Bank Loan: ಸಾಲ ಪಡೆಯುವ ನಿಯಮಗಳನ್ನು ಬದಲಾಯಿಸಿದ RBI ! ಗ್ರಾಹಕರಿಗೆ ನೇರ ಲಾಭ

Microfinance Lenders Should Not Charge High Interest: ಕೆಲವು ಶರತ್ತುಗಳ ಆಧಾರದ ಮೇಲೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (Microfinance Institutions) ಸಾಲದ ಮೇಲಿನ ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿ ದರವನ್ನು (Inerest Rates) ವಸೂಲಿ ಮಾಡುವಂತಿಲ್ಲ. ಏಕೆಂದರೆ ಈ ಶುಲ್ಕ ಹಾಗೂ ದರಗಳು ಕೇಂದ್ರೀಯ ಬ್ಯಾಂಕ್ (RBI) ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು ಭಾರತೀಯ ರಿಸರ್ವ ಬ್ಯಾಂಕ್ (RBI Policy) ಹೇಳಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ,  

Written by - Nitin Tabib | Last Updated : Mar 15, 2022, 04:52 PM IST
  • ಸಾಲಕ್ಕೆ ಸಂಬಂಧಿಸಿದಂತೆ ಆರ್‌ಬಿಐನ ಹೊಸ ಮಾರ್ಗಸೂಚಿಗಳು
  • ಕಂಪನಿಗಳು ಗ್ರಾಹಕರಿಗೆ ಮನಬಂದಂತೆ ಬಡ್ಡಿಯನ್ನು ವಿಧಿಸುವಂತಿಲ್ಲ
  • ಸಾಲ ಒಪ್ಪಂದಗಳು ಸುಲಭ ಭಾಷೆಯಲ್ಲಿರಬೇಕು ಎಂದ RBI
Bank Loan: ಸಾಲ ಪಡೆಯುವ ನಿಯಮಗಳನ್ನು ಬದಲಾಯಿಸಿದ RBI ! ಗ್ರಾಹಕರಿಗೆ ನೇರ ಲಾಭ title=
Microfinance Lenders Should Not Charge High Interest (File Photo)

ನವದೆಹಲಿ: RBI Policy - ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದ ಮತ್ತು ಪಡೆಯಲು ಬಯಸುವ ಗ್ರಾಹಕರಿಗೆ RBI ಭಾರಿ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಹೌದು, ಮೈಕ್ರೋಫೈನಾನ್ಸ್ ಕಂಪನಿಗಳು ತಮ್ಮ ಗ್ರಾಹಕರಿಂದ ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುವ ಹಾಗಿಲ್ಲ. ಷರತ್ತುಗಳ ಆಧಾರದ ಮೇಲೆ ಮೈಕ್ರೋಫೈನಾನ್ಸ್ ಕಂಪನಿಗಳು ಬಡ್ಡಿ ದರಗಳನ್ನು ನಿಗದಿಪಡಿಸಬಹುದು. ಆದರೆ, ಗ್ರಾಹಕರಿಂದ ಹೆಚ್ಚಿನ ಬಡ್ಡಿದರವನ್ನು ಪಡೆಯುವಂತಿಲ್ಲ. ಏಕೆಂದರೆ, ಈ ಶುಲ್ಕಗಳು ಮತ್ತು ದರಗಳು ಕೇಂದ್ರೀಯ ಬ್ಯಾಂಕ್ ನ ನಿಗಾ ವ್ಯಾಪ್ತಿಗೆ ಒಳಪಡುತ್ತವೆ ಎಂದು RBI ಹೇಳಿದೆ.

ಯಾವ ಗ್ರಾಹಕರ ವಾರ್ಷಿಕ ಆದಾಯ ಮೂರು ಲಕ್ಷ ರೂ.ಗಳವರೆಗೆ ಇದೆಯೋ, ಆ ಕುಟುಂಬಗಳಿಗೆ ಯಾವುದೇ ಖಾತರಿಯಿಲ್ಲದೆ ಸಾಲವನ್ನು ನೀಡಬೇಕು ಎಂದು RBI ಈ ಕಂಪನಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಮೊದಲು ಈ ಸಾಲದ ಮಿತಿ ಗ್ರಾಮೀಣ ಸಾಲದಾತರಿಗೆ 1.2 ಲಕ್ಷ ಮತ್ತು ನಗರ ಸಾಲದಾತರಿಗೆ 2 ಲಕ್ಷ ರೂ. ಆಗಿತ್ತು. ಆರ್‌ಬಿಐನ ಈ ಹೊಸ ನಿಯಮವು ಏಪ್ರಿಲ್ 1, 2022 ರಿಂದ ಅನ್ವಯಿಸಲಿದೆ.

ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುವ ಹಾಗಿಲ್ಲ
ಆರ್.ಬಿ.ಐ ಜಾರಿಗೊಳಿಸಿರುವ ಮಾರ್ಗಸೂಚಿಗಳ ಪ್ರಕಾರ, 'ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಕ್ಕೆ ಸಂಬಂಧಿಸಿದ ಶುಲ್ಕಗಳ ಮೇಲೆ ಮಿತಿಯನ್ನು ನಿಗದಿಪಡಿಸಬೇಕಾಗುತ್ತದೆ. ಅಂದರೆ, ಈ ಕಂಪನಿಗಳು ಗ್ರಾಹಕರಿಂದ ಅನಿಯಂತ್ರಿತ ಬಡ್ಡಿಯನ್ನು ವಿಧಿಸುವಂತಿಲ್ಲ. ಇದರೊಂದಿಗೆ, ಎಲ್ಲಾ ನಿಯಮಿತ ಘಟಕಗಳು, ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲ್ಪಟ್ಟ ನೀತಿಯನ್ನು ಜಾರಿಗೊಳಿಸಬೇಕು. ಇದರಲ್ಲಿ, ಮೈಕ್ರೋ ಫೈನಾನ್ಸ್ ಸಾಲದ ಮೊತ್ತ, ಕವರ್, ಬಡ್ಡಿದರದ ಸೀಲಿಂಗ್ ಮತ್ತು ಇತರ ಎಲ್ಲಾ ಶುಲ್ಕಗಳ ಬಗ್ಗೆ ಸ್ಪಷ್ಟತೆಯನ್ನು ತರಬೇಕಾಗಲಿದೆ.

ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಡಬಲ್ ಬೋನಸ್..! 23.29% ವೇತನ ಹೆಚ್ಚಳ, ನಿವೃತ್ತಿ ವಯಸ್ಸು 62 ಕ್ಕೆ ಏರಿಕೆ

ಇಂತಹ ಪರಿಸ್ಥಿತಿಯಲ್ಲಿ ದಂಡ ಬೀಳುವುದಿಲ್ಲ
ನಿಗದಿತ ಅವಧಿಗಿಂತ ಮೊದಲು ಸಾಲವನ್ನು ಮರುಪಾವತಿಸುವ ಗ್ರಾಹಕರಿಗೆ RBI ತನ್ನ ಮಾರ್ಗಸೂಚಿಗಳಲ್ಲಿ, 'ಪ್ರತಿ ನಿಯಮಿತ ಘಟಕವು ಸಂಭಾವ್ಯ ಸಾಲಗಾರನ ಬಗ್ಗೆ, ಬೆಲೆ-ಸಂಬಂಧಿತ ಮಾಹಿತಿಯನ್ನು ಫ್ಯಾಕ್ಟ್‌ಶೀಟ್ ರೂಪದಲ್ಲಿ ಒದಗಿಸಬೇಕಾಗುತ್ತದೆ. ಸಾಲಗಾರನು ತನ್ನ ಸಾಲವನ್ನು ಅವಧಿಗೂ ಮುನ್ನ ಮರುಪಾವತಿಸಲು ಬಯಸಿದರೆ, ಆತನ ಮೇಲೆ ಯಾವುದೇ ದಂಡವನ್ನು ವಿಧಿಸಬಾರದು. ಕಂತು ಪಾವತಿಯಲ್ಲಿ ವಿಳಂಬವಾದರೆ, ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಹಕರ ಮೇಲೆ ದಂಡವನ್ನು ವಿಧಿಸಬಹುದು. ಆದರೆ ಅದು ಸಂಪೂರ್ಣ ಸಾಲದ ಮೊತ್ತಕ್ಕೆ ಅಲ್ಲ ಮತ್ತು ಕೇವಲ ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ಸೀಮಿತವಾಗಿರಬೇಕು' ಎಂದು ಹೇಳಿದೆ.

ಇದನ್ನೂ ಓದಿ-Aadhaar Card: ಆಧಾರ್ ಕಾರ್ಡ್ ಅನ್ನು ಲಾಕ್-ಅನ್‌ಲಾಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಸಾಲ ಒಪ್ಪಂದಗಳು ಸರಳ ಭಾಷೆಯಲ್ಲಿರಲಿ
ಇದಲ್ಲದೆ, ಸಾಲಗಾರನು ಸಾಲವನ್ನು ತೆಗೆದುಕೊಂಡಿದ್ದರೆ, ಮೈಕ್ರೋಫೈನಾನ್ಸ್ ಕಂಪನಿಗಳು ಅವನ ಮಾಸಿಕ ಆದಾಯದ ಗರಿಷ್ಠ ಶೇ.50 ರಷ್ಟು ಹಣವನ್ನು ಮಾತ್ರ ಸಾಲ ಮರುಪಾವತಿಗಾಗಿ ನಿಗದಿಪಡಿಸಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಗ್ರಾಹಕರ ನಡುವಿನ ಒಪ್ಪಂದವು ಸಾಲಗಾರನಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿರಬೇಕು ಎಂದು RBI ಹೇಳಿದೆ.

ಇದನ್ನೂ ಓದಿ-Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News