ಒಂದೇ Reels ಮೂಲಕ ಗಿನ್ನಿಸ್ ದಾಖಲೆ ಬರೆದ ಯುವಕ..! ಬ್ಯಾಕ್‌.. ಫ್ರಂಟ್‌ ತೋರಿಸೋದು ಬಿಟ್ಟು ಈ ರೀತಿ ವಿಡಿಯೋ ಮಾಡಿ..

Reel got Guinness record : ಆಗೊಮ್ಮೆ ಈಗೊಮ್ಮೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಆದರೆ ಯುವಕನೊಬ್ಬನ ವಿಡಿಯೋ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದೆ. ಅಸಲಿಗೆ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..

Written by - Krishna N K | Last Updated : Jan 19, 2025, 01:19 PM IST
    • ಆಗೊಮ್ಮೆ ಈಗೊಮ್ಮೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡುತ್ತಿರುತ್ತೇವೆ.
    • ಪ್ರತಿದಿನ ಹಲವಾರು ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ವೈರಲ್ ಆಗುತ್ತಿವೆ.
    • ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬನ ವೀಡಿಯೊ ಹೊಸ ದಾಖಲೆ ಮಾಡಿದೆ..
ಒಂದೇ Reels ಮೂಲಕ ಗಿನ್ನಿಸ್ ದಾಖಲೆ ಬರೆದ ಯುವಕ..! ಬ್ಯಾಕ್‌.. ಫ್ರಂಟ್‌ ತೋರಿಸೋದು ಬಿಟ್ಟು ಈ ರೀತಿ ವಿಡಿಯೋ ಮಾಡಿ.. title=

World's most viewed reel : ಪ್ರತಿದಿನ ಹಲವಾರು ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ವೈರಲ್ ಆಗುತ್ತಿವೆ. ಹಾಸ್ಯ, ಸಾಹಸ, ಆಶ್ಚರ್ಯ ಇತ್ಯಾದಿಗಳನ್ನು ಒಳಗೊಂಡಿರುವ ವೀಡಿಯೊಗಳು ಸುಲಭವಾಗಿ ಜನರನ್ನು ಆರ್ಕಷಿಸುತ್ತವೆ. ಆ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬನ ವೀಡಿಯೊ ಹೊಸ ದಾಖಲೆ ಮಾಡಿದೆ..

ಹೌದು.. ಯುವಕನ ರೀಲ್ಸ್‌ ಒಂದು ಇನ್‌ಸ್ಟಾಗ್ರಾಮ್‌ನಲ್ಲಿ 554 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆಯನ್ನು ಮಾಡಿದೆ. ಇದರಿಂದಾಗಿ ಯುವಕ ಗಿನ್ನಿಸ್ ದಾಖಲೆ ಬರೆದಿದ್ದಾನೆ. ಅಸಲಿಗೆ ವಿಡಿಯೋದಲ್ಲಿ ಏನಿದೆ..? ದಾಖಲೆ ಹೇಗೆ ಬರೆದಿದೆ ಅಂತ ನೋಡೋಣ.. 

ಇದನ್ನೂ ಓದಿ:ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು? ಯೋಚಿಸಿ ಉತ್ತರಿಸಿ

ಕೇರಳದ ಮೊಹಮ್ಮದ್ ರಿಜ್ವಾನ್ ಎಂಬ ಯುವಕ 2023 ರಲ್ಲಿ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಜಲಪಾತದಲ್ಲಿ ಫುಟ್ಬಾಲ್ ಆಡುತ್ತಿರುವ ವಿಡಿಯೋ ಅದು. ಪೋಸ್ಟ್ ಮಾಡಿದ 10 ನಿಮಿಷಗಳಲ್ಲಿ, ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. 

ವೀಡಿಯೊವನ್ನು ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ 92 ಲಕ್ಷ ವೀಕ್ಷಣೆಗಳನ್ನು (9.2 ಮಿಲಿಯನ್) ಮತ್ತು 42,000 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಕಳೆದ ಜನವರಿ 8, 2024 ರಂದು ಇದು ದಾಖಲೆ ಎಂದು ಘೋಷಿಸಲ್ಪಟ್ಟಿತು. ನಂತರ ಅದೇ ಜಲಪಾತದಲ್ಲಿ ಗಿನ್ನೆಸ್ ವಿಶ್ವ ದಾಖಲೆಯೊಂದಿಗೆ ಯುವಕನ ನಿಂತು ವೀಡಿಯೊವನ್ನು ಹಂಚಿಕೊಂಡಿದ್ದಾನೆ..

ಇದನ್ನೂ ಓದಿ:ಭಾರತದ ʼಸಕ್ಕರೆ ಬಟ್ಟಲುʼ ಎಂದು ಕರೆಯಲ್ಪಡುವ ರಾಜ್ಯ ಯಾವುದು ಗೊತ್ತಾ?

ಮಧು ರಿಜ್ವಾನ್ ತನ್ನ 21ನೇ ವಯಸ್ಸಿನಲ್ಲೇ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗದೆ. ತನ್ನ ಅದ್ಭುತ ಫುಟ್ಬಾಲ್ ಕೌಶಲ್ಯದಿಂದ ಅನೇಕರ ಗಮನ ಸೆಳೆದಿದ್ದಾರೆ ಎಂದರೆ ಅತಿಶಯೋಕ್ತಿಯಾಗಬಹುದು. ರಿಜ್ವಾನ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಇಲ್ಲಿಯವರೆಗೆ ಈ ಫುಟ್ಬಾಲ್ ವೀಡಿಯೊ 554 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ ಎಂಬುದು ಗಮನಾರ್ಹ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News