Predictions for 2025 : ಬಲ್ಗೇರಿಯನ್ ಪ್ರವಾದಿ ಬಾಬಾ ವೆಂಗಾ ದಶಕಗಳ ಹಿಂದೆ ಮಾಡಿದ ಭವಿಷ್ಯವಾಣಿಗಳು ನಿಜ ಎನ್ನುವುದು ಸಾಬೀತಾಗುತ್ತಾ ಬಂದಿದೆ. ಬಾಬಾ ವೆಂಗಾ ಅವರು 2025ರ ವರ್ಷಕ್ಕೆ ಸಂಬಂಧಪಟ್ಟಂತೆ ಹಲವು ಭವಿಷ್ಯ ನುಡಿದಿದ್ದಾರೆ. ಈ ಬಾರಿಯೂ ಅವರ ಭವಿಷ್ಯ ನಿಜವಾದಲ್ಲಿ ಜಗತ್ತಿನ ವಿನಾಶಕ್ಕೆ ಕಾರಣವಾಗಬಹುದು. ಇವರ ಪ್ರಕಾರ 2025ರ ವರ್ಷ ಭಯಾನಕವಾಗಿರಲಿದೆ.
ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಗಳು ಯುರೋಪಿನ ನಾಶ, ಅಭೂತಪೂರ್ವ ವೈಜ್ಞಾನಿಕ ಪ್ರಗತಿ, ಟೆಲಿಪತಿಯ ಅಭಿವೃದ್ಧಿ, ಭೂಮಿಯ ಹೊರಗಿನ ಜೀವನ, ಜಾಗತಿಕ ಬಿಕ್ಕಟ್ಟು ಅಥವಾ ಅಪೋಕ್ಯಾಲಿಪ್ಸ್‌ನ ಆರಂಭವನ್ನು ಒಳಗೊಂಡಿವೆ.
ಇದನ್ನೂ ಓದಿ : ಈ ಭೂಮಿಯ ಮೇಲೆ ಮಳೆಯೇ ಆಗದ ಗ್ರಾಮವೊಂದಿದೆ. ಅಲ್ಲಿ ಈವರೆಗೂ ಹನಿ ಮಳೆ ಬಿದ್ದಿಲ್ಲ...! ಕಾರಣ ಕೇಳಿದರೆ ಶಾಕ್ ಆಗ್ತಿರಾ..!
2025 ರ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು :
ಯುರೋಪಿನ ವಿನಾಶ : ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ನಿಜವಾಗಿದ್ದರೆ ಯುರೋಪಿನಲ್ಲಿ ಭೀಕರ ಯುದ್ದ ಎದುರಾಗುತ್ತದೆ. ಇದರಿಂದದಾಗಿ ದೊಡ್ಡ ಮಟ್ಟದ ವಿನಾಶ ಉಂಟಾಗುತ್ತದೆ. ಈ ಯುದ್ದದಿಂದಾಗಿ ಜನಸಂಖ್ಯೆ ಕಡಿಮೆಯಾಗುತ್ತದೆ.
ಏಲಿಯನ್‌ಗಳೊಂದಿಗೆ ಸಂಭಾಷಣೆ : ಬಾಬಾ ವೆಂಗಾ ಪ್ರಕಾರ, 2025 ರಲ್ಲಿ, ಭೂಮಿಯ ಹೊರಗೆ ಸಂವಹನವನ್ನು ಸ್ಥಾಪಿಸುವಲ್ಲಿ ಮಾನವರು ಯಶಸ್ವಿಯಾಗಬಹುದು. ಅಂದರೆ ಹೊರಗಿನ ಗ್ರಹದ ಜೀವಿಗಳೊಂದಿಗೆ ಸಂವಹನ ಸಾಧ್ಯವಾಗಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಪ್ರಯೋಗಾಲಯದಲ್ಲಿ ಮಾನವ ಅಂಗಾಂಗಗಳನ್ನು ತಯಾರಿಸಲಾಗುವುದು : ವೈದ್ಯಕೀಯ ವಿಜ್ಞಾನದ ಬಗ್ಗೆ ಬಾಬಾ ವೆಂಗಾ ಅವರ ಭವಿಷ್ಯ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಹುದು. ಇದರ ಪ್ರಕಾರ, ಮಾನವ ಅಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದು. ಇದುವರೆಗೆ ಗುಣಪಡಿಸಲಾಗದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.
ವಿನಾಶದ ಆರಂಭ : ಬಾಬಾ ವೆಂಗಾ ಅವರ ಪ್ರಕಾರ, 2025 ರಲ್ಲಿ ಇಂತಹ ದೊಡ್ಡ ಅನಾಹುತಗಳು ಸಂಭವಿಸುತ್ತವೆ. ಅದು ಭೂಮಿಯನ್ನು ನಾಶಮಾಡುವ ವಿನಾಶಕ್ಕೆ ನಾಂದಿಯಾಗುತ್ತದೆ. ಮಾನವೀಯತೆಯು ಸಂಪೂರ್ಣವಾಗಿ ನಾಶವಾಗದಿದ್ದರೂ, ಅದರ ಅಂತ್ಯ ಪ್ರಾರಂಭವಾಗುತ್ತದೆ.
ಬಾಬಾ ವೆಂಗಾ ಯಾರು? :
ಬಾಬಾ ವಂಗಾ ಬಲ್ಗೇರಿಯಾದಲ್ಲಿ ಜನಿಸಿದ ಪ್ರಸಿದ್ಧ ಪ್ರವಾದಿಯಾಗಿದ್ದು, ಅವರು ಜನವರಿ 31, 1911 ರಂದು ಜನಿಸಿದರು. ಅವರು ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡರು. ನಂತರ ಅವರು ಮಾಡಿರುವ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಾ ಬಂತು. 9/11 ದಾಳಿ, ರಾಜಕುಮಾರಿ ಡಯಾನಾ ಸಾವು, ಎರಡನೇ ಮಹಾಯುದ್ಧ ಇವೆಲ್ಲವನ್ನೂ ಬಾಬ ವಂಗಾ ತನ್ನ ಭವಿಷ್ಯ ವಾಣಿಯಲ್ಲಿ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ