ಎಲ್ಎಸಿ ಬಗ್ಗೆ ಚೀನಾದ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿದ ಭಾರತ

  ಎಲ್ಎಸಿ ಬಗ್ಗೆ 1959 ರಲ್ಲಿ ಮಾಡಿದ ಹಕ್ಕನ್ನು ಪರಸ್ಪರ ಒಪ್ಪಿಕೊಂಡಿಲ್ಲ ಎಂಬ ಜ್ಞಾಪನೆಯೊಂದಿಗೆ ಚೀನಾದ ಹಕ್ಕುಗಳನ್ನು ಸಮಗ್ರವಾಗಿ ತಿರಸ್ಕರಿಸಿದೆ ಎಂದು ಭಾರತ ಹೇಳಿದೆ.

Last Updated : Sep 30, 2020, 12:02 AM IST
ಎಲ್ಎಸಿ ಬಗ್ಗೆ ಚೀನಾದ ಹಕ್ಕು ಪ್ರತಿಪಾದನೆಯನ್ನು ತಿರಸ್ಕರಿಸಿದ ಭಾರತ title=
ಸಾಂದರ್ಭಿಕ ಚಿತ್ರ

ನವದೆಹಲಿ:  ಎಲ್ಎಸಿ ಬಗ್ಗೆ 1959 ರಲ್ಲಿ ಮಾಡಿದ ಹಕ್ಕನ್ನು ಪರಸ್ಪರ ಒಪ್ಪಿಕೊಂಡಿಲ್ಲ ಎಂಬ ಜ್ಞಾಪನೆಯೊಂದಿಗೆ ಚೀನಾದ ಹಕ್ಕುಗಳನ್ನು ಸಮಗ್ರವಾಗಿ ತಿರಸ್ಕರಿಸಿದೆ ಎಂದು ಭಾರತ ಹೇಳಿದೆ.

ಉಭಯ ರಾಷ್ಟ್ರಗಳು "ಸಾಮಾನ್ಯ ತಿಳುವಳಿಕೆಯನ್ನು ತಲುಪಲು ಎಲ್‌ಎಸಿಯ ಸ್ಪಷ್ಟೀಕರಣ ಮತ್ತು ಧೃಡಿಕರಣಕ್ಕೆ ಬದ್ಧವಾಗಿವೆ" ಮತ್ತು ಕೇವಲ ಒಂದು ಎಲ್‌ಎಸಿ ಮಾತ್ರ ಇದೆ ಎಂಬ ಚೀನಾದ ಕಡೆಯ ಪ್ರತಿಪಾದನೆಯು ಅದು ಮಾಡಿದ ಗಂಭೀರ ಬದ್ಧತೆಗಳಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ತಿಳಿಸಿದೆ.

ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ

ಭಾರತದ ನಿಲುವು ಸ್ಥಿರವಾಗಿದೆ ಮತ್ತು ಚೀನಾದ ಕಡೆಯವರಿಗೆ ತಿಳಿದಿದೆ ಎಂದು ಸಚಿವಾಲಯ ತಿಳಿಸಿದೆ.2003 ರವರೆಗೆ, ಎರಡೂ ಕಡೆಯವರು ಎಲ್‌ಎಸಿಯನ್ನು ಸ್ಪಷ್ಟಪಡಿಸುವ ಮತ್ತು ಧೃಡಿಕರಿಸುವ ಕಾರ್ಯದಲ್ಲಿ ತೊಡಗಿದ್ದರು, "ಆದರೆ ಚೀನಾದ ಕಡೆಯವರು ಅದನ್ನು ಮುಂದುವರಿಸಲು ಇಚ್ಛೆ ತೋರಿಸದ ಕಾರಣ ಈ ಪ್ರಕ್ರಿಯೆಯು ಮತ್ತಷ್ಟು ಮುಂದುವರಿಯಲು ಸಾಧ್ಯವಾಗಲಿಲ್ಲ" ಎಂದು ಸಚಿವಾಲಯ ತಿಳಿಸಿದೆ.

ಉಭಯ ರಾಷ್ಟ್ರಗಳ ನಡುವಿನ ವಾಸ್ತವಿಕ ಗಡಿಯಾದ ಎಲ್‌ಎಸಿ ಬಗ್ಗೆ ಬೀಜಿಂಗ್ ನಿಲುವು ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯ ಸುದ್ದಿಯ ನಂತರ ಸಚಿವಾಲಯದ ಈ ಹೇಳಿಕೆಗಳು ಬಂದಿವೆ. ಹೇಳಿಕೆಯಲ್ಲಿ, ಚೀನಾ 1959 ರ ತಿಳುವಳಿಕೆಯನ್ನು ಉಲ್ಲೇಖಿಸಿದೆ, ಆದರೆ ಇದನ್ನು ನವದೆಹಲಿ ಸತತವಾಗಿ ತಿರಸ್ಕರಿಸಿದೆ.

LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ

ಪಾಶ್ಚಿಮಾತ್ಯ ವಲಯದಲ್ಲಿ ಎಲ್‌ಎಸಿ ಬಗ್ಗೆ ಭಿನ್ನಾಭಿಪ್ರಾಯವು ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ 1959 ರಲ್ಲಿ ಚೀನಾದ ಚೌ ಎನ್ಲೈ ಬರೆದ ಪತ್ರದೊಂದಿಗೆ ಪ್ರಾರಂಭವಾಯಿತು. ಅದರಲ್ಲಿ, ಎಲ್‌ಎಸಿಯ ವಿವರಣೆಯನ್ನು ಸಾಮಾನ್ಯ ಪರಿಭಾಷೆಯಲ್ಲಿ ನೀಡಲಾಗಿದೆ ಮತ್ತು ಅದನ್ನು ಅಳೆಯಲು ವ್ಯಾಖ್ಯಾನಿಸಲಾಗಿಲ್ಲ.

Trending News