ಅಕ್ಷಯ ತೃತೀಯದ ದಿನ ಎಲ್ಲಾ ಗ್ರಾಹಕರಿಗೂ ಉಚಿತ ಚಿನ್ನದ ಕಾಯಿನ್ ! ದುಬಾರಿ ದುನಿಯಾದಲ್ಲೊಂದು ಹೊಸ ಆಫರ್

Akshaya Tritiya 2023 Gold Offers: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ತನಿಷ್ಕ್, ಮಲಬಾರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗಾಗಿ ವಿಶೇಷ  ಆಫರ್ ನೀಡುತ್ತಿದೆ. ಈ ಮೂಲಕ ಉಚಿತ ಚಿನ್ನದ ಕಾಯಿನ್ ಪಡೆಯುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : Apr 19, 2023, 02:01 PM IST
  • ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಮಂಗಳಕರ
  • ಈ ದಿನ ಚಿನ್ನ ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎನ್ನುವುದು ನಂಬಿಕೆ
  • ತನಿಷ್ಕ್, ಮಲಬಾರ್ ನೀಡುತ್ತಿದೆ ವಿಶೇಷ ಆಫರ್
ಅಕ್ಷಯ ತೃತೀಯದ ದಿನ ಎಲ್ಲಾ ಗ್ರಾಹಕರಿಗೂ ಉಚಿತ ಚಿನ್ನದ ಕಾಯಿನ್ ! ದುಬಾರಿ ದುನಿಯಾದಲ್ಲೊಂದು ಹೊಸ ಆಫರ್  title=

Akshaya Tritiya 2023 Gold Offers : ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಈ ದಿನ ಚಿನ್ನ  ಖರೀದಿಸಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದು ಕೂಡಾ ಹೇಳಲಾಗುತ್ತದೆ. ಅದರಲ್ಲೂ ಈ ಶುಭ ದಿನದಂದು ಉಚಿತವಾಗಿ ಚಿನ್ನ ಸಿಕ್ಕರೆ ಹೇಗಿರುತ್ತದೆ? ಹೌದು, ಈ ವರ್ಷ ಅಕ್ಷರ ತೃತೀಯ ದಿನದಂದು ಉಚಿತ ಚಿನ್ನವನ್ನು ಪಡೆಯುವ ಅವಕಾಶವಿದೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ತನಿಷ್ಕ್, ಮಲಬಾರ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗಾಗಿ ವಿಶೇಷ  ಆಫರ್ ನೀಡುತ್ತಿದೆ. 

ತನಿಷ್ಕ್ ಕೂಡಾ ನೀಡುತ್ತಿದೆ ವಿಶೇಷ ಆಫರ್ :  
ತನಿಷ್ಕ್ ಈ ಬಾರಿ ಅಕ್ಷಯ ತೃತೀಯ ಸಂದರ್ಭದಲ್ಲಿ ಬಂಪರ್ ಡಿಸ್ಕೌಂಟ್ ನೀಡುತ್ತಿದೆ. ಇಲ್ಲಿ ಮೇಕಿಂಗ್ ಚಾರ್ಜ್‌ನಲ್ಲಿ ದೊಡ್ಡಮಟ್ಟದ ರಿಯಾಯಿತಿ ನೀಡಲಾಗುತ್ತದೆ. ಕಂಪನಿಯು ಚಿನ್ನ ಮತ್ತು ವಜ್ರದ ಆಭರಣಗಳ  ಮೇಕಿಂಗ್ ಚಾರ್ಜ್ ಮೇಲೆ 25% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಏಪ್ರಿಲ್ 14 ರಿಂದ ಏಪ್ರಿಲ್ 24 ರವರೆಗೆ ಈ ಆಫರ್ ನ ಲಾಭವನ್ನು ಪಡೆದುಕೊಳ್ಳಬಹುದು. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಏರಿಕೆ!

ಉಚಿತ ಗೋಲ್ಡ್ ಕಾಯಿನ್ ನೀಡುತ್ತಿದೆ ಮಲಬಾರ್ : 
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಈ ಅಕ್ಷಯ ತೃತೀಯದ ವಿಶೇಷ ಕೊಡುಗೆಯನ್ನು ತಂದಿದೆ. ಇದರ ಪ್ರಕಾರ ಉಚಿತ ಚಿನ್ನದ ನಾಣ್ಯವನ್ನು  ನೀಡಲಾಗುತ್ತದೆ. 30,000 ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿದರೆ, 100 mg ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯುವುದು ಸಾಧ್ಯವಾಗುತ್ತದೆ. ಈ ಆಫರ್ ನ ಲಾಭವನ್ನು  ಏಪ್ರಿಲ್ 30  ರವರೆಗೆ ಮಾತ್ರ ಪಡೆಯಬಹುದು. 

Senco Gold & Diamonds  :
Senco Gold & Diamonds ಅಕ್ಷಯ ತೃತೀಯದಂದು ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇದರೊಂದಿಗೆ, ನಿಮ್ಮ ಹಳೆಯ ಆಭರಣಗಳನ್ನು ಮಾರಾಟ ಮಾಡುವುದಾದರೆ ಅದರ ಮೇಲೆ 0%  ಡಿಡೆಕ್ಶನ್ ಫೀಸ್ ಇರುತ್ತದೆ.   

ಇದನ್ನೂ ಓದಿ : ಫ್ಲಾಟ್ ಖರೀದಿಸುವವರಿಗೆ ಸಿಹಿ ಸುದ್ದಿ : ಬಿಲ್ಡರ್-ಖರೀದಿದಾರರ ಮಾದರಿ ಒಪ್ಪಂದಕ್ಕೆ ಸಮಿತಿ ರಚನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News