ಕುಖ್ಯಾತ ಅಲ್ ಕೈದಾ ಮುಖ್ಯಸ್ಥನ ಸಾವಿನ ಸುದ್ದಿ ಖಚಿತಪಡಿಸಿದ ಡೊನಾಲ್ಡ್ ಟ್ರಂಪ್

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ತಿಂಗಳು ಯೆಮನ್ ನಲ್ಲಿ ಅಮೆರಿಕಾದ ಸೇನೆ ನಡೆಸಿರುವ ಆಪರೇಷನ್ ನಲ್ಲಿ ಕುಖ್ಯಾತ ಉಗ್ರಸಂಘಟನೆಯಾಗಿರುವ ಅಲ್ ಕೈದಾ ಮುಖ್ಯಸ್ಥ ಕಾಸೀಮ್ ಅಲ್ ರೀಮೀಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ.

Last Updated : Feb 7, 2020, 08:26 PM IST
ಕುಖ್ಯಾತ ಅಲ್ ಕೈದಾ ಮುಖ್ಯಸ್ಥನ ಸಾವಿನ ಸುದ್ದಿ ಖಚಿತಪಡಿಸಿದ ಡೊನಾಲ್ಡ್ ಟ್ರಂಪ್ title=

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಧಿಕೃತ ಮಾಹಿತಿ ನೀಡಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ತಿಂಗಳು ಯೆಮನ್ ನಲ್ಲಿ ಅಮೆರಿಕಾದ ಸೇನೆ ನಡೆಸಿರುವ ಆಪರೇಷನ್ ನಲ್ಲಿ ಕುಖ್ಯಾತ ಉಗ್ರಸಂಘಟನೆಯಾಗಿರುವ ಅಲ್ ಕೈದಾ ಮುಖ್ಯಸ್ಥ ಕಾಸೀಮ್ ಅಲ್ ರೀಮೀಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ. ಕಾಸೀಮ್ 'ಅಲ್ ಕೈದಾ ಇನ್ ಅರಬ್ ಪೇನಿಂಸುಲಾ' ಸಂಘಟನೆಯ ಸಂಸ್ಥಾಪಕನಾಗಿದ್ದ. ಸುದ್ದಿ ಸಂಸ್ಥೆ  ಸಿಂಹುವಾ ಪ್ರಕಾರ, ವೈಟ್ ಹೌಸ್ ಗುರುವಾರ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಅಮೇರಿಕ ಯೆಮನ್ ನಲ್ಲಿ ಒಂದು ಉಗ್ರ ವಿರೋಧಿ ಅಭಿಯಾನ ನಡೆಸಿದ್ದು, ಇದರಲ್ಲಿ ಅರಬ್ ಪರ್ಯಾಯ ದ್ವೀಪದಲ್ಲಿ ಅಲ್ ಕೈದಾ ಸಂಸ್ಥಾಪಕನಾಗಿದ್ದ ಹಾಗೂ ಅಲ್ ಕೈದಾ ಮುಖ್ಯಸ್ಥ ಕಾಸೀಮ್ ಅಲ್ ರೀಮಿಯನ್ನು ಯಶಸ್ವಿಯಾಗಿ ಹತ್ಯೆಗೈಯಲಾಗಿದೆ ಎಂದಿದ್ದಾರೆ.

ಸುದ್ದಿ ಸಂಸ್ಥೆ ಏಫೆನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಅಲ್ ರೀಮಿ 1990ರ ದಶಕದಿಂದ ಒಸಾಮಾ ಬಿನ್ ಲಾಡೆನ್ ಗಾಗಿ ಅಫ್ಘಾನಿಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಆತನ ನಿರೀಕ್ಷಣೆಯ ಅಡಿ ಅಲ್ ಕೈದಾ ಸಂಘಟನೆ ಯೆಮನ್ ನಲ್ಲಿ ನಾಗರಿಕರ ವಿರುದ್ಧ ಕಾರಣವಿಲ್ಲದೆ ಹಿಂಸಾಚಾರ ನಡೆಸುತ್ತಿದ್ದ ಹಾಗೂ ಅಮೇರಿಕಾ ಮತ್ತು ಅಮೆರಿಕಾದ ಸೇನೆಯ ವಿರುದ್ಧ ಹಲವು ಹಲ್ಲೆಗಳನ್ನು ನಡೆಸುವುದು ಹಾಗೂ ಹಲ್ಲೆ ನಡೆಸಲು ಪ್ರೇರೇಪಣೆ ನೀಡುವ ಕೆಲಸದಲ್ಲಿ ತೊಡಗಿದ್ದ ಎಂದು ಟ್ರಂಪ್ ಹೇಳಿದ್ದಾರೆ. ಕಾಸಿಮ್ ಸಾವು ಅಲ್ ಕೈದಾ ಸಂಘಟನೆಯ ಶಾಖೆ ಹಾಗೂ ಅದರ ಜಾಗತಿಕ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು ಎನ್ನಲಾಗುತ್ತಿದೆ. ಈ ಕುರಿತು ಮಾತನಾಡಿರುವ ಟ್ರಂಪ್, ಅಮೇರಿಕ, ತನ್ನ ಹಿತ ಹಾಗೂ ತನ್ನ ಸಹಯೋಗ ಬಯಸುವವರನ್ನು ಆತನ ಸಾವಿನ ಪಶ್ಚಾತ ಸುರಕ್ಷಿತರಾಗಿದ್ದಾರೆ ಎಂದಿದ್ದಾರೆ. ನಮಗೆ ಹಾನಿ ತಲುಪಿಸುವ ಉದ್ದೇಶ ಹೊಂದಿದ ಉಗ್ರರನ್ನು ಟ್ರ್ಯಾಕ್ ಮಾಡಿ ಅವರನ್ನು ಮಟ್ಟಹಾಕಿ ಅಮೇರಿಕಾದ ನಾಗರಿಕರನ್ನು ರಕ್ಷಿಸುವುದನ್ನು ನಾವು ಮುಂದೆಯೂ ಕೂಡ ಮುಂದುವರೆಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

ಜನವರಿಯಲ್ಲಿ ನಡೆಸಲಾದ ವಾಯುದಾಳಿಯಲ್ಲಿ ಆತನನ್ನು ಹತ್ಯೆಗೈಯಲಾಗಿದೆ
41 ವರ್ಷ ವಯಸ್ಸಿನ ಕಾಸೀಮ್ ಅಲ್ ರೀಮಿ ಸಾವು ಸಂಘಟನೆಗೆ ನೀಡಿದ ಅತಿ ದೊಡ್ಡ ಪೆಟ್ಟು ಎಂದೇ ಹೇಳಲಾಗುತ್ತಿದೆ. ಅಲ್ ಕೈದಾ ಸಂಘಟನೆಯ ಈ ಶಾಖೆಯನ್ನು ಬಲಿಷ್ಠ ಮತ್ತು ಕುಖ್ಯಾತ ಶಾಖೆಗಳಲ್ಲಿ ಒಂದು ಎಂದು ಹೇಳಲಾಗುತ್ತಿತ್ತು. ಏಕೆಂದರೆ ಈ ಶಾಖೆ ಯೆಮನ್ ನಲ್ಲಿ ಗಡಿಯಾಚೆ ಹೋಗಿ ಹಲ್ಲೆಗಳನ್ನು ನಡೆಸಿತ್ತು. ಕಳೆದ ವಾರ ಈ ಕುರಿತು ವರದಿ ಪ್ರಕಟಿಸಿದ್ದ ಅಮೆರಿಕಾದ ಖ್ಯಾತ ಪತ್ರಿಕೆ ದಿ ನ್ಯೂಯಾರ್ಕ್ ಟೈಮ್ಸ್, ಅಮೆರಿಕಾದ ಅಧಿಕಾರಿಗಳ ಪ್ರಕಾರ ವಾಯು ಬೇಹುಗಾರಿಕೆ ಹಾಗೂ ಇತರೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜನವರಿಯಲ್ಲಿ ವಾಯುದಾಳಿ ನಡೆಸಿ ಸಂಘಟನೆಯ ಮುಖ್ಯಸ್ಥನನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದರು ಎಂದಿತ್ತು.

Trending News