ಲಾಹೋರ್ ನಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟಿಸಿದ ಹಫೀಜ್ ಸಯೀದ್

ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಅನ್ನು ಸಯೀದ್‌ನ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜೆಯುಡಿ ಇದರ ರಾಜಕೀಯ ಮುಖವೆಂದು ತಿಳಿಯಲಾಗಿದೆ. ಪಾಕ್ ಆಂತರಿಕ ಸಚಿವಾಲಯ ಇದನ್ನು ನಿಷೇಧಿತ ಲಷ್ಕರ್ ಎ ತೊಯ್ಬಾ ದ ಒಂದು ಉಪಘಟಕವೆಂದು ಕರೆದಿದೆ.

Last Updated : Dec 25, 2017, 03:00 PM IST
ಲಾಹೋರ್ ನಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟಿಸಿದ ಹಫೀಜ್ ಸಯೀದ್ title=

ಲಾಹೋರ್ : ಪಾಕಿಸ್ತಾನ ಸರಕಾರದಿಂದ ಎಲ್ಲ ಎಚ್ಚರಿಕೆಯನ್ನು ನಿರ್ಲಕ್ಷಿಸಿರುವ ಮುಂಬಯಿ ದಾಳಿಯ ಮುಖ್ಯಸ್ಥ ಹಫೀಜ್ ಸಯೀದ್ ಲಾಹೋರ್ ಜಿಲ್ಲೆಯಲ್ಲಿ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್)ನ ಮೊದಲ ರಾಜಕೀಯ ಕಚೇರಿಯನ್ನು ತೆರೆದಿದ್ದಾರೆ.

ಪಾಕಿಸ್ತಾನದ ನ್ಯಾಯಾಲಯದ ತೀರ್ಪಿನನ್ವಯ 297 ದಿನಗಳ ಕಾಲ ಗೃಹಬಂಧನದಲ್ಲಿದ್ದ  ಲಷ್ಕರ್-ಇ-ತೊಯ್ಬಾ (ಲೆಟ್) ಸಹ-ಸಂಸ್ಥಾಪಕ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಸಯೀದ್ನನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು. ಆದರೆ ಆತನ ಬಿಡುಗಡೆಯನ್ನು ಜಾಗತಿಕ ಮಟ್ಟದಲ್ಲಿ ಪ್ರತಿಭಟಿಸಲಾಗಿತ್ತು. ಅಲ್ಲದೆ, ಆ ತಕ್ಷಣವೇ ಸಯೀದ್ ನನ್ನು ಬಂಧಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಅಮೇರಿಕ ಪಾಕಿಸ್ತಾನ ಸರ್ಕಾರವನ್ನು ಕೇಳಿತ್ತು.

ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಅನ್ನು ಸಯೀದ್‌ನ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜೆಯುಡಿ ಇದರ ರಾಜಕೀಯ ಮುಖವೆಂದು ತಿಳಿಯಲಾಗಿದೆ. ಪಾಕ್ ಆಂತರಿಕ ಸಚಿವಾಲಯ ಇದನ್ನು ನಿಷೇಧಿತ ಲಷ್ಕರ್ ಎ ತೊಯ್ಬಾ ದ ಒಂದು ಉಪಘಟಕವೆಂದು ಕರೆದಿದೆ.

ಲಾಹೋರ್‌ನ ಮೊಹ್‌ನೀ ರಸ್ತೆಯಲ್ಲಿನ ಕಟ್ಟಡದಲ್ಲಿ  ತನ್ನ ನೂತನ ರಾಜಕೀಯ ಪಕ್ಷದ ಕಾರ್ಯಾಲಯವನ್ನು ಉದ್ಘಾಟಿಸಿದ ಹಫೀಜ್‌ ಸಯೀದ್‌, ಆ ಬಳಿಕ ಆ ಪ್ರದೇಶದ ಪೌರರ ಸಮಸ್ಯೆಗಳನ್ನು ಆಲಿಸಿದ್ದಾನೆ ಎಂದು ಪಾಕ್‌ ದೈನಿಕ ಡಾನ್‌ ವರದಿ ಮಾಡಿದೆ.

ಎಂಎಂಎಲ್ ಅನ್ನು ರಾಜಕೀಯ ಪಕ್ಷವೆಂದು ಚುನಾವಣಾ ಆಯೋಗವು ನೋಂದಾಯಿಸಿಕೊಳ್ಳುವುದನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯವು "ನಿಷೇದಿತ ಘಟಕಗಳ ಉಪಶಾಖೆ" ಎಂದು ಟೀಕಿಸಿದೆ. ರಾಷ್ಟ್ರದ ಭದ್ರತಾ ಸಂಸ್ಥೆಯೊಂದು ತನ್ನ ವರದಿಯಲ್ಲಿ ರಾಜಕೀಯ ಪಕ್ಷವಾಗಿ ಎಂಎಂಎಲ್ನ ನೋಂದಣಿ "ರಾಜಕೀಯದಲ್ಲಿ ಹಿಂಸಾಚಾರ ಮತ್ತು ಉಗ್ರಗಾಮಿತ್ವವನ್ನು ವೃದ್ಧಿಗೊಳಿಸುತ್ತದೆ" ಎಂಡು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಂತರಿಕ ಸಚಿವಾಲಯ ತನ್ನ ವಿರೋಧ ವ್ಯಕ್ತಪಡಿಸಿದೆ. 

ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 10 ಮಿಲಿಯನ್ ಯುಎಸ್ ಡಾಲರ್ ಕೊಡುಗೆ ಹೊಂದಿರುವ ಸಯೀದ್, ವಿಶ್ವ ಸಂಸ್ಥೆಯ ಜಾಗತಿಕ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯಿಂದ ತನ್ನ ಹೆಸರನ್ನು ಕೈಬಿಡಲು ಕೋರಿದ್ದಾರೆ.

ಅಚ್ಚರಿಯ ವಿಷಯಯವೆಂದರೆ, 1985ರವರೆಗೆ ಶರೀಫರಿಂದ ಸ್ಪರ್ಧಿಸಲ್ಪಡುತ್ತಿದ್ದ ಲಾಹೋರ್ ಜಿಲ್ಲೆಯ ನ್ಯಾಶನಲ್ ಅಸೆಂಬ್ಲಿ ಕ್ಷೇತ್ರ ಎನ್ಎ 20ರಲ್ಲಿ ಎಂಎಂಎಲ್ ಕಚೇರಿಯು ಆರಂಭವಾಗಿದೆ. 

ಎಂಎಂಎಲ್ ಇನ್ನೂ ಪಾಕಿಸ್ತಾನದ ಚುನಾವಣಾ ಆಯೋಗದೊಂದಿಗೆ ನೋಂದಾಯಿಸಲ್ಪಟ್ಟಿಲ್ಲ (ಇಸಿಪಿ). ಈ ಪಕ್ಷವು ಈಗಾಗಲೇ ಮುಹಮ್ಮದ್ ಯಾಕೂಬ್ ಶೇಖ್ ಅವರ ಬ್ಯಾನರ್ ಅಡಿಯಲ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂದಾಗಿದೆ. ಶೇಖ್ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. 

ಈ ಮಧ್ಯೆ ಸಯೀದ್ ಗೆ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್, 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾಗತಿಕ ಭಯೋತ್ಪಾದಕ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ಜೊತೆ ಮೈತ್ರಿ ಹೊಂದಲು  ಸ್ವಾಗತಿಸುವುದಾಗಿ ಹೇಳಿದ್ದಾರೆ. 

Trending News