Bear viral video: ಕೆಲವೊಮ್ಮೆ ಮೂಕ ಜೀವಿಗಳು ವಿಚಿತ್ರವಾಗಿ ವರ್ತಿಸುತ್ತವೆ. ಇತ್ತೀಚೆಗಷ್ಟೇ ಶನಿಸಿಂಹಪುರದ ದೇವಸ್ಥಾನದಲ್ಲಿ ಶನಿದೇವನ ಸುತ್ತ ಬೆಕ್ಕು ಸುತ್ತಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.. ಇದನ್ನು ಅಲ್ಲಿನ ಜನರು ಪವಾಡ ಅಂತ ಕರೆದರು.. ಕೆಲವೊಮ್ಮೆ ಕಾಡು ಆನೆಗಳು ಸಹ ನಾಡಿಗೆ ಬಂದಾದ ದೇವಾಲಯಗಳ ಮುಂದೆ ಮಂಡಿಯೂರಿ ನಮಸ್ಕಾರ ಮಾಡುತ್ತವೆ.. ಈ ಕುರಿತು ಹಲವಾರು ವಿಡಿಯೋಗಳು ವೈರಲ್ ಆಗಿರುತ್ತವೆ..
ಹಾವುಗಳು ಕೂಡ ದೇವಸ್ಥಾನಕ್ಕೆ ನುಗ್ಗಿ ಶಿವಲಿಂಗವನ್ನು ಸುತ್ತುವರಿದ ಘಟನೆಗಳು ಆಗಾಗ ಅಲ್ಲಲ್ಲಿ ವರದಿಯಾಗುತ್ತಿರುತ್ತವೆ. ಅದೇ ರೀತಿ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲಿ ಕರಡಿಯೊಂದು ಶಿವಲಿಂಗವನನು ಅಪ್ಪಿಕೊಂಡು ಬಹಳ ಕಾಲ ಹಾಗೆಯೇ ನಿಂತಿತ್ತು. ದೂರದಿಂದ ಕೆಲವರು ಈ ಘಟನೆಯನ್ನು ತಮ್ಮ ಫೋನ್ಗಳಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಇದನ್ನೂ ಓದಿ:ಟಿಕ್ಟಾಕ್ನ ಹೊಸ ಮಾಲೀಕರಾಗ್ತಾರಾ ಎಲೋನ್ ಮಸ್ಕ್? ಮತ್ತೇ ಭಾರತಕ್ಕೆ ಬರುತ್ತಾ!
ಚಂಡಿ ಮಾತಾ ದೇವಾಲಯವು ಛತ್ತೀಸ್ಗಢದ ಬಾಗ್ ಬಹರಾದಲ್ಲಿದೆ. ಇಲ್ಲಿ ಶಿವನ ಲಿಂಗವಿದೆ. ಈ ದೇವಾಲಯವು ಕಾಡಿನ ಸಮೀಪದಲ್ಲಿದೆ. ಈ ವೇಳೆ ಕಾಡಿನಿಂದ ಬಂದ ಜಾಂಬವಂತ ಶಿವಲಿಂಗವನ್ನು ಭಕ್ತ ಮಾರ್ಕಂಡೆಯನಂತೆ ಅಪ್ಪಿ ಕೆಲವೊತ್ತು ಹಾಗೆ ನಿಂತಿತ್ತು.. ಆ ದೇವರಲ್ಲಿ ಪ್ರಾರ್ಥಿಸುತ್ತಿತ್ತು ಎನ್ನಬಹುದು...
ಈ ವಿಡಿಯೋ ನೋಡಿದ ನೆಟ್ಟಿಗರು ಹರ ಹರ ಮಹದೇಶ್ ಎಂದು ಭಕ್ತಿಯಿಂದ ಕಾಮೆಂಟ್ ಮಾಡುತ್ತ ಭೋಲೆನಾಥನನ್ನು ಸ್ಮರಿಸುತ್ತಿದ್ದಾರೆ. ಅದೂ ಅಲ್ಲದೆ... ಯಮಧರ್ಮರಾಜನ ಹಿಡಿತದಿಂದ ರಕ್ಷಿಸು ಎನ್ನುವಂತೆ ಭಕ್ತ ಮಾರ್ಕಂಡೇಯನು ಶಿವನನ್ನು ಅಪ್ಪಿಕೊಂಡ ರೀತಿ ಕರಡಿ ಶಿವನನ್ನು ಅಪ್ಪಿಕೊಂಡಿದೆ ಅಂತ ಹೊಗಳುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.