ಸಿನಿಮೀಯ ರೀತಿ ಕಾರ್ಯಾಚರಣೆ: ಹೊಸ ವರ್ಷಾಚರಣೆಗೆ‌ ಕಿಕ್ಕೇರಿಸಬೇಕಿದ್ದ 263 ಕೆಜಿ ಗಾಂಜಾ ಸೀಜ್

Bangalore Crime News : ಸ್ಥಳೀಯ ದಂಧೆಕೋರರು ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಕೋಣನಕುಂಟೆ ಠಾಣಾ ಪೊಲೀಸರ ತಂಡ ಒಡಿಶಾದ ಕಾಡು ದಾರಿಯಲ್ಲೇ ಆರೋಪಿಗಳನ್ನ ಬಂಧಿಸಿದೆ. ಜಗದೀಶ್ ಜಟ್ಟಿ ಹಾಗೂ ಮುರುಳಿ ಬೆಹ್ರಾ ಬಂಧಿತ ಆರೋಪಿಗಳು.

Written by - VISHWANATH HARIHARA | Edited by - Zee Kannada News Desk | Last Updated : Dec 24, 2022, 01:22 PM IST
  • ಸಿನಿಮೀಯ ರೀತಿ ಕಾರ್ಯಾಚರಣೆ
  • ಹೊಸ ವರ್ಷಾಚರಣೆಗೆ‌ ಕಿಕ್ಕೇರಿಸಬೇಕಿದ್ದ 263 ಕೆಜಿ ಗಾಂಜಾ ಸೀಜ್
  • ಜಗದೀಶ್ ಜಟ್ಟಿ ಹಾಗೂ ಮುರುಳಿ ಬೆಹ್ರಾ ಬಂಧಿತ ಆರೋಪಿಗಳು
ಸಿನಿಮೀಯ ರೀತಿ ಕಾರ್ಯಾಚರಣೆ: ಹೊಸ ವರ್ಷಾಚರಣೆಗೆ‌ ಕಿಕ್ಕೇರಿಸಬೇಕಿದ್ದ 263 ಕೆಜಿ ಗಾಂಜಾ ಸೀಜ್ title=

ಬೆಂಗಳೂರು : ಹೊಸ ವರ್ಷಕ್ಕೆ ಕಿಕ್ಕೇರಿಸಲು ಓಡಿಶಾದಿಂದ ಬೆಂಗಳೂರಿಗೆ ಬರಲು ಸಿದ್ಧವಾಗಿದ್ದ ಭಾರೀ ಪ್ರಮಾಣದ ಗಾಂಜಾವನ್ನ ಕೋಣನಕುಂಟೆ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಥಳೀಯ ದಂಧೆಕೋರರು ನೀಡಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಕೋಣನಕುಂಟೆ ಠಾಣಾ ಪೊಲೀಸರ ತಂಡ ಒಡಿಶಾದ ಕಾಡು ದಾರಿಯಲ್ಲೇ ಆರೋಪಿಗಳನ್ನ ಬಂಧಿಸಿದೆ. ಜಗದೀಶ್ ಜಟ್ಟಿ ಹಾಗೂ ಮುರುಳಿ ಬೆಹ್ರಾ ಬಂಧಿತ ಆರೋಪಿಗಳು.

ಇದನ್ನೂ ಓದಿ: Drink and drive ವಿರುದ್ಧ ಸಂಚಾರ ಪೊಲೀಸರ ಸಮರ: ಒಂದೇ ರಾತ್ರಿ 146 ಪ್ರಕರಣ ದಾಖಲು

ಕಳೆದ ಎರಡು ತಿಂಗಳಿನಿಂದ ರೈಲಿನ ಮೂಲಕ‌ ಬೆಂಗಳೂರಿಗೆ ಗಾಂಜಾ ತರುತ್ತಿದ್ದ ಆರೋಪಿಗಳು, ಪಿಳ್ಳಗಾನಹಳ್ಳಿಯ ಪಾಳು ಮನೆಯೊಂದರಲ್ಲಿ ಶೇಖರಿಸಿಡುತ್ತಿದ್ದರು. ಬಳಿಕ ಅಲ್ಲಿಂದಲೇ ನೇರವಾಗಿ ಗ್ರಾಹಕರಿಗೆ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದರು. ಒಂದು ವಾರದ ಹಿಂದೆ ಸ್ಥಳೀಯ ಮಾದಕ ದಂಧೆಕೋರರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆರೋಪಿಗಳ ದೊಡ್ಡ ಪ್ರಮಾಣದ ಗಾಂಜಾ ಶೇಖರಣೆ ವಿಚಾರ ಪತ್ತೆಯಾಗಿತ್ತು. 

ತಕ್ಷಣ ಸ್ಥಳೀಯ ದಂಧೆಕೋರರ ಮೂಲಕವೇ ಆರೋಪಿಗಳಿಗೆ ಕರೆ ಮಾಡಿಸಿದ್ದ ಪೊಲೀಸರು ತುರ್ತಾಗಿ ಗಾಂಜಾ ಬೇಕಿದೆ ಎಂದು ಒಡಿಶಾಗೆ ಬರುವುದಾಗಿ ತಿಳಿಸಿ ಗ್ರಾಹಕರ ಸೋಗಿನಲ್ಲಿ ತಾವೇ ತೆರಳಿದ್ದರು. ಈ ವೇಳೆ ಒಡಿಶಾದ ಗಜಪತಿ ಜಿಲ್ಲೆಯ ಮಯೂರ್ ಬಂಜ್ ಅರಣ್ಯ ಪ್ರದೇಶದಲ್ಲಿ ಗಾಂಜಾ ತಂದು ಟೆಂಪೋ ಟ್ರಾವೆಲ್ಸ್ ಗೆ ತುಂಬುತ್ತಿದ್ದ ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ : ಸಿಎಂ ಬೊಮ್ಮಾಯಿ

ಬಂಧಿತರಿಂದ ಒಟ್ಟು 35 ಲಕ್ಷ ರೂ ಮೌಲ್ಯದ 263 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಹೊಸ ವರ್ಷಚರಣೆಗೆ ಪಾರ್ಟಿ ಆಯೋಜಕರು, ಗ್ರಾಹಕರುಗಳು ಮುಂಗಡವಾಗಿ ಗಾಂಜಾ ಬುಕ್ಕಿಂಗ್ ಮಾಡಿರುವ ಸಾಧ್ಯತೆಯಿದ್ದು ಆರೋಪಿಗಳನ್ನ ವಿಚಾರಣೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News