ಪಾಕ್ ವಿರುದ್ಧ ಭಾರತದ ವೈಮಾನಿಕ ದಾಳಿಗೆ ಚೀನಾ ಹೇಳಿದ್ದೇನು?

ಭಾರತಕ್ಕೆ ಸಲಹೆ ನೀಡಿರುವ ಚೀನಾ, ಅಂತಾರಾಷ್ಟೀಯ ಸಮುದಾಯದ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ ಎಂದಿದೆ.

Last Updated : Feb 26, 2019, 06:28 PM IST
ಪಾಕ್ ವಿರುದ್ಧ ಭಾರತದ ವೈಮಾನಿಕ ದಾಳಿಗೆ ಚೀನಾ ಹೇಳಿದ್ದೇನು? title=

ನವದೆಹಲಿ: ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ  ವೈಮಾನಿಕ ದಾಳಿಗೆ ಪ್ರತಿಕ್ರಿಯಿಸಿರುವ  ಪಾಕಿಸ್ತಾನದ ಆಪ್ತ ಮಿತ್ರ ಚೀನಾ, ಎರಡೂ ದೇಶಗಳೂ ಶಾಂತಿಯಿಂದ ಇರುವಂತೆ ಸಲಹೆ ನೀಡಿದೆ.

ಏಷ್ಯಾ ವಲಯದಲ್ಲಿ ಶಾಂತಿ, ಸ್ಥಿರತೆಗೆ ಭಾರತ ಮತ್ತು ಪಾಕ್ ನಡುವೆ ಶಾಂತಿಯುತ ಸಂಬಂಧಗಳು ಅಗತ್ಯ. ಈ ವಲಯದ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಎರಡೂ ದೇಶಗಳು ಶ್ರಮಿಸುತ್ತವೆ ಎಂದು ನಾವು ಆಶಿಸುತ್ತೇವೆ' ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. 

ಇದೇ ವೇಳೆ ಭಾರತಕ್ಕೂ ಸಲಹೆ ನೀಡಿರುವ ಚೀನಾ, ಅಂತಾರಾಷ್ಟೀಯ ಸಮುದಾಯದ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ. ಜಾಗತಿಕ ಆದ್ಯತೆ ಮತ್ತು ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದೂ ಚೀನಾ ಅಭಿಪ್ರಾಯಪಟ್ಟಿದೆ.

Trending News