ಅನ್ಯ ರಾಜ್ಯದ ಸಿಎಂ ಒತ್ತಡದಿಂದ ಆ ರಾಜ್ಯದ ಪಾಲಾಗಿದ್ದ ಅಮೆರಿಕ ಕಾನ್ಸುಲೇಟ್

ಬೆಂಗಳೂರಿನಲ್ಲಿ 2006ರಿಂದಲೂ ಸ್ಥಾಪನೆ ಮಾಡಿಸುವ ಬಗ್ಗೆ ತಾವು ನಡೆಸಿದ ಪ್ರಯತ್ನಗಳ ಬಗ್ಗೆ ಸಚಿವ ಜೈಶಂಕರ್ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ಕುಮಾರಸ್ವಾಮಿ ಅವರು, ಅಂದಿನ ಯುಪಿಎ ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅನ್ಯರಾಜ್ಯವೊಂದರ ಮುಖ್ಯಮಂತ್ರಿಯ ಒತ್ತಡಕ್ಕೆ ಮಣಿದ ಸರಕಾರ ಅವರ ರಾಜ್ಯಕ್ಕೆ ಯುಎಸ್ ಕಾನ್ಸುಲೇಟ್ ಹೋಯಿತು. ಈ ವಿಷಯವನ್ನು ಸ್ವತಃ ಜೈಶಂಕರ್ ಅವರೇ ಸಚಿವರ ಜತೆ ಹಂಚಿಕೊಂಡರು.

Written by - Manjunath N | Last Updated : Jan 16, 2025, 10:14 PM IST
  • ಬೆಂಗಳೂರು ಇಡೀ ದೇಶದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದ್ದು, ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.
  • ಮಾಹಿತಿ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳು ಅಗಾಧವಾಗಿ ಬೆಳೆದಿವೆ. ಮುಖ್ಯವಾಗಿ ಅಮೆರಿಕದ ಜತೆ ಕರ್ನಾಟಕ ನಿಕಟ ಸಂಪರ್ಕ ಹೊಂದಿದೆ.
  • ಹೀಗಾಗಿ ನಗರದಲ್ಲಿ ಅಮೆರಿಕ ಕಾನ್ಸುಲೇಟ್ ಸ್ಥಾಪನೆ ಅತ್ಯಗತ್ಯ ಎಂದು ಜಸ್ಟರ್ ಅವರಿಗೆ ಕುಮಾರಸ್ವಾಮಿ ಅವರು ವಿವರಿಸಿದ್ದರು.
 ಅನ್ಯ ರಾಜ್ಯದ ಸಿಎಂ ಒತ್ತಡದಿಂದ ಆ ರಾಜ್ಯದ ಪಾಲಾಗಿದ್ದ ಅಮೆರಿಕ ಕಾನ್ಸುಲೇಟ್ title=

ನವದೆಹಲಿ: ಉದ್ಯಾನನಗರಿ ಹಾಗೂ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ನಗರದಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ ಕನಸು ನನಸಾಗಿದ್ದು, ಈ ಸಂಬಂಧ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಗುರುವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು.

ಬೆಂಗಳೂರಿನಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ ನಾಳೆ (ಶುಕ್ರವಾರ) ಉದ್ಘಾಟನೆ ಆಗುತ್ತಿದ್ದು, ಅದಕ್ಕೆ ಮುನ್ನ ವಿದೇಶಾಂಗ ಸಚಿವರನ್ನು ಸೌತ್ ಬ್ಲಾಕ್ ನಲ್ಲಿರುವ ಅವರ ಕಚೇರಿಯಲ್ಲಿಯೇ ಭೇಟಿಯಾದ ಸಚಿವರು; ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೇಂದ್ರ ಸ್ಥಾನವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಬೆಂಗಳೂರು, ಯುಎಸ್ ಕಾನ್ಸುಲೇಟ್ ಸ್ಥಾಪನೆಯೊಂದಿಗೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಮಹತ್ವದ ಬೆಳವಣಿಗೆ ಬೆಂಗಳೂರಿಗೆ ಹೊಸ ಅಧ್ಯಾಯ ಆರಂಭವಾಗಿದೆ ಮಾತ್ರವಲ್ಲದೆ, ಈ ಕನಸನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಿದ ಹಲವು ನಾಯಕರ ನಿರಂತರ ಶ್ರಮಕ್ಕೆ ಸಿಕ್ಕ ಗೆಲುವಾಗಿದೆ.

ಬೆಂಗಳೂರಿನಲ್ಲಿ 2006ರಿಂದಲೂ ಸ್ಥಾಪನೆ ಮಾಡಿಸುವ ಬಗ್ಗೆ ತಾವು ನಡೆಸಿದ ಪ್ರಯತ್ನಗಳ ಬಗ್ಗೆ ಸಚಿವ ಜೈಶಂಕರ್ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ಕುಮಾರಸ್ವಾಮಿ ಅವರು, ಅಂದಿನ ಯುಪಿಎ ಸರಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅನ್ಯರಾಜ್ಯವೊಂದರ ಮುಖ್ಯಮಂತ್ರಿಯ ಒತ್ತಡಕ್ಕೆ ಮಣಿದ ಸರಕಾರ ಅವರ ರಾಜ್ಯಕ್ಕೆ ಯುಎಸ್ ಕಾನ್ಸುಲೇಟ್ ಹೋಯಿತು. ಈ ವಿಷಯವನ್ನು ಸ್ವತಃ ಜೈಶಂಕರ್ ಅವರೇ ಸಚಿವರ ಜತೆ ಹಂಚಿಕೊಂಡರು.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ 11ರ ಟಾಪ್5 ಸ್ಪರ್ಧಿಗಳ ಹೆಸರು ಲೀಕ್!‌ ಐವರಲ್ಲಿ ಒಬ್ಬರೇ ಘಟಾನುಘಟಿ ಲೇಡಿ ಕಂಟಸ್ಟಂಟ್‌..

ಅಲ್ಲದೆ, ಕುಮಾರಸ್ವಾಮಿ ಅವರು 2018 ಮೇ 31ರಂದು ಕರ್ನಾಟಕ ಮುಖ್ಯಮಂತ್ರಿ ಆಗಿದ್ದಾಗ ಆಗಿನ ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನೆತ್ ಜಸ್ಟರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಯ ಬೇಡಿಕೆಯನ್ನು ಪ್ರಸ್ತಾಪಿಸಿದ್ದರು. ಆಗ ಹೆಚ್ಡಿಕೆ ಅವರ ಮನವಿಗೆ ಜಸ್ಟರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಬೆಂಗಳೂರು ಇಡೀ ದೇಶದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದ್ದು, ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.ಮಾಹಿತಿ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳು ಅಗಾಧವಾಗಿ ಬೆಳೆದಿವೆ. ಮುಖ್ಯವಾಗಿ ಅಮೆರಿಕದ ಜತೆ ಕರ್ನಾಟಕ ನಿಕಟ ಸಂಪರ್ಕ ಹೊಂದಿದೆ. ಹೀಗಾಗಿ ನಗರದಲ್ಲಿ ಅಮೆರಿಕ ಕಾನ್ಸುಲೇಟ್ ಸ್ಥಾಪನೆ ಅತ್ಯಗತ್ಯ ಎಂದು ಜಸ್ಟರ್ ಅವರಿಗೆ ಕುಮಾರಸ್ವಾಮಿ ಅವರು ವಿವರಿಸಿದ್ದರು. ಅದಕ್ಕೆ ಅಗತ್ಯವಾದ ಪೂರಕ ಮಾಹಿತಿ, ದಾಖಲೆಗಳನ್ನು ಕೂಡ ಅಂದಿನ ಮುಖ್ಯಮಂತ್ರಿ ಹೆಚ್ಡಿಕೆ ಅವರು ಅಮೆರಿಕ ರಾಯಭಾರಿಗೆ ನೀಡಿದ್ದರು.

ಏತನ್ಮಧ್ಯೆ; ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಸ್ಥಾಪನೆ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆ ಇದೆ ಎಂದು ಹೇಳಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ವಿದೇಶಾಂಗ ಜೈಶಂಕರ್ ಅವರ ಸಹಕಾರವನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ತೆರೆಯುವುದರಿಂದ ಭಾರತ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಮತ್ತಷ್ಟು ಬಲವಾಗುತ್ತವೆ. ತಂತ್ರಜ್ಞಾನ, ವ್ಯಾಪಾರ, ಶಿಕ್ಷಣ ಮತ್ತು ಆವಿಷ್ಕಾರದಲ್ಲಿ ಸಹಕಾರವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಇದು ಮಹತ್ವದ ಪ್ರವೇಶದ್ವಾರವಾಗಿರುತ್ತದೆ.ಪ್ರಧಾನಿಗಳ 'ವಿಕಸಿತ ಭಾರತ 2047' ಗುರಿ ಸಾಕಾರ ನಿಟ್ಟಿನಲ್ಲಿ ಉಪಕ್ರಮ ಬಹಳ ಪ್ರಮುಖ ಪಾತ್ರ ವಹಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News