ಈ ಕಲ್ಲನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಹೆಂಗಸರು ಗರ್ಭಿಣಿಯಾಗುತ್ತಾರೆ..! ಇದು ಕಟ್ಟು ಕಥೆ ಅಲ್ಲ, ಸತ್ಯ..

Birthing Stone : ಮದುವೆಯಾದ ಪ್ರತಿಯೊಂದು ಹೆಣ್ಣು ತಾಯಿಯಾಗಲು ಬಯಸುತ್ತಾಳೆ.. ಕೆಲವೊಂದಿಷ್ಟು ದಂಪತಿಗೆ ಮಕ್ಕಳಾಗುವುದೇ ಇಲ್ಲ.. ಇದರಿಂದ ಅವರು ಮನನೊಂದು ಬದುಕು ಸಾಗಿಸುತ್ತಿರುತ್ತಾರೆ.. ಇನ್ನೂ ಕೆಲವರು ಮಕ್ಕಳನ್ನು ಪಡೆಯಲು ಎಲ್ಲಾ ದೇವರಿಗೆ ಹರಕೆ ಹೊರುತ್ತಾರೆ... ಔಷಧಿಗಳ ಮೊರೆ ಹೋಗುತ್ತಾರೆ.. ಆದರೆ.. ಇಲ್ಲೊಂದು ಕಲ್ಲು ಇದೆ.. ಇದನ್ನ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಗರ್ಭ ಧರಿಸಬಹುದು..

Written by - Krishna N K | Last Updated : Jan 17, 2025, 08:36 PM IST
    • ಮದುವೆಯಾದ ಪ್ರತಿಯೊಂದು ಹೆಣ್ಣು ತಾಯಿಯಾಗಲು ಬಯಸುತ್ತಾಳೆ..
    • ಕೆಲವರು ಮಕ್ಕಳನ್ನು ಪಡೆಯಲು ಎಲ್ಲಾ ದೇವರಿಗೆ ಹರಕೆ ಹೊರುತ್ತಾರೆ
    • ಮಗುವಿಗೆ ಜನ್ಮ ನೀಡುವುದು ಪ್ರತಿಯೊಬ್ಬ ಮಹಿಳೆಯ ಕನಸು.
ಈ ಕಲ್ಲನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಹೆಂಗಸರು ಗರ್ಭಿಣಿಯಾಗುತ್ತಾರೆ..! ಇದು ಕಟ್ಟು ಕಥೆ ಅಲ್ಲ, ಸತ್ಯ.. title=

Mysterious Birthing Stone : ಮಗುವಿಗೆ ಜನ್ಮ ನೀಡುವುದು ಪ್ರತಿಯೊಬ್ಬ ಮಹಿಳೆಯ ಕನಸು. ಇದು ಅವರಿಗೆ ಹೆಮ್ಮೆಯ ಸಂಗತಿ... ಪೋರ್ಚುಗಲ್ನಲ್ಲಿ ಒಂದು ಕಲ್ಲು ತಾಯಿತನ ನೀಡುತ್ತೆ ಅಂದ್ರೆ ನಂಬುತ್ತೀರಾ.. ಹೌದು.. ಜನ್ಮಗಲ್ಲು ಅಥವಾ ಮಕ್ಕಳನ್ನು ಹೆರುವ ಪರ್ವತ ಎಂದು ಕರೆಯಲಾಗುವ ಈ ಕಲ್ಲು ಮಹಿಳೆಯರಿಗೆ ಗರ್ಭಿಣಿಯಾಗಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಪ್ರಪಂಚದಾದ್ಯಂತದ ಮಹಿಳೆಯರು ಈ ಅದ್ಭುತ ಕಲ್ಲುಗಾಗಿ ಪೋರ್ಚುಗಲ್ಗೆ ಬರುತ್ತಾರೆ. 

ಪೋರ್ಚುಗಲ್‌ನಲ್ಲಿ ಮದರ್-ರಾಕ್ ಎಂಬ ಬೃಹತ್ ಬಂಡೆಯಿದೆ. ಈ ಕಲ್ಲು ಮಹಿಳೆಯರು ಗರ್ಭ ಧರಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ.. ಈ ವಿಚಾರ ನಂಬಲು ಕಷ್ಟವಾಗಬಹುದು ಆದರೆ ಸ್ಥಳೀಯರು ಇದನ್ನು ನಿಜವೆಂದು ನಂಬುತ್ತಾರೆ. ದೂರದೂರುಗಳಿಂದ ಮಹಿಳೆಯರು ಗರ್ಭ ಧರಿಸುವ ನಿರೀಕ್ಷೆಯಿಟ್ಟುಕೊಂಡು ಇಲ್ಲಿದೆ ಬರುತ್ತಾರೆ. ಇದರ ಕಲ್ಲನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಹಿಳೆಯರು ಮಲಗಿದರೆ ತಕ್ಷಣ ಗರ್ಭವತಿಯಾಗುತ್ತಾರೆ ಎಂಬ ನಂಬಿಕೆ ಇದೆ. 

ಇದನ್ನೂ ಓದಿ:ಟಿಕ್‌ಟಾಕ್‌ನ ಹೊಸ ಮಾಲೀಕರಾಗ್ತಾರಾ ಎಲೋನ್ ಮಸ್ಕ್? ಮತ್ತೇ ಭಾರತಕ್ಕೆ ಬರುತ್ತಾ!

ಉತ್ತರ ಪೋರ್ಚುಗಲ್‌ನಲ್ಲಿರುವ ಈ ಪರ್ವತವನ್ನು ಮದರ್ ರಾಕ್ ಅಥವಾ ಪ್ರೆಗ್ನೆಂಟ್ ಸ್ಟೋನ್ ಅಂತ ಕರೆಯುತ್ತಾರೆ. ಇದು ಒಂದು ಸಣ್ಣ ಮರಿ ಕಲ್ಲಿಗೆ ಜನ್ಮ ನೀಡುವ ಪರ್ವತ. ಸುಮಾರು ಒಂದು ಕಿಲೋಮೀಟರ್ ಉದ್ದ ಮತ್ತು 600 ಮೀಟರ್ ಅಗಲ ಇದೆ.. ವಿಚಿತ್ರ ಅಂದ್ರೆ ಈ ಬಂಡೆಯ ಮೇಲ್ಭಾಗದಿಂದ 2 ರಿಂದ 12 ಸೆಂ.ಮೀ ಕಲ್ಲುಗಳು ಹೊರಬರುತ್ತಲೇ ಇರುತ್ತವೆ. ಇವುಗಳನ್ನು ಬೆಟ್ಟದ ಮಕ್ಕಳು ಅಂತ ಇಲ್ಲಿನ ಜನ ಕರೆಯುತ್ತಾರೆ.

ಈ ಕಲ್ಲುಗಳು ಸುಮಾರು 300 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ. ಇದರ ಹೊರ ಪದರವು ಬಯೋಟೈಟ್ ನಿಂದ ಮಾಡಲ್ಪಟ್ಟಿದೆ. ಇದು ಮಳೆ ಮತ್ತು ಇಬ್ಬನಿ ನೀರನ್ನು ಹೀರಿಕೊಳ್ಳುತ್ತದೆ. ಈ ನೀರು ಹೆಪ್ಪುಗಟ್ಟಿದಾಗ ಈ ದೊಡ್ಡ ಬಂಡೆಯಿಂದ ಸಣ್ಣ ಕಲ್ಲುಗಳು ಹೊರಬರುತ್ತವೆ.. ಇವುಗಳು ಹೇಗೆ ಉತ್ಪತ್ತಿಯಾಗುತ್ತವೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ಅರ್ಥವಾಗಿಲ್ಲ. ಇದನ್ನೇ ಇಲ್ಲಿನ ಜನರು ಪವಾಡ ಅಂತ ನಂಬಿದ್ದಾರೆ..

ಇದನ್ನೂ ಓದಿ:ಹತ್ತಿರವಾಯಿತು ಮಹಾ ಪ್ರಳಯದ ದಿನ !ಭೂಪಟದಿಂದಲೇ ಮಾಯವಾಗಲಿದೆ ಈ ದೇಶ !ಮನೆ ಮಠ ಖಾಲಿ ಮಾಡಿ ತೆರಳುವಂತೆ ದೇಶವಾಸಿಗಳಿಗೆ ಸೂಚನೆ

ಮಹಿಳೆಯು ಗರ್ಭಿಣಿಯಾಗಲು ಬಯಸಿದರೆ ಈ ಕಲ್ಲನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ಪ್ರಕ್ರಿಯೆ ಅವಳನ್ನು ಗರ್ಭಧಾರಣೆಯನ್ನು ಖಚಿತಪಡಿಸುತ್ತದೆ ಎಂದು ಎಲ್ಲಿನ ಜನರ ನಂಬಿಕೆ... ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.. ಇದು ಸತ್ಯ ಎಂಬುವುದು ಜನರ ನಂಬಿಕೆ ಮಾತ್ರ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News