ಧಾರವಾಡದಲ್ಲಿ ಓದುತ್ತಿದ್ದ ಈ ಹುಡುಗ ಬಾಲಿವುಡ್ ನಿರ್ಮಾಪಕಿಯನ್ನೇ ಮದುವೆಯಾಗಿದ್ದು ಹೇಗೆ ಗೊತ್ತಾ?

ಹೌದು, ನೀವು ನಂಬಲೇಬೇಕು.ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ?  ಆ ಯುವಕ ಬೇರೆ ಯಾರೂ ಅಲ್ಲ ಶಿರಿಸ್ ಕುಂದರ್,ಹೌದು, ಈ ಯುವಕ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಪದವಿ ಪಡೆದು ಮುಂದೆ ಕೆಲವು ವರ್ಷಗಳ ಕಾಲ ಮೊಟೊರೊಲಾದಲ್ಲಿ ಕೆಲಸ ಮಾಡಿದರು.

Written by - Manjunath N | Last Updated : Jan 18, 2025, 03:51 PM IST
  • ಫರಾ ಖಾನ್ 80 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೂರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ,
  • ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಧಾರವಾಡದಲ್ಲಿ ಓದುತ್ತಿದ್ದ ಈ ಹುಡುಗ ಬಾಲಿವುಡ್ ನಿರ್ಮಾಪಕಿಯನ್ನೇ ಮದುವೆಯಾಗಿದ್ದು ಹೇಗೆ ಗೊತ್ತಾ?  title=

 ಬಾಲಿವುಡ್ ಎಂದರೆ ಒಂದು ರೀತಿ ಬಣ್ಣದ ಲೋಕ, ಈ ಬಣ್ಣದ ಲೋಕದಲ್ಲಿ ಹಲವು ತಾರಾಮಣಿಗಳ ಸ್ಟೋರಿಯನ್ನು ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ? ಹೌದು, ಅದು ಅನೈತಿಕ ಸಂಬಂಧವಾಗಿರಬಹುದು, ಅಥವಾ ಇನ್ನಿತರ ಗಾಸಿಫ್ ಗಳಾಗಿರಬಹುದು ಎಲ್ಲದರಲ್ಲೂ ಅದೊಂದು ರೀತಿಯ ವಿಚಿತ್ರ ಪ್ರಪಂಚ ಎಂದೇ ಹೇಳಬಹುದು.ಇದರಲ್ಲಿ ಕೆಲವು ಕಥಾನಕಗಳು ರೋಚಕವಾಗಿದ್ದರೆ ಇನ್ನೂ ಕೆಲವು ಭಯಾನಕವಾಗಿರುತ್ತವೆ.ಈಗ ನಾವು ನಿಮಗೆ ನೀವೆಂದೂ ಕೇಳಿರದ ರೋಚಕ ಸ್ಟೋರಿಯೊಂದನ್ನು ಹೇಳುತ್ತೇವೆ.

ಬಾಲಿವುಡ್ ನಲ್ಲಿ ನಿರ್ಮಾಪಕಿ ಹಾಗೂ ನಿರ್ದೇಶಕಿ ಫರಾ ಖಾನ್ ಎಂದರೆ ಯರಿಗೆ ತಾನೇ ಗೊತ್ತಿಲ್ಲ ಹೇಳಿ,ಘಟಾನುಘಟಿ ಸಿನಿಮಾ ತಾರೆಯರ ಚಿತ್ರಗಳನ್ನು ನಿರ್ದೆಶಿಸುವುದಲ್ಲದೆ ಅವುಗಳನ್ನು ನಿರ್ಮಿಸಿದ ಕೀರ್ತಿ ಫರಾ ಖಾನ್ ಗೆ ಸಲ್ಲುತ್ತದೆ.ಮೈ ಹೂಂ ನಾ, ಓಂ ಶಾಂತಿ ಓಂ, ತೀಸ್ ಮಾರ್ ಖಾನ್,ಹ್ಯಾಪಿ ನ್ಯೂ ಯಿಯರ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನೂ ನಿರ್ಮಿಸುವ ಮೂಲಕ ಇಂದಿಗೂ ಕೂಡ ಬಾಲಿವುಡ್ ನಲ್ಲಿ ಅಗ್ರಗಣ್ಯ ನಿರ್ಮಾಪಕಿ ಹಾಗೂ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.

ಇದಷ್ಟೇ ಅಲ್ಲದೆ ಫರಾ ಖಾನ್ 80 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೂರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ,ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.Image

ಇಂತಹ ನಟಿ ಈಗ ತನಗಿಂತಲೂ ಕಿರಿಯನಾಗಿದ್ದ ಧಾರವಾಡದ ಎಸ್.ಡಿ.ಎಂ.ಕಾಲೇಜಿನಲ್ಲಿ ಓದುತ್ತಿದ್ದ ಯುವಕನನ್ನು ಮದುವೆಯಾಗಿದ್ದಾರೆ ಎಂದರೆ ನಂಬುತ್ತಿರಾ? 

ಹೌದು, ನೀವು ನಂಬಲೇಬೇಕು.ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ?  ಆ ಯುವಕ ಬೇರೆ ಯಾರೂ ಅಲ್ಲ ಶಿರಿಸ್ ಕುಂದರ್,ಹೌದು, ಈ ಯುವಕ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಪದವಿ ಪಡೆದು ಮುಂದೆ ಕೆಲವು ವರ್ಷಗಳ ಕಾಲ ಮೊಟೊರೊಲಾದಲ್ಲಿ ಕೆಲಸ ಮಾಡಿದರು. ತದನಂತರ 2001 ರಲ್ಲಿ ಚಾಂಪಿಯನ್ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದರು.ಮುಂದೆ ಫರಾ ಖಾನ್ ಅವರ ಮೈ ಹೂ ನಾ (2004) ಚಿತ್ರವನ್ನು ನಿರ್ದೇಶಿಸಿದಾಗ ಅವರ ಜೊತೆ ಕೆಲಸ ಮಾಡಿದ ಶಿರಿಸ್ ಕುಂದರ್,  ಡಿಸೆಂಬರ್ 9, 2004 ರಂದು ಫರಾ ಖಾನ್ ಅವರನ್ನು ಮದುವೆಯಾದರು.

ನಂತರ ನಿರ್ದೇಶನದತ್ತ ಮುಖ ಮಾಡಿದ ಶಿರಿಸ್ ಕುಂದರ್ ಚೊಚ್ಚಲ ಚಿತ್ರ ಜಾನ್-ಎ-ಮನ್, ಇದಕ್ಕಾಗಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ, ಜೊತೆಗೆ ಹಿನ್ನೆಲೆ ಸಂಗೀತ ಸಂಯೋಜನೆಯನ್ನು ಸಹ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರೀತಿ ಜಿಂಟಾ ನಟಿಸಿದ್ದು,ಅಕ್ಟೋಬರ್ 20, 2006 ರಂದು ಈ ಚಿತ್ರ ಬಿಡುಗಡೆಯಾಯಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News