ಚೀನಾದಲ್ಲಿ ‘ಲಾಂಗ್ಯಾ ವೈರಸ್’: 35 ಜನರಲ್ಲಿ ಕಂಡುಬಂದ ಈ ವೈರಸ್ ಎಷ್ಟು ಅಪಾಯಕಾರಿ ಗೊತ್ತಾ?

ಲ್ಯಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಇನ್ನು ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಎಂದರೆ ಅದು  ಆರೈಕೆ ಮಾತ್ರ. ಈ ಹಿಂದೆ ಪ್ರಕಟವಾದ ಅಧ್ಯಯನವು 2019 ರಲ್ಲಿ ಮಾನವರಲ್ಲಿ ಮೊದಲ ಬಾರಿಗೆ ಲಾಂಗ್ಯಾ ವೈರಸ್ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದೆ.

Last Updated : Aug 10, 2022, 11:14 AM IST
    • ಲ್ಯಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ
    • ಈಗಾಗಲೇ 35 ಜನರಲ್ಲಿ ಕಂಡುಬಂದ ವೈರಸ್
    • ವೈರಸ್ ತೀವ್ರತೆ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದೆ ಚೀನಾ ಸಂಸ್ಥೆ
ಚೀನಾದಲ್ಲಿ ‘ಲಾಂಗ್ಯಾ ವೈರಸ್’: 35 ಜನರಲ್ಲಿ ಕಂಡುಬಂದ ಈ ವೈರಸ್ ಎಷ್ಟು ಅಪಾಯಕಾರಿ ಗೊತ್ತಾ?  title=
China

ಕೊರೊನಾ ವೈರಸ್ ಜಗತ್ತಿನಲ್ಲಿ ಅದೆಷ್ಟೋ ಪ್ರಾಣ ಕಿತ್ತುಕೊಂಡಿದೆ. ಇಂದಿಗೂ ಕೂಡ ಕೊರೊನಾ ಸೋಂಕು ಎಂದರೆ ಜನರು ಭಯಭೀತರಾಗುತ್ತಿದ್ದಾರೆ. ಈ ವೈರಸ್ ವಕ್ಕರಿಸಿದ ಬಳಿಕ ಅದೆಷ್ಟೋ ವೇರಿಯೆಂಟ್ ಗಳು ಬಂದು ಇನ್ನಷ್ಟೂ ಸಮಸ್ಯೆಗೆ ದೂಡಿತ್ತು. ಇದೀಗ ಮತ್ತೆ ಚೀನಾದಲ್ಲಿ ಹೊಸದೊಂದು ಸೋಂಕು ಕಂಡುಬಂದಿದೆ. ಇದನ್ನು ಲಾಂಗ್ಯಾ ವೈರಸ್ ಎಂದು ಕರೆಯಲಾಗುತ್ತಿದ್ದು, ಈಗಾಗಲೇ 35 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ

ಲ್ಯಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಇನ್ನು ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಎಂದರೆ ಅದು  ಆರೈಕೆ ಮಾತ್ರ. ಈ ಹಿಂದೆ ಪ್ರಕಟವಾದ ಅಧ್ಯಯನವು 2019 ರಲ್ಲಿ ಮಾನವರಲ್ಲಿ ಮೊದಲ ಬಾರಿಗೆ ಲಾಂಗ್ಯಾ ವೈರಸ್ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದೆ. ಆದರೆ ಹೆಚ್ಚಿನ ಪ್ರಕರಣಗಳು ಈ ವರ್ಷ ವರದಿಯಾಗಿದೆ. ಮೇಲ್ ಆನ್‌ಲೈನ್‌ನ ವರದಿಯ ಪ್ರಕಾರ, ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದೇ ಎಂದು ಕಂಡುಹಿಡಿಯಲು ಚೀನಾದ ತಜ್ಞರು ಇನ್ನೂ ಪ್ರಯತ್ನಿಸುತ್ತಿದ್ದಾರೆ.

ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಯಾಲಜಿ ಮತ್ತು ಎಪಿಡೆಮಿಯಾಲಜಿ ನೇತೃತ್ವದ ಸಂಶೋಧನೆಯಲ್ಲಿ, 2020 ರ ಜನವರಿ ಮತ್ತು ಜುಲೈ ನಡುವಿನ ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಲ್ಯಾಂಗ್ಯಾ ವೈರಸ್‌ನ ಯಾವುದೇ ಸೋಂಕುಗಳು ಕಂಡುಬಂದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಜುಲೈ 2020ರ ಬಳಿಕ 11 ಲಾಂಗ್ಯಾ ವೈರಸ್ ಪ್ರಕರಣಗಳು ಕಂಡುಬಂದಿದ್ದವು.

ರೋಗಿಗಳಲ್ಲಿ ವೈರಸ್‌ನ ಲಕ್ಷಣಗಳನ್ನು ಪತ್ತೆ ಹಚ್ಚಿದ ನಂತರ, ಇದು ಸಾಮಾನ್ಯವಾದ ಜ್ವರ ಎಂದು ಹೇಳಿದ್ದಾರೆ. ನಂತರ ಕೆಮ್ಮು (ಶೇ. 50), ಆಯಾಸ (ಶೇ. 54), ಹಸಿವಿನ ಕೊರತೆ (ಶೇ. 50), ಸ್ನಾಯು ನೋವು (ಶೇ. 46), ಮತ್ತು ವಾಂತಿ (ಶೇ. 38)ಯಂತಹ ಸಮಸ್ಯೆಗಳ ಲಕ್ಷಣಗಳು ಕಂಡುಬಂದಿದೆ.

ಇದನ್ನೂ ಓದಿ: Puneeth Rajkumar Rakhi: ರಕ್ಷಾ ಬಂಧನಕ್ಕೆ ಮಾರುಕಟ್ಟೆಗೆ ಬಂತು "ಅಪ್ಪು ರಾಖಿ"

ಲಾಂಗ್ಯಾ ವೈರಸ್‌ ತೀವ್ರತೆ:  ಈ ವೈರಸ್ ಬಾವಲಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾರಣಾಂತಿಕ ನಿಪಾ ವೈರಸ್‌ನ ಒಂದೇ ಕುಟುಂಬಕ್ಕೆ ಸೇರಿದೆ. ನಿಪಾ ಕೋವಿಡ್-19 ನಂತಹ ಉಸಿರಾಟದ ಮೂಲಕವೂ ಹರಡುತ್ತದೆ. ಇದು ಹೆಚ್ಚು ಅಪಾಯಕಾರಿ. ಏಕೆಂದರೆ ಮುಕ್ಕಾಲು ಭಾಗದಷ್ಟು ಜನರನ್ನು ಕೊಲ್ಲುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ನಿಪಾ ಮುಂದಿನ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಪಟ್ಟಿ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News