PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಸರ್ಕಾರವು PM ಕಿಸಾನ್ FPO ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಫಾರ್ಮರ್ಸ್ ಪ್ರೋಡುಸೆರ್ ಆರ್ಗನೈಸೆಶನ್ ಗೆ 15 ಲಕ್ಷ ರೂ.ಗಳನ್ನು ನೀಡಲಿದೆ.

Written by - Ranjitha R K | Last Updated : Aug 18, 2021, 07:11 PM IST
  • ಸರ್ಕಾರವು ರೈತರಿಗೆ ನೀಡಲಿದೆ 15 ಲಕ್ಷ ರೂ. ಗಳ ಸಹಾಯ
  • ಈ ಸರ್ಕಾರಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
  • 15 ಲಕ್ಷವನ್ನು ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ
PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು  ಹೇಗೆ ತಿಳಿಯಿರಿ title=
ಸರ್ಕಾರವು ರೈತರಿಗೆ ನೀಡಲಿದೆ 15 ಲಕ್ಷ ರೂ. ಗಳ ಸಹಾಯ (file photo)

ನವದೆಹಲಿ : PM Kisan FPO Yojana: ಕೇಂದ್ರ ಸರ್ಕಾರವು ರೈತರಿಗಾಗಿ ಒಂದರ ನಂತರ ಒಂದರಂತೆ ಯೋಜನೆಗಳನ್ನು ತರುತ್ತಿದೆ. ಇದೀಗ ಕೃಷಿಯನ್ನು ದೊಡ್ಡ ಉದ್ಯಮವಾಗಿಸಲು, ಸರ್ಕಾರವು (Central Government) ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಲು ಹೊರಟಿದೆ. ಹೊಸ ಕೃಷಿ ಉದ್ಯಮ ಆರಂಭಿಸಲು ಸರ್ಕಾರವು ರೈತರಿಗೆ 15 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ. 

15 ಲಕ್ಷ ಪಡೆಯುವುದು ಹೇಗೆ ?
ಸರ್ಕಾರವು PM ಕಿಸಾನ್ FPO ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಫಾರ್ಮರ್ಸ್ ಪ್ರೋಡುಸೆರ್ ಆರ್ಗನೈಸೆಶನ್ ಗೆ 15 ಲಕ್ಷ ರೂ.ಗಳನ್ನು ನೀಡಲಿದೆ.  ಈ ಯೋಜನೆ ಮೂಲಕ ದೇಶಾದ್ಯಂತ ರೈತರಿಗೆ ಹೊಸ ಕೃಷಿ ಉದ್ಯಮ ಆರಂಭಿಸಲು ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು, 11 ರೈತರು (farmers) ಒಟ್ಟಾಗಿ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರಚಿಸಬೇಕು. ಹೀಗೆ ಮಾಡುವುದರಿಂದ ರೈತರಿಗೆ ಕೃಷಿ ಉಪಕರಣಗಳು, ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ಹೆಚ್ಚು ಸಹಾಯವಾಗಲಿದೆ. 

ಇದನ್ನೂ ಓದಿ :  Bank Facility: ಖಾತೆಯಲ್ಲಿ Zero Balance ಇದ್ದರೂ ಕೂಡ ನೀವು ನಿಮ್ಮ ಸಂಬಳದ 3 ಪಟ್ಟು ಹಣ ಹಿಂಪಡೆಯಬಹುದು ಗೊತ್ತಾ?

ಯೋಜನೆಯ ಉದ್ದೇಶ :
ಯೋಜನೆಯ ಪ್ರಯೋಜನಗಳನ್ನು ರೈತರು ನೇರವಾಗಿ ಪಡೆಯುವಂತಾಗಲು ಸರ್ಕಾರ (Modi government) ನಿರಂತರವಾಗಿ ಪ್ರಯತ್ನಿಸುತ್ತಿದೆ.  ರೈತರಿಗೆ ನೇರ ಲಾಭ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯ ನಂತರ ರೈತರು ಯಾವುದೇ ಬ್ರೋಕರ್ ಗಳ ಬಳಿಗೆ ಹೋಗಬೇಕಾಗಿಲ್ಲ. ಈ ಯೋಜನೆಯಡಿ, ರೈತರಿಗೆ ನೀಡುವ ಹಣವನ್ನು ಮೂರು ವರ್ಷಗಳಲ್ಲಿ ಕಂತುಗಳಲ್ಲಿ ನೀಡಲಾಗುವುದು. ಇದಕ್ಕಾಗಿ, 2024 ರ ವೇಳೆಗೆ ಸರ್ಕಾರದಿಂದ 6885 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. 

ಅರ್ಜಿ ಸಲ್ಲಿಸುವುದು ಹೇಗೆ ? 
ಪಿಎಂ ಕಿಸಾನ್ ಎಫ್‌ಪಿಒ (PM Kisan FPO Yojana) ಯೋಜನೆಯ ಲಾಭ ಪಡೆಯಲು ರೈತರು ಸ್ವಲ್ಪ ಸಮಯ ಕಾಯಬೇಕು. ಸರ್ಕಾರ ಈ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ನೋಂದಣಿ ಪ್ರಕ್ರಿಯೆ ಆರಂಭವಾದ ತಕ್ಷಣ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸರ್ಕಾರದ ಪ್ರಕಾರ, ಶೀಘ್ರದಲ್ಲೇ ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗುವುದು.

ಇದನ್ನೂ ಓದಿ : NPS: ಪ್ರತಿನಿತ್ಯ ₹50 ಹೂಡಿಕೆ ಮಾಡಿ ನಿವೃತ್ತಿಯ ನಂತರ ಪಡೆಯಿರಿ ₹34 ಲಕ್ಷ : ಇದು ಹೂಡಿಕೆ ಮಾಡಲು ಉತ್ತಮ ಮಾರ್ಗ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News