ನವದೆಹಲಿ: ಸೋಮವಾರ ಇರಾಕಿನ ರಾಜಧಾನಿ ಬಾಗ್ದಾದ್ನಲ್ಲಿ ಸಂಭವಿಸಿದ ಆತ್ಮಹತ್ಯಾ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಇದು ಬಾಗ್ದಾದ್ ನಲ್ಲಿ ಮೂರು ದಿನಗಳಲ್ಲಿ ನಡೆದ ಮತ್ತೊಂದು ದಾಳಿಯಾಗಿದೆ ಎನ್ನಲಾಗಿದೆ.
ಪೂರ್ವ ಬಾಗ್ದಾದ್ನ ಆರೋಗ್ಯ ಮುಖ್ಯಸ್ಥ ಡಾ. ಅಬ್ದೆಲ್ ಘನಿ ಅಲ್-ಸಾದಿ,ಯವರು ಹೇಳುವಂತೆ ದಾಲಿಯಲ್ಲಿ 26 ಮೃತಪಟ್ಟು ಮತ್ತು 90 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಬಾಗ್ದಾದ್ನ ಅಲ್-ತೈಯರನ್ ಚೌಕದಲ್ಲಿ ಇಬ್ಬರು ಆತ್ಮಹತ್ಯಾ ಬಾಂಬರಗಳು ತಾವೇ ಸ್ಪೋಟಗೊಳಿಸಿಕೊಂಡಿದ್ದಾರೆ ಎಂದು ಜಂಟಿ ಕಾರ್ಯಾಚರಣೆ ಕಮಾಂಡ್ನ ವಕ್ತಾರ ಜನರಲ್ ಸಾದ್ ಮಾನ್ ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸೇನೆ ಮತ್ತು ಪೊಲೀಸರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.