ರೈತರಿಗೊಂದು ಸಿಹಿ ಸುದ್ದಿ.! eKYC ಮಾಡಿಸಿದರೆ ಸರ್ಕಾರ ನೀಡುವುದು 6,000 ರೂಪಾಯಿ.!

ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ರೈತರ ಬ್ಯಾಂಕ್ ಖಾತೆಗೆ ಮೂರು ಸಮಾನ ಕಂತುಗಳಲ್ಲಿ 2,000 ರೂಪಾಯಿಯನ್ನು ವರ್ಗಾಯಿಸಲಾಗುತ್ತದೆ. ಈ ಮೂಲಕ ವಾರ್ಷಿಕವಾಗಿ 6,000 ರೂಪಾಯಿಗಳನ್ನು ರೈತರ ಖಾತೆಗೆ ಹಾಕುವ ಮೂಲಕ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. 

Written by - Ranjitha R K | Last Updated : Dec 5, 2022, 02:08 PM IST
  • ಯೋಜನಗೆಳ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ಹಸ್ತವನ್ನು ಚಾಚುತ್ತಿದೆ.
  • ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡಾ ಒಂದು
  • ಮೂರು ಸಮಾನ ಕಂತುಗಳಲ್ಲಿ 2,000 ರೂಪಾಯಿಯನ್ನು ವರ್ಗಾಯಿಸಲಾಗುತ್ತದೆ.
ರೈತರಿಗೊಂದು ಸಿಹಿ ಸುದ್ದಿ.! eKYC ಮಾಡಿಸಿದರೆ ಸರ್ಕಾರ ನೀಡುವುದು 6,000   ರೂಪಾಯಿ.! title=
PM Kisan Scheme

ಬೆಂಗಳೂರು : ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ  ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನಗೆಳ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯ ಹಸ್ತವನ್ನು ಚಾಚುತ್ತಿದೆ.  ಇದರಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡಾ ಒಂದು. ಈ ಯೋಜನೆಯಡಿ ರೈತರಿಗೆ ಸರ್ಕಾರ,  ವಾರ್ಷಿಕವಾಗಿ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಆದರೆ, ಈ 6 ಸಾವಿರ ರೂಪಾಯಿ ರೈತರ ಖಾತೆ ಸೇರಬೇಕಾದರೆ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ. ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲಿಸದೆ ಹೋದರೆ ಸರ್ಕಾರದ ಹಣ ಖಾತೆ ಸೇರುವುದಿಲ್ಲ. 

ಪೂರ್ಣಗೊಳಿಸಬೇಕು EKYC ಪ್ರಕ್ರಿಯೆ :

ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ, ರೈತರ ಬ್ಯಾಂಕ್ ಖಾತೆಗೆ ಮೂರು ಸಮಾನ ಕಂತುಗಳಲ್ಲಿ 2,000 ರೂಪಾಯಿಯನ್ನು ವರ್ಗಾಯಿಸಲಾಗುತ್ತದೆ. ಈ ಮೂಲಕ ವಾರ್ಷಿಕವಾಗಿ 6,000 ರೂಪಾಯಿಗಳನ್ನು ರೈತರ ಖಾತೆಗೆ ಹಾಕುವ ಮೂಲಕ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಆದರೆ, ಸರ್ಕಾರ ನೀಡುವ ಈ ಸಹಾಯವನ್ನು ರೈತರು ಪಡೆಯಬೇಕಾದರೆ, ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ EKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. EKYC ಪ್ರಕ್ರಿಯೆ ಪೂರ್ಣಗೊಳಿಸಿದಾಗ  ಮಾತ್ರ  ರೈತರ ಖಾತೆಗೆ  ಆರು ಸಾವಿರ ರೂಪಾಯಿಯನ್ನು ಸರ್ಕಾರ ವರ್ಗಾಯಿಸುತ್ತದೆ. 

ಇದನ್ನೂ ಓದಿ : Vegetable Price Today: ತರಕಾರಿ ಬೆಲೆ ಮತ್ತೆ ಹೆಚ್ಚಳ!! ಈಗಲೇ ತಿಳಿಯಿರಿ ಇಂದಿನ ದರ ವಿವರ

eKYC ಮಾಡಿಸಿಕೊಳ್ಳುವುದು ಅವಶ್ಯಕ :
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಇಕೆವೈಸಿಯನ್ನು ಮಾಡಿಸಬೇಕಾದರೆ, ಕೆಲವು ಹಂತಗಳನ್ನು ಅನುಸರಿಸಬೇಕು.  ಈ ಹಂತಗಳನ್ನು ಅನುಸರಿಸಿಕೊಂಡು EKYC ಮಾಡಿದ ನಂತರವೇ ಪಿಎಂ  ಕಿಸಾನ್ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. 

PM ಕಿಸಾನ್ eKYC ಅನ್ನು ಈ ರೀತಿ ಅಪ್ಡೇಟ್ ಮಾಡಿ :
1.pmkisan.gov.in ಗೆ ಹೋಗಿ.
2.PM Kisan ekyc ಮೇಲೆ ಕ್ಲಿಕ್ ಮಾಡಿ.
3. ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
4. Search ಮೇಲೆ ಕ್ಲಿಕ್ ಮಾಡಿ.
5. ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆದರೆ ನೆನಪಿರಲಿ ಇಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಬೇಕು. 
6. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
7.OTP ಹಾಕಿ Submit ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ : Post Office: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 50 ರೂ. ಠೇವಣಿ ಮಾಡಿ 35 ಲಕ್ಷ ಪಡೆಯಿರಿ!

ಮತ್ತೊಂದೆಡೆ, ನೀವು ನೀಡಿದ ಮಾಹಿತಿಯು ಆಧಾರ್ ಕಾರ್ಡ್‌ನೊಂದಿಗೆ ಹೊಂದಾಣಿಕೆಯಾದರೆ, ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಯಶಸ್ವಿಯಾಗುತ್ತದೆ ಮತ್ತು ಕೆವೈಸಿ ಅಪ್‌ಡೇಟ್  ಮಾಡುವ ಪ್ರಕ್ರಿಯೆ ಮುಕ್ತಾಯವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News