Mahie Gill's Story: ಚಿತ್ರರಂಗದಲ್ಲಿ ಅನೇಕ ನಟಿಯರು ತಮ್ಮ ವೃತ್ತಿ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದಿಂದ ಹೆಚ್ಚು ಗಮನ ಸೆಳೆಯುತ್ತಾರೆ. ಈ ಖ್ಯಾತ ನಟಿಯ ಜೀವನವೂ ಸಹ ತುಂಬಾ ವರ್ಣರಂಜಿತವಾಗಿದೆ. 2003ರಲ್ಲಿ ಮುಕುಲ್ ದೇವ್, ಬಬ್ಬು ಮಾನ್ ಮತ್ತು ಅಮಿತೋಜ್ ಮಾನ್ ಅವರೊಂದಿಗೆ ವಿವಾದಾತ್ಮಕ ನಾಟಕ 'ಹವಾಯೆನ್' ಮೂಲಕ ತಮ್ಮ ಸಿನಿಮಾ ವೃತ್ತಿಜೀವನ ಪ್ರಾರಂಭಿಸಿದರು. ನಾವು ಖ್ಯಾತ ನಟಿ ಮಾಹೀ ಗಿಲ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ನಟಿ 1975ರ ಡಿಸೆಂಬರ್ 19ರಂದು ಪಂಜಾಬಿ ಜಾಟ್ ಸಿಖ್ ಕುಟುಂಬದಲ್ಲಿ ಜನಿಸಿದರು. ಬಾಲಿವುಡ್‌ನ ಯಾವುದೇ ಸಂಪರ್ಕವಿಲ್ಲದಿದ್ದರೂ, ಈ ನಟಿ ಚಲನಚಿತ್ರೋದ್ಯಮದಲ್ಲಿ ಅಳಿಸಲಾಗದ ಹೆಗ್ಗುರುತನ್ನು ಮೂಡಿಸಿದ್ದಾರೆ. ಈ ನಟಿ ತಮ್ಮ 28ನೇ ವಯಸ್ಸಿನಲ್ಲಿ 'ಹವಾಯೆನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಪಂಜಾಬಿ ಸರಣಿಯಲ್ಲಿ ಅವರ ನಟನೆಯನ್ನು ನೋಡಿದ ಕೆಲವು ತಯಾರಕರು ಅವರಿಗೆ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿದರು.
ಮಾಹೀ ಗಿಲ್ ಜೀವನ ಬದಲಾಯಿಸಿದ ಅನುರಾಗ್ ಕಶ್ಯಪ್!
ಒಂದು ಪಾರ್ಟಿಯಲ್ಲಿ ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಮಾಹೀ ಗಿಲ್‌ರನ್ನ ನೋಡುತ್ತಾರೆ. ನಂತರ ಈ ನಟಿಗೆ ದೇವ್ ಡಿ ಚಿತ್ರದಲ್ಲಿನ 'ಪಾರೋ' ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಅಂದಿನಿಂದಲೇ ಈ ನಟಿಯ ಅದೃಷ್ಟ ಮಿಂಚಿತು. ಮಾಹೀ ಗಿಲ್ ಅಭಯ್ ಡಿಯೋಲ್ ಎದುರು ನಟಿಸಿದರು. ಈ ಚಿತ್ರದೊಂದಿಗೆ ರಾತ್ರೋರಾತ್ರಿ ಅವರು ಸ್ಟಾರ್ ನಟಿಯಾಗಿ ಹೆಸರು ಮಾಡಿದರು. ಈ ಅದ್ಭುತ ಯಶಸ್ಸಿನ ನಂತರ ಅವರು ತಿಗ್ಮಾನ್ಶು ಧುಲಿಯಾ, ವಿನಯ್ ಶುಕ್ಲಾ, ವಿವೇಕ್ ಅಗ್ನಿಹೋತ್ರಿ, ರಾಮ್ ಗೋಪಾಲ್ ವರ್ಮಾ ಮತ್ತು ಇತರ ಅನೇಕ ಪ್ರಸಿದ್ಧ ನಿರ್ಮಾಪಕರೊಂದಿಗೆ ಕೆಲಸ ಮಾಡಿದರು. ತನ್ನ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಮಾಹೀ ಗಿಲ್ ಅವರು 'ಗುಲಾಲ್', 'ಸಾಹೇಬ್', 'ಬಿವಿ ಔರ್ ಗ್ಯಾಂಗ್‌ಸ್ಟರ್', 'ಪಾನ್ ಸಿಂಗ್ ತೋಮರ್', 'ಬುಲೆಟ್ ರಾಜ', 'ದುರ್ಗಮತಿ', 'ನಾಟ್ ಎ ಲವ್ ಸ್ಟೋರಿ' ಮತ್ತು 'ಜೋರಾ-2ʼ ಮುಂತಾದ ಸ್ಟಾರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಡುಗಡೆಯಾಯಿತು 'ಫಾರೆಸ್ಟ್' ಚಿತ್ರದ "ಪೈಸಾ ಪೈಸಾ ಪೈಸಾ" ಹಾಡು: ಚಂದನ್ ಶೆಟ್ಟಿ ಗಾಯನಕ್ಕೆ ಹೆಜ್ಜೆ ಹಾಕಿದ ಕಲಾವಿದರು
17ನೇ ವರ್ಷದಲ್ಲಿ ಮೊದಲ ಮದುವೆ
ಮಾಹೀ ಗಿಲ್ 17ನೇ ವಯಸ್ಸಿನಲ್ಲಿ ವಿವಾಹವಾದರು. ಅವರು ಇಲ್ಲಿಯವರೆಗೆ ತಮ್ಮ ಮೊದಲ ಗಂಡನ ಹೆಸರನ್ನು ಬಹಿರಂಗಪಡಿಸದಿದ್ದರೂ, 2012ರ ಸಂದರ್ಶನವೊಂದರಲ್ಲಿ, ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದರು. ʼತಮ್ಮಿಬ್ಬರ ಸಂಬಂಧ ಹಳಸಿದಾಗ ಮೊದಲ ಪತಿಯಿಂದ ಬೇರ್ಪಡಲು ನಿರ್ಧರಿಸಿದೆʼ ಎಂದು ಮಾಹೀ ಗಿಲ್ ಬಹಿರಂಗಪಡಿಸಿದರು. ಆ ಸಮಯದಲ್ಲಿ ಈ ನಟಿ ತುಂಬಾ ಚಿಕ್ಕವಳಾಗಿದ್ದಳು. ಅಲ್ಲದೇ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವೂ ಸಹ ಈ ನಟಿಗೆ ಅರಿವಿರಲಿಲ್ಲ. ಇದು ತನ್ನ ಮದುವೆ ವಿಫಲವಾಗಲು ಕಾರಣವೆಂದು ನಟಿ ಹೇಳಿಕೊಂಡಿದ್ದರು.
2ನೇ ಮದುವೆಯ ನಂತರ ಮಾಹೀ ಗಿಲ್ ಜೀವನ ಹೇಗಿದೆ?
2019ರಲ್ಲಿ ಮಾಹೀ ಗಿಲ್ ಅವರು ಪ್ರಸಿದ್ಧ ನಟ-ಉದ್ಯಮಿ ರವಿ ಕೇಸರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎಂಬ ಗಾಳಿಸುದ್ದಿಗಳು ಹರಿದಾಡಿದವು. ಇದಾದ ಕೆಲ ವರ್ಷಗಳ ನಂತರ ಮಾಹೀ ಗಿಲ್ ಅವರು ರವಿ ಕೇಸರ್ ಅವರನ್ನು ವಿವಾಹವಾದೆ ಎಂದು 2023ರ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಈಗ ಈ ನಟಿ ತನ್ನ ಮಗಳು ವೆರೋನಿಕಾ ಜೊತೆ ಗೋವಾದ ಪತಿ ರವಿ ಕೇಸರ್ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಟ್ರೋಲ್‌ಗೂ ಡೋಂಟ್ ಕೇರ್..! ದಿನದಿಂದ ದಿನಕ್ಕೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಿದ್ದಾಳೆ ನಿವಿ.. ಫೊಟೋಸ್ ವೈರಲ್..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.