ಶ್ರೀಮಂತ ಕುಟುಂಬದಲ್ಲಿ ಬೆಳೆದು.. ನಟಿಯಾಗಿ ಮೆರೆದು.. ಹೊಟ್ಟೆ ಪಾಡಿಗಾಗಿ ಮನೆ ಕೆಲಸ ಮಾಡಿದ ಈ ಖ್ಯಾತ ನಟಿ ನಿಮಗೆ ನೆನಪಿದ್ದಾರಾ..?

shashikala sehgal: ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಹಚ್ಚೆ ಹಾಕುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ಸಿನಿಮಾಗೆ ಒಂದು ಸಣ್ಣ ಅವಕಾಶ ಪಡೆಯೋಕೆ ಸಾಕಷ್ಟು ಕಷ್ಟ ಪಡಬೇಕು. ಹೀಗೆ ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ನಟಿ 25 ಕೂಲಿಗೆ ಮನೆ ಕೆಲಸ ಮಾಡಿದ್ದರು. ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ..  

Written by - Zee Kannada News Desk | Last Updated : Dec 21, 2024, 12:17 PM IST
  • ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಹಚ್ಚೆ ಹಾಕುವುದು ಅಷ್ಟೊಂದು ಸುಲಭದ ಕೆಲಸವಲ್ಲ.
  • ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದ್ದರು.
  • ಈ ರೀತಿ ಒಬ್ಬರ ಮನೆಯಲ್ಲಿ ಕೆಲಸ ಮಾಡಲು ನಟಿ 25 ರೂ. ಕೂಲಿ ಪಡೆಯುತ್ತಿದ್ದರು.
ಶ್ರೀಮಂತ ಕುಟುಂಬದಲ್ಲಿ ಬೆಳೆದು.. ನಟಿಯಾಗಿ ಮೆರೆದು.. ಹೊಟ್ಟೆ ಪಾಡಿಗಾಗಿ ಮನೆ ಕೆಲಸ ಮಾಡಿದ ಈ ಖ್ಯಾತ ನಟಿ ನಿಮಗೆ ನೆನಪಿದ್ದಾರಾ..? title=

shashikala sehgal: ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಹಚ್ಚೆ ಹಾಕುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ಸಿನಿಮಾಗೆ ಒಂದು ಸಣ್ಣ ಅವಕಾಶ ಪಡೆಯೋಕೆ ಸಾಕಷ್ಟು ಕಷ್ಟ ಪಡಬೇಕು. ಹೀಗೆ ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯನ್ನು ಆಳಿದ ನಟಿ 25 ಕೂಲಿಗೆ ಮನೆ ಕೆಲಸ ಮಾಡಿದ್ದರು. ಅಷ್ಟಕ್ಕೂ ಆ ನಟಿ ಯಾರು? ತಿಳಿಯಲು ಮುಂದೆ ಓದಿ..

1945 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈ ನಟಿ, ಬಾಲಿವುಡ್‌ನಲ್ಲಿ ತಮ್ಮ ನಟನೆಯ ಮೂಲಕ ಕಮಾಲ್‌ ಮಾಡಿದ್ದರು. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದ್ದರು. ಆದರೆ, ನಟಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. 

ಅಷ್ಟಕ್ಕೂ, ನಾವು ಇಂದು ಹೇಳಲು ಹೊರಟಿರುವ ನಟಿಯ ಹೆಸರು ಶಶಿಕಲಾ. ನಟಿ ಶಶಿಕಲಾ ಅವರು ಬೆಳೆದು ಬಂದ ಹಾದಿ ಅಷ್ಟು ಸುಲಭವೇನು ಇರಲಿಲ್ಲ. ನಟಿ ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆ, ಮನೆಕೆಲಸ ಮಾಡುತ್ತಿದ್ದರು. ಇನ್ನೊಬ್ಬರ ಮನೆಗೆ ಹೋಗುವುದು ವರ ಮನೆಯಲ್ಲಿ ಪಾತ್ರೆ ತೊಳೆದು, ಕಸ ಗುಡಿಸಿ, ಮನೆಯನ್ನು ಒರೆಸುವುದು ಇವರ ಕೆಲವಾಗಿತ್ತು.ಈ ರೀತಿ ಒಬ್ಬರ ಮನೆಯಲ್ಲಿ ಕೆಲಸ ಮಾಡಲು ನಟಿ 25 ರೂ. ಕೂಲಿ ಪಡೆಯುತ್ತಿದ್ದರು. 

ಶಶಿಕಲಾ ಬಾಲಿವುಡ್‌ನಲ್ಲಿ ಅತ್ತೆ ಪಾತ್ರಗಳನ್ನು ಮಾಡುತ್ತಾ ಜನಮನಗಳನ್ನು ಗೆದ್ದಿದ್ದರು. ಅಲ್ಪಾವಧಿಯಲ್ಲಿ ಅದ್ಭುತವಾದ ಸಿನಿಮಾಗಳನ್ನು ಮಾಡಿ ಸೈ ಎನಸಿಕೊಂಡಿದ್ದರು. ಶಶಿಕಲಾ ಅವರು ತಮಗೆ 69 ವರ್ಷ ವಯಸ್ಸಾಗುವವರೆಗೂ, ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದರು. ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟ ಪಟ್ಟ ಅವರು, ನಂತರದ ದಿನಗಳಲ್ಲಿ ತಮ್ಮ ಆಕ್ಟಿಂಗ್‌ನ ಮೂಲಕ ಇಂಡಸ್ಟ್ರಿಯಲ್ಲಿ ತಮ್ಮ ಹೆಜ್ಜೆ ಗುರುತನ್ನು ಹಚ್ಚೆ ಹಾಕಿದರು.

1936 ರಿಂದ 2005 ರವರೆಗಿನ ಚಲನಚಿತ್ರಗಳಲ್ಲಿ ನಟಿ ಶಶಿಕಲಾ ಅವರು ನಟಿಸಿದ್ದರು. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ ಅವರು, ನಂತರದ ದಿನಗಳಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಸಿನಿಮಾದಲ್ಲಿ ಸಕ್ಸಸ್‌ ಕಂಡ ನಂತರ ಅವರು ಒಂದಾದ ಮೇಲೊಂದರಂತೆ ಗೆಲವನ್ನು ಸಾಧಿಸುತ್ತ ಆಗಿನ ಕಾಲಕ್ಕೆ ಒಳ್ಳೆ ಹೆಸರು ಪಡೆದುಕೊಂಡರು. 

ಬಾಲಿವುಡ್‌ನಲ್ಲಿ ಶಶಿಕಲಾ ಅವರ ಪ್ರಭಾವಶಾಲಿ ಓಟ ಎಲ್ಲರಿಗೂ ತಿಳಿದಿದ್ದರೂ, ಅವರ ಆರಂಭಿಕ ದಿನಗಳಲ್ಲಿ ಅವರು ಎದುರಿಸಿದ ಹೋರಾಟಗಳು ಅನೇಕರಿಗೆ ತಿಳಿದಿಲ್ಲ. ಆಕೆಯ ಹಿಂದಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಜೀವನದ ಆರಂಭದ ದಿನಗಳಲ್ಲಿ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲು ತನು ಪಟ್ಟ, ತಾವು ಮಾಡಿದ ಕೂಲಿ ಕೆಲಸದ ಬಗ್ಗೆ ಹಂಚಿಕೊಂಡಿದ್ದರು. 

ತನ್ನ ತಂದೆ ಶ್ರೀಮಂತ ಉದ್ಯಮಿಯಾಗಿದ್ದರೂ, ಲಂಡನ್‌ನಿಂದ ಪದವಿ ಓದುತ್ತಿರುವ ತನ್ನ ಕಿರಿಯ ಸಹೋದರನಿಗೆ ಹಣವನ್ನು ನೀಡಲು ತನ್ನ ತಂದೆ ಯಾವಾಗಲೂ ಮುಂದಿರುತ್ತಿದ್ದರು. ಕುಟುಂಬವೊಂದು ಇದೆ ಎನ್ನುವುದನ್ನು ಮರೆತು ಅವರ ತಂದೆ ಯಾವಾಗಲು ಅವರ ತಂದೆ ಸಹೋದರನಿಗೆ ಆದ್ಯತೆ ನೀಡುತ್ತಿದ್ದರು. ನಂತರ ಬ್ಯುಸಿನೆಸ್‌ನಲ್ಲಿ ಲಾಸ್‌ ಆಗಿ ತಂದೆ ದಿವಾಳಿಯಾದರು. ಇದರಿಂದ ಜೀವನವನ್ನು ನಡೆಸಲು ಕಷ್ಟವಾಗಿತ್ತು, ಪರರ ಮನೆಗೆ ಹೋಗಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಎದುರಾಯಿತು ಎಂದು ಹೇಳಿಕೊಂಡಿದ್ದರು.

ಶಶಿಕಲಾ ಅವರು ತಮ್ಮ ವೃತ್ತಿ ಜೀವನದಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಸಿದ್ದಾರೆ. ಚಲನಚಿತ್ರಗಳಲ್ಲದೆ, ಅವರು ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಆಕೆ ತನ್ನ ವೈಯಕ್ತಿಕ ಬದುಕಿನ ಹೋರಾಟವನ್ನು ಮರೆಯಲು ಸಾಧ್ಯವೇ ಇಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News