ಹಾವಿನ ತಲೆಯಲ್ಲಿಯೂ ಹೇನು ಹುಡುಕುತ್ತಿರುವ ಕೋತಿ ! ಮಂಗಾಟದ ವಿಡಿಯೋ ಇಲ್ಲಿದೆ

monkey viral Video : ಇಲ್ಲೊಂದು ಮಂಗ ಹಾವಿನೊಂದಿಗೆ ಕೂಡಾ ಮಂಗಾಟಕ್ಕೆ ಇಳಿದಿದೆ. ಅದು ಕೂಡಾ ಭಯಂಕರ ವಿಷ ಸರ್ಪದೊಂದಿಗೆ.

Written by - Ranjitha R K | Last Updated : Nov 6, 2023, 04:29 PM IST
  • ವೈರಲ್ ಆಗುತ್ತಿದೆ ಈ ವಿಡಿಯೋ
  • ಹಾವು ಮತ್ತು ಕೋತಿಯ ವಿಡಿಯೋ ಇದು
  • ನಕ್ಕು ನಗಿಸುವ ವಿಡಿಯೋ ಇದು
ಹಾವಿನ ತಲೆಯಲ್ಲಿಯೂ ಹೇನು ಹುಡುಕುತ್ತಿರುವ  ಕೋತಿ ! ಮಂಗಾಟದ ವಿಡಿಯೋ ಇಲ್ಲಿದೆ  title=

monkey viral Video : ಪ್ರತಿದಿನ ಅನೇಕ ತಮಾಷೆಯ ಮತ್ತು ಅದ್ಭುತ ವೀಡಿಯೊಗಳು  ಇಂಟರ್ನೆಟ್ ನಲ್ಲಿ ಟ್ರೆಂಡ್ ಆಗುತ್ತಲೇ ಇರುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಜನರನ್ನು ಬೆರಗುಗೊಳಿಸುತ್ತವೆ. ಇನ್ನು ಕೆಲವು ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತದೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಜನರ ಹುಬ್ಬೇರಿಸಿದೆ. ಹಾವುಗಳೆಂದರೆ ಮನುಷ್ಯರೇ ಆಗಲಿ, ಪ್ರಾಣಿಗಳಾಗಲಿ ಭಯಪಡುವವರೇ ಹೆಚ್ಚು.  ಆದರೆ ಇಲ್ಲೊಂದು ಮಂಗ ಹಾವಿನೊಂದಿಗೆ ಕೂಡಾ ಮಂಗಾಟಕ್ಕೆ ಇಳಿದಿದೆ. ಅದು ಕೂಡಾ ಭಯಂಕರ ವಿಷ ಸರ್ಪದೊಂದಿಗೆ. 

ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮರದ ಮೇಲೆ ಕುಳಿತಿರುವ ಮಂಗವೊಂದನ್ನು ಕಾಣಬಹುದು. ಅಲ್ಲೇ ಕೆಳಗೆ ಒಂದು ಹಾವು ಕೂಡಾ ಕಾಣಿಸುತ್ತದೆ. ಮರದ ಮೇಲಿರುವ ಮಂಗ ಹಾವನ್ನು ಅದೇನೋ ಹಗ್ಗ ಎನ್ನುವಂತೆ ಕೈಯ್ಯಲ್ಲಿ ಎತ್ತಿಕೊಳ್ಳುತ್ತದೆ. ಹಾವಿನ ಬಾಲ ಹಿಡಿದು ಆಟವಾಡುತ್ತಿದೆ. ಹಾವು ಕೂಡಾ ಆ ಮಂಗನಿಗೆ ಏನೂ ಮಾಡದೆ ಮಂಗನ ಕಾಟ ಸಹಿಸುತ್ತಿದೆ. 

ಇದನ್ನೂ ಓದಿ : Viral News: ಖ್ಯಾತ ರೆಸ್ಟೊರೆಂಟ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಸಿಗರೇಟ್!‌

ಈ ವಿಡಿಯೋದಲ್ಲಿರುವ ಮಂಗನಿಗೆ ಹಾವನ್ನು ಕಂಡು ಅದೇನನಿಸುತ್ತದೆಯೋ, ಆ ಹಾವಿನ ಬಾಲವನ್ನು ಹಿಡಿದು ಬಾಯಿಯೊಳಗೆ ಹಾಕಲು ಹೊರಡುತ್ತದೆ. ಆ ಮಂಗನಿಗೆ ಹಾವಿನ ತಲೆಯಲ್ಲಿಯೂ ಹೇನು ಕಾಣುವಂತೆ ಆಡುತ್ತದೆ. 

 

ಇದನ್ನೂ ಓದಿ : ಇನ್ಸ್ಟಾಗ್ರಾಮ್ ರೀಲ್ ಗಾಗಿ ನಡುರಸ್ತೆಯಲ್ಲಿ ಯೋಗ ಮಾಡುತ್ತಿದ್ದವಳಿಗೆ ಪೋಲಿಸರಿಂದ ಕಾನೂನು ಪಾಠ...!

ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. d_shrestha10 ಎನ್ನುವ   ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೆ 55,000 ಲೈಕ್‌ ಸಿಕ್ಕಿದೆ. ಇದಲ್ಲದೆ, ಈ ವೀಡಿಯೊಗೆ ಅನೇಕ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News