Children ticket in Train : ಬದಲಾಗಿದೆ ರೈಲ್ವೆ ನಿಯಮ ! ಮಕ್ಕಳೊಂದಿಗೆ ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಿ

Railway Rules on children ticket : ಮಕ್ಕಳ ಟಿಕೆಟ್‌ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮ ನಿಮಗೆ ತಿಳಿದಿರಬೇಕು. 

Written by - Ranjitha R K | Last Updated : Jan 12, 2024, 10:20 AM IST
  • 5 ವರ್ಷದೊಳಗಿನ ಮಕ್ಕಳು ಉಚಿತ ಪ್ರಯಾಣ
  • ಭಾರತಿಯ ರೈಲ್ವೆ ನಿಯಮ ಏನು ಹೇಳುತ್ತದೆ ?
  • 12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯಿಸುತ್ತದೆ ಈ ನಿಯಮ
Children ticket in Train : ಬದಲಾಗಿದೆ ರೈಲ್ವೆ ನಿಯಮ ! ಮಕ್ಕಳೊಂದಿಗೆ ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಿ  title=

ಬೆಂಗಳೂರು : ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ.ದೂರದ ಪ್ರಯಾಣಕ್ಕಾಗಿ ಜನರು ರೈಲ್ವೆಯನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ರೈಲಿನಲ್ಲಿ ಪ್ರಯಾಣಿಸುವುದು ಆರಾಮದಾಯಕವಾಗಿರುತ್ತದೆ ಎನ್ನುವ ಕಾರಣಕ್ಕೆ ಬಹುತೇಕರ ಆಯ್ಕೆ ರೈಲು ಆಗಿರುತ್ತದೆ. ವಯಸ್ಸಾದವರು, ಮಕ್ಕಳು ಜೊತೆಗಿದ್ದರೆ ತ್ರೈಲು ಪ್ರಯಾಣ ಇನ್ನೂ ಸುಲಭ. ತನ್ನ ಪ್ರಯಾಣಿಕ ಅನುಕೂಲಕ್ಕಾಗಿ ರೈಲ್ವೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.ಮಕ್ಕಳ ಟಿಕೆಟ್‌ ರಿಸರ್ವೇಶನ್ ಬಗ್ಗೆಯೂ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. 

5 ವರ್ಷದೊಳಗಿನ ಮಕ್ಕಳು ಉಚಿತ ಪ್ರಯಾಣ : 
1 ವರ್ಷದಿಂದ 4 ವರ್ಷದೊಳಗಿನ ಮಕ್ಕಳು ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದರೆ  ಅವರಿಗೆ ಟಿಕೆಟ್ ಬುಕ್ ಮಾಡುವ ಅಗತ್ಯವಿಲ್ಲ. 5 ವರ್ಷದೊಳಗಿನ ಮಕ್ಕಳು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು. ಅಂದರೆ ಅವರ ಪ್ರಯಾಣ ಉಚಿತ. ಆದರೆ, ಜನರ ಬೇಡಿಕೆಯ ಮೇರೆಗೆ, ರೈಲ್ವೆಯು ಆಗಸ್ಟ್ 2022 ರಲ್ಲಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅದರಂತೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು ನಿಜ, ಆದರೆ ಅವರಿಗೆ  ಪ್ರತ್ಯೇಕ ಸೀಟು ಸಿಗುವುದಿಲ್ಲ. ಒಂದು ವೇಳೆ ತಮ್ಮ ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಬೇಕು ಎಂದಿದ್ದರೆ ಪೋಷಕರುಅದಕ್ಕೆ ಪೂರ್ಣ ಪಾವತಿಯನ್ನು ಮಾಡಬೇಕಾಗುತ್ತದೆ. 

ಇದನ್ನೂ ಓದಿ : ಭಾರತದ ಆರ್ಥಿಕತೆಯಲ್ಲಿ 'ದೇವರ' ಪಾತ್ರ.. ದೇಗುಲಗಳಿಂದಲೇ ಪ್ರತಿ ವರ್ಷ ಬರುತ್ತೆ ಕೋಟಿಗಟ್ಟಲೆ ಆದಾಯ!

ಭಾರತಿಯ ರೈಲ್ವೆ ನಿಯಮ ಏನು ಹೇಳುತ್ತದೆ ? : 
"06.03.2020 ರ ರೈಲ್ವೆ ಸಚಿವಾಲಯದ ಸುತ್ತೋಲೆಯ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ, ಪ್ರತ್ಯೇಕ ಬರ್ತ್ ಅಥವಾ ಆಸನ  ಒದಗಿಸಲಾಗುವುದಿಲ್ಲ. ಆದ್ದರಿಂದ, ಪ್ರತ್ಯೇಕ ಬರ್ತ್  ಬೇಡ ಎಂದಾದರೆ ಈ ಮಕ್ಕಳಿಗೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಬರ್ತ್/ಸೀಟ್ ಅಗತ್ಯವಿದ್ದರೆ, ಆ ಸಂದರ್ಭದಲ್ಲಿ  ಪೂರ್ಣ ಶುಲ್ಕದಲ್ಲಿ ವಿಧಿಸಲಾಗುತ್ತದೆ.

12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯಿಸುತ್ತದೆ ಈ ನಿಯಮ : 
5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಸೀಟು ಬೇಡ ಎಂದಾದರೂ  ಆ ಮಗುವಿಗೆ ನೀವು ಟಿಕೆಟ್ ದರದ ಅರ್ಧದಷ್ಟು ಪಾವತಿಸಬೇಕಾಗುತ್ತದೆ. ಮಗುವು ತನ್ನ ಪೋಷಕರ ಸೀಟಿನಲ್ಲಿ ಕುಳಿತು ಪ್ರಯಾಣಿಸಬಹುದು. 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಆಸನವನ್ನು ರಿಸರ್ವ್ ಮಾಡಿದ್ದರೆ, ಪೂರ್ಣ ಟಿಕೆಟ್ ದರವನ್ನು ವಿಧಿಸಲಾಗುತ್ತದೆ.  

ಇದನ್ನೂ ಓದಿ : 1,799 ರೂಪಾಯಿಯಲ್ಲಿ ವಿಮಾನಯಾನ !Vistara-Indigo ಪ್ರಯಾಣಿಕರಿಗೆ ನೀಡುತ್ತಿದೆ ಭಾರೀ ಆಫರ್

ಈ ಮಧ್ಯೆ, 10 ಕೋಟಿಗೂ ಹೆಚ್ಚು ಮಕ್ಕಳು ಈಗ ಪ್ರತ್ಯೇಕ ಬರ್ತ್ ಅಥವಾ ಆಸನವನ್ನು ಆರಿಸಿಕೊಂಡಿದ್ದಾರೆ. ಸಂಪೂರ್ಣ ಶುಲ್ಕವನ್ನು ಪಾವತಿಸಿ, ಪ್ರಯಾಣ ಬೆಳೆಸಿದ್ದಾರೆ. ರೈಲ್ವೇಯಲ್ಲಿ ಪ್ರಯಾಣಿಸುವ ಶೇಕಡ 70 ರಷ್ಟು ಮಕ್ಕಳು ತಮ್ಮ ಪೋಷಕರು ಸಂಪೂರ್ಣ ಪ್ರಯಾಣ ದರವನ್ನು ಪಾವತಿಸಲು ಮತ್ತು ಬರ್ತ್ ಬುಕ್ ಮಾಡಲು ಬಯಸುತ್ತಾರೆ ಎಂದು RTI ಬಹಿರಂಗಪಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News