Indian Railway slowest train : ದೇಶದ ಅತ್ಯಂತ ನಿಧಾನಗತಿಯ ರೈಲು ಇದು. ಕೇವಲ 46 ಕಿಲೋಮೀಟರ್ ದೂರವನ್ನು ಕ್ರಮಿಸಲು ಬರೋಬ್ಬರಿ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ವಂದೇ ಭಾರತ್ ಕಣ್ಣು ಮಿಟುಕಿಸುವಷ್ಟರಲ್ಲಿ ಕ್ರಮಿಸುವ ದೂರವನ್ನು ಕ್ರಮಿಸಲು ಈ ರೈಲು 5 ಗಂಟೆ ತೆಗೆದುಕೊಳ್ಳುತ್ತದೆ. ಇಷ್ಟು ನಿಧಾನಗತಿಯಲ್ಲಿ ಈ ರೈಲು ಚಲಿಸುತ್ತದೆಯಾದರೂ ಈ ರೈಲಿನ ಟಿಕೆಟ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಯಾವಾಗ ನೋಡಿದರೂ ಈ ರೈಲಿನ ಟಿಕೆಟ್ ಪಡೆಯಬೇಕಾದರೆ ನೂಕು ನುಗ್ಗಲು.
ದರ ಎಷ್ಟು :
ನೀಲಗಿರಿ ಮೌಂಟೇನ್ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗಿಲ್ಲ.ಮೊದಲ ದರ್ಜೆಯ ಪ್ರಯಾಣಕ್ಕೆ 545 ರೂಪಾಯಿ ಟಿಕೆಟ್ ಖರೀದಿಸಬೇಕು. ಎರಡನೇ ದರ್ಜೆಗೆ 270 ರೂಪಾಯಿ ಪಾತಿಸಿದರೆ ಸಾಕು.
ಇದನ್ನೂ ಓದಿ : PF ಖಾತೆದಾರರಿಗೆ ಬಂಪರ್! ಈ ದಿನ ಖಾತೆಗೆ ಸೇರುವುದು ಬಡ್ಡಿ ಮೊತ್ತ
ರೈಲಿನ ವಿಶೇಷತೆ ಏನು? :
ನೀಲಗಿರಿ ಮೌಂಟೇನ್ ರೈಲ್ವೇಯ ಟ್ರ್ಯಾಕ್ ಎಂಜಿನಿಯರಿಂಗ್ ಅದ್ಭುತವಾಗಿದೆ. ಪರ್ವತಗಳ ನಡುವೆ ರೈಲು ಮಾರ್ಗವನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ. ಈ ರೈಲಿನ 46 ಕಿಮೀ ಪ್ರಯಾಣದಲ್ಲಿ 16 ಸುರಂಗಗಳು ಮತ್ತು 250 ಕ್ಕೂ ಹೆಚ್ಚು ಸೇತುವೆಗಳನ್ನು ದಾಟಬೇಕಾಗುತ್ತದೆ.
ಯಾವಾಗ ಪ್ರಾರಂಭವಾಯಿತು ? :
ನೀಲಗಿರಿ ಮೌಂಟೇನ್ ರೈಲುಮಾರ್ಗವನ್ನು ಬ್ರಿಟಿಷರು ನಿರ್ಮಿಸಿದರು. ನೀಲಗಿರಿ ಎಕ್ಸ್‌ಪ್ರೆಸ್ 1899 ರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.2005 ರಲ್ಲಿ, ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
46 ಕಿಮೀ ಕ್ರಮಿಸಲು 5 ಗಂಟೆ :
ನೀಲಗಿರಿ ಮೌಂಟೇನ್ ಎಕ್ಸ್‌ಪ್ರೆಸ್, ತಮಿಳುನಾಡಿನ ಮೆಟ್ಟುಪಾಳ್ಯಂ ನಿಲ್ದಾಣದಿಂದ ಊಟಿಯ ಉದಗಮಂಡಲ ನಿಲ್ದಾಣದವರೆಗೆ ಚಲಿಸುತ್ತದೆ. ಇದು ದೇಶದ ಅತ್ಯಂತ ನಿಧಾನವಾದ ರೈಲು.ಈ ರೈಲು ಕೆಲ್ಲರ್,ಕೂನೂರು, ವೆಲ್ಲಿಂಗ್ಟನ್, ಲವ್‌ಡೇಲ್ ಮತ್ತು ಊಟಕಮಂಡ್ ನಿಲ್ದಾಣಗಳಂತಹ ಸುಂದರ ಸ್ಥಳಗಳ ಮೂಲಕ ತನ್ನ ಗಮ್ಯಸ್ಥಾನದ ಕಡೆಗೆ ಚಲಿಸುತ್ತದೆ.ರೈಲು ಪ್ರಯಾಣವು ಮೆಟ್ಟುಪಾಳ್ಯಂನಿಂದ ಪ್ರಾರಂಭವಾಗುತ್ತದೆ.ರೈಲು ಮೊದಲ 5 ಕಿಮೀ ನೇರ ಮಾರ್ಗದಲ್ಲಿ ಚಲಿಸುತ್ತದೆ. ಇದರ ನಂತರ,ಮುಂದಿನ 12 ಕಿಮೀಗಳಲ್ಲಿ, ರೈಲು ವೇಗವಾಗಿ 4,363 ಅಡಿ ಎತ್ತರಕ್ಕೆ ಏರುತ್ತದೆ.ಕತ್ತಲು ಮತ್ತು ಅಂಕುಡೊಂಕಾದ ಸುರಂಗಗಳು,ಕಾಡುಗಳು ಮತ್ತು ಪರ್ವತ ಇಳಿಜಾರುಗಳ ಮೂಲಕ ಹಾದುಹೋಗುವುದು ಪ್ರಯಾಣವನ್ನು ರೋಮಾಂಚನಗೊಳಿಸುತ್ತದೆ. ನಮ್ಮ ಪಯಣದಲ್ಲಿ ಮುಂದೆ ಸಾಗಿದಂತೆ ಮಂಜು ಆವರಿಸಿಕೊಳ್ಳುತ್ತದೆ. ಇದು ರೈಲು ಪ್ರಯಾಣದ ರೋಚಕತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Gruha Lakshmi Scheme: ʼಗೃಹಲಕ್ಷ್ಮಿʼ ಹಣ ಬರದಿದ್ರೆ ಇಂದೇ ಈ ಕೆಲಸಗಳನ್ನು ಮಾಡಿ!
ದೇಶದ ಅತ್ಯಂತ ನಿಧಾನವಾದ ರೈಲು :
ದೇಶದ ಅತ್ಯಂತ ನಿಧಾನಗತಿಯ ರೈಲಿನಲ್ಲಿ ಜನರು ಸಂತೋಷದಿಂದ ಕುಳಿತು ಪ್ರಯಾಣವನ್ನು ಆನಂದಿಸುತ್ತಾರೆ.ಯುನೆಸ್ಕೋ ಈ ರೈಲನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದೆ.ಸುಂದರವಾದ ರಸ್ತೆಗಳು, ಬೆಟ್ಟಗಳು ಮತ್ತು ಕಾಡುಗಳ ಮೂಲಕ ಹಾದುಹೋಗುವ ರೈಲು ಪ್ರಯಾಣಿಕರಿಗೆ ನೈಜ ಪ್ರಕೃತಿಯ ಸೌಂದರ್ಯವನ್ನು ಪರಿಚಯಿಸುತ್ತದೆ.
ಭಾರತೀಯ ರೈಲ್ವೆ ನಿಧಾನಗತಿಯ ರೈಲು: ಭಾರತದಲ್ಲಿ ಬುಲೆಟ್ ರೈಲು ಓಡಿಸುವ ಕೆಲಸ ವೇಗವಾಗಿ ನಡೆಯುತ್ತಿದೆ.2026ರಿಂದ ಬುಲೆಟ್ ರೈಲು ಹಳಿಗಳ ಮೇಲೆ ಓಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ. ಒಂದೆಡೆ ರೈಲುಗಳ ವೇಗ ಹೆಚ್ಚಿಸುವ ಕೆಲಸ ನಡೆಯುತ್ತಿದ್ದರೆ ಮತ್ತೊಂದೆಡೆ ನಿಧಾನವಾಗಿ ಸಾಗುವ ಈ ರೈಲಿನ ಸಂಚಾರಕ್ಕೂ ಜನರು ಮುಗಿ ಬೀಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.