿಳೆಯ ವಾಟ್ಸಾಪ್ ನಂಬರ್‌’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾನೆ.

Written by - Bhavishya Shetty | Last Updated : Oct 13, 2023, 07:44 PM IST
    • ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ಮಹಿಳೆ
    • ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ
    • ವಾಟ್ಸಾಪ್ ನಂಬರ್‌’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ
ಕ್ಯಾಬ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಕ್ಕೆ ಮಹಿಳೆಗೆ ಅಶ್ಲೀಲ ಫೋಟೋ ಕಳುಹಿಸಿದ ಟ್ಯಾಕ್ಸಿ ಚಾಲಕ! title=
bangalore crime

ಬೆಂಗಳೂರು: ಮಹಿಳೆಯೊಬ್ಬರು ತಮ್ಮ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲೆಂದು ಕ್ಯಾಬ್ ಬುಕ್ ಮಾಡಿದ್ದರು. ಆದರೆ ಅನಿವಾರ್ಯತೆ ಕಾರಣದಿಂದ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡ ಟ್ಯಾಕ್ಸಿ ಚಾಲಕ, ಮಹಿಳೆಯ ವಾಟ್ಸಾಪ್ ನಂಬರ್‌’ಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಕ್ರೌರ್ಯ ಮೆರೆದಿದ್ದಾನೆ.

ಇದನ್ನೂ ಓದಿ:Rachita Ram: ಅಭಿಮಾನಿ ಬೆನ್ನಮೇಲೆ ಬುಲ್‌ಬುಲ್‌ ಬೆಡಗಿ ಟ್ಯಾಟೋ..ವಿಡಿಯೋ ವೈರಲ್‌   

ಈ ಘಟನೆ ಹಿನ್ನೆಲೆಯಲ್ಲಿ ನೊಂದ 32 ವರ್ಷದ ಬೆಂಗಳೂರು ಮೂಲದ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಟ್ಯಾಕ್ಸಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

"ನನ್ನ ಮಗಳು ನಡೆಯಲು ಸಿದ್ಧವಿಲ್ಲದ ಕಾರಣ ನಾನು ಕ್ಯಾಬ್ ಅನ್ನು ಬುಕ್ ಮಾಡಿದೆ. ಅದೇ ವೇಳೆಗೆ ಆಟೋವನ್ನು ಗಮನಿಸಿ, ನಾನು ಕ್ಯಾಬ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ. ಅದಕ್ಕಾಗಿ ನನಗೆ 60 ರೂ ಶುಲ್ಕ ಕೂಡ ವಿಧಿಸಲಾಯಿತು” ಎಂದು ಆ ಮಹಿಳೆ ಹೇಳಿಕೆ ನೀಡಿದ್ದಾರೆ.

“ಕ್ಯಾಬ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ಬಳಿಕ ನನಗೆ ಆತ ತೊಂದರೆ ನೀಡಲು ಶುರು ಮಾಡಿದ. ದಿನೇಶ್ ಎಂಬ ಚಾಲಕ ಪದೇ ಪದೇ ಕರೆ ಮಾಡಿ, ತಾನು ಈಗಾಗಲೇ 5 ಕಿಮೀ ಕ್ಯಾಬ್ ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದ. ಆದರೆ ನಾನು ನನ್ನ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಆಟೋ ಮೂಲಕ ಬಂದಿದ್ದೇನೆ ಎಂದು ಹೇಳಿ ಕ್ಷಮೆ ಕೇಳಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ 11 ಪ್ರಕಟ! ಏಷ್ಯಾಕಪ್ ಗೆಲುವಿನ ರೂವಾರಿ ಔಟ್

ಆಕೆ ವಿವರಣೆ ನೀಡಿ, ಕ್ಷಮೆ ಕೋರಿದ್ದರೂ ಸಹ ಚಾಲಕ ಪಟ್ಟುಬಿಡದೆ ಕರೆ ಮತ್ತು ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ. ಈ ಸಂದರ್ಭದಲ್ಲಿ ನೆರೆಹೊರೆಯವರು ಆ ಮಹಿಳೆಯ ಫೋನ್ ತೆಗೆದುಕೊಂಡು ಚಾಲಕನನ್ನು ಗದರಿಸಿದ್ದರು. ಈ ಬಳಿಕ ಮಹಿಳೆ ಪೊಲೀಸರಿಗೆ ಸಾಕ್ಷಿ ಸಮೇತ ದೂರು ನೀಡಿದ್ದು, ಪೊಲೀಸರು ಐಪಿಸಿ ಸೆಕ್ಷನ್ 354ಎ ಅಡಿಯಲ್ಲಿ ಲೈಂಗಿಕ ಕಿರುಕುಳ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News