ನಟಿ ಮೀನಾರ ಮಗಳು ಕೂಡ ಪ್ರಖ್ಯಾತ ಬಾಲನಟಿ! ಅಂದದಲ್ಲಿ ಅಮ್ಮನ ಪಡಿಯಚ್ಚು... 6ರ ಹರೆಯದಲ್ಲೇ ಸ್ಟಾರ್‌ ಆಗಿ ಮಿಂಚುತ್ತಿರುವ ಈ ʼಬೊಂಬೆʼ ಹೇಗಿದ್ದಾಳೆ ನೋಡಿ

Meena daughter Nainika Vidyasagar: ಮೀನಾ ದುರೈರಾಜ್... ಕನ್ನಡ ಪ್ರೇಕ್ಷಕರಿಗೆ ಮೀನಾ ಎಂದೇ ಚಿರಪರಿಚಿತವಾಗಿರುವ ನಟಿ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಮೀನಾ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಮೀನಾ ದುರೈರಾಜ್... ಕನ್ನಡ ಪ್ರೇಕ್ಷಕರಿಗೆ ಮೀನಾ ಎಂದೇ ಚಿರಪರಿಚಿತವಾಗಿರುವ ನಟಿ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಮೀನಾ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು.

2 /7

ಕನ್ನಡದಲ್ಲೂ ಅನೇಕ ಸಿನಿಮಾಗಳನ್ನು ಮಾಡಿರುವ ನಟಿ ಮೀತಾ, ಸ್ವಾತಿ ಮುತ್ತು, ಪುಟ್ನಂಜ, ಸೂರ್ಯವಂಶದಲ್ಲಿ ನಟಿಸಿ ಸೈಎನಿಸಿಕೊಂಡಿದ್ದಾರೆ. ಅಂದಹಾಗೆ ಇವರಷ್ಟೇ ಅಲ್ಲ, ಮೀನಾ ಅವರ ಮಗಳು ಕೂಡ ಸಿನಿಮಾ ನಟಿ. ಬಾಲನಟಿಯಾಗಿ ಮಿಂಚುತ್ತಿರುವಾಕೆ.  

3 /7

ನೈನಿಕಾ ವಿದ್ಯಾಸಾಗರ್... ಪ್ರಶಸ್ತಿ ವಿಜೇತ ನಟಿ ಮೀನಾ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ದಿವಂಗತ ವಿದ್ಯಾಸಾಗರ್ ಅವರ ಪುತ್ರಿ. ನೈನಿಕಾ ಮಲಯಾಳಂ ಮತ್ತು ತಮಿಳು ಸಿನಿಮಾ, ವೆಬ್ ಸೀರೀಸ್ ಮತ್ತು ಟಿವಿ ಶೋಗಳಲ್ಲಿ ಬಾಲನಟಿ, ರೂಪದರ್ಶಿಯಾಗಿ ಕೆಲಸ ಮಾಡುತ್ತಾರೆ.  

4 /7

ಇನ್ನು ನೈನಿಕಾ ಅವರು, ತಮಿಳು ನಟ ವಿಜಯ್‌ ಜೊತೆ ತೆರಿ (2016) ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದಲ್ಲದೆ, ಪೊಲೀಸೊಡು (2018), ಪೊಲೀಸ್ (2018), ಭಾಸ್ಕರ್ ಒರು ರಾಸ್ಕಲ್ (2018) ಮತ್ತು ಲೈವ್ ಟೆಲಿಕಾಸ್ಟ್ (2021) ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ

5 /7

ನೈನಿಕಾಗೆ ತನ್ನ ತಾಯಿ ಮೀನಾ ಅವರೇ ಸ್ಪೂರ್ತಿಯಂತೆ. 2016 ರಲ್ಲಿ ವಿಜಯ್ ಮತ್ತು ಸಮಂತಾ ಅಕ್ಕಿನೇನಿ ನಟಿಸಿದ ತೆರಿ ಚಿತ್ರದ ಮೂಲಕ ಆರನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

6 /7

ಈ ಹಿಂದೆ ತಾಯಂದಿರ ದಿನದ ವಿಶೇಷ ಅಂಗವಾಗಿ ʼಎಂಡೆ ಅಮ್ಮಾ ಸೂಪರಾʼ ಕಾರ್ಯಕ್ರಮದಲ್ಲಿ ನೈನಿಕಾ ಕಾಣಿಸಿಕೊಂಡಿದ್ದರು. ಅಂದು ತನ್ನ ತಾಯಿ ಬಗ್ಗೆ ಅದ್ಭುತವಾಗಿ ಮಾತನಾಡಿದ್ದಲ್ಲದೆ, ಆಕೆಯೇ ನನಗೆ ಅತ್ಯುತ್ತಮ ಸ್ಫೂರ್ತಿ ಎಂದು ಹೇಳಿದ್ದರು ನೈನಿಕಾ.

7 /7

ಜೊತೆಗೆ ಇದೇ ಸಂದರ್ಭದಲ್ಲಿ ತನ್ನ ತಾಯಿ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆಯೂ ಪ್ರತಿಕ್ರಿಸಿದ್ದ ಆಕೆ, "ನನ್ನ ತಾಯಿ 2ನೇ ಬಾರಿ ಗರ್ಭಿಣಿಯಲ್ಲ; ಆಕೆಯನ್ನು ನೆಮ್ಮದಿಯಾಗಿ ಬದುಕಲು ಬಿಡಿ" ಎಂದು ಹೇಳಿದ್ದರು. ಈ ಮಾತಿಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಕೂಡ ಕಣ್ಣೀರಿಟ್ಟಿದ್ದರು.