Viral Video : ಸ್ನೇಹಿತರ ಈ ಕೆಲಸದಿಂದ ಎಲ್ಲೆರೆದುರು ಮುಜುಗರಕ್ಕೊಳಗಾದ ವರ ! ಯಾರಿಗೂ ಬೇಡ ಇಂಥ ಗೆಳೆಯರು

Wedding Viral Video : ಇದೀಗ ಮದುವೆಯ ಸೀಸನ್ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಮದುವೆಗೆ ಸಂಬಂಧಿಸಿದ ನಾನಾ ವಿಡಿಯೋಗಳು ಕಾಣ ಸಿಗುತ್ತವೆ. 

Written by - Ranjitha R K | Last Updated : Apr 3, 2023, 01:49 PM IST
  • ಮದುವೆ ಮನೆ ಅಂದ ಮೇಲೆ ಅಲ್ಲಿ ನಗು, ಕೇಕೆ ಗದ್ದಲ ಇದ್ದೇ ಇರುತ್ತದೆ.
  • ವರನ ಜೊತೆ ಸ್ನೇಹಿತರ ತಮಾಷೆ
  • ವೈರಲ್ ಆಯಿತು ತಮಾಷೆಯ ವಿಡಿಯೋ
Viral Video : ಸ್ನೇಹಿತರ ಈ ಕೆಲಸದಿಂದ ಎಲ್ಲೆರೆದುರು ಮುಜುಗರಕ್ಕೊಳಗಾದ ವರ ! ಯಾರಿಗೂ ಬೇಡ ಇಂಥ ಗೆಳೆಯರು  title=

Viral Video : ಮದುವೆ ಮನೆ ಅಂದ ಮೇಲೆ ಅಲ್ಲಿ ನಗು, ಕೇಕೆ ಗದ್ದಲ ಇದ್ದೇ ಇರುತ್ತದೆ. ಒಂದಷ್ಟು ತಮಾಷೆಯ ಸನ್ನಿವೇಶಗಳು ಕೂಡಾ ನಡೆದು ಹೋಗುತ್ತವೆ. ಮಾಡುವೆ ಮನೆಯಲ್ಲಿ ವಧು ಮತ್ತು ವರನ ಸ್ನೇಹುತರದ್ದು ಒಂದು ಕೈ ಮೇಲೆಯೇ ಆಗಿರುತ್ತದೆ. ಮದುವೆ ಮನೆ ತುಂಬಾ ಓಡಾಟ, ತಮಾಷೆ ಹೀಗೆ ಮುಂದುವರೆಯುತ್ತದೆ ಅವರ ಆಟ. ಆ ಒಂದು ದಿನ ಸ್ನೇಹಿತರನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟ. ಆದರೆ, ಕೆಲವೊಮ್ಮೆ ಸ್ನೇಹಿತರ ತಮಾಷೆ ವಧು ವರರನ್ನು ಮುಜುಗರಕ್ಕೆ ಗುರಿ ಮಾಡಿಬಿಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಅಂಥಹ ಕೆಲವೊಂದು ವಿಡಿಯೋಗಳು ಕಾಣ ಸಿಗುತ್ತವೆ. ಈ ಪೈಕಿ ಕೆಲವು ವಿಡಿಯೋಗಳು ಬಹಳ ವೈರಲ್ ಆಗಿ ಬಿಡುತ್ತವೆ. 

ಇಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿರುವುದನ್ನು ನೋಡಬಹುದು. ವಧು ವರ ಹಾರ ಬದಲಾಯಿಸುತ್ತಿರುವುದನ್ನು ಕಾಣಬಹುದು. ಹೀಗೆ ಹಾರ ಬದಲಾಯಿಸುತ್ತಿರುವ ವೇಳೆ ವರನ ಸ್ನೇಹಿತರು ಪಟಾಕಿ ಸಿಡಿಸಿದ್ದಾರೆ. ಈ ಸದ್ದಿಗೆ ವರ ಬೆಚ್ಚಿ ಬಿದ್ದು ತಬ್ಬಿಬ್ಬಾಗಿದ್ದಾನೆ. ವರನ ಸ್ಥಿತಿ ಕಂಡು ನೆಂಟರಿಷ್ಟರು ಸ್ನೇಹಿತರು ನಕ್ಕು ನಕ್ಕು ಸುಸ್ತಾಗಿದ್ದಾರೆ. 

ಇದನ್ನೂ ಓದಿ : Viral Video : ಕಾಲೇಜಿಗೆ ಹೋಗಿ ಓದಿ ಉದ್ಧಾರಾಗಿ ಅಂದ್ರೆ.. ಗ್ರೌಂಡ್‌ನಲ್ಲಿ ಸ್ಕೂಟರ್‌ ಮೇಲೆ ಈ ಯುವಕ - ಯುವತಿ ಮಾಡೋದೇನು ನೋಡಿ!

ಸರಿಯಾಗಿ ಗಮನಿಸಿ ನೋಡಿದರೆ ವರ ಮಂಟಪ ಬಿಟ್ಟು ಓಡುವುದಕ್ಕೂ ರೆಡಿ ಇದ್ದ ಅನ್ನಿಸುತ್ತದೆ. ಆದರೆ ತಕ್ಷಣ ಅದು ತಮಾಷೆ ಎನ್ನುವುದು ಕೂಡಾ ವರನಿಗೆ ತಿಳಿಯಿತು. ಆದರೂ ಮುಜುಗರಕ್ಕೆ ಒಳಪಟ್ಟ ವರ ಸ್ನೇಹಿತರ ಮೇಲೆ ಸಿಟ್ಟು ಮಾಡಿಕೊಳ್ಳುವುದನ್ನು ಕೂಡಾ ಇಲ್ಲಿ ಕಾಣಬಹುದು. 

 

ಇದನ್ನೂ ಓದಿ Viral Video: 'ನಾವು ಸಲಿಂಗಕಾಮಿಗಳನ್ನು ತಯಾರಿಸುವ ಉದ್ಯಮ ಸ್ಥಾಪಿಸಿದ್ದೇವೆ' ಮದರಸಾಗಳ ಕುರಿತು ಪಾಕ್ ಮೌಲ್ವಿ ಹೇಳಿಕೆ ಭಾರಿ ವೈರಲ್!

ವೀಡಿಯೊವನ್ನು _naughtyfamily ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು  8.6 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈ ವೀಡಿಯೊವನ್ನು ವೀಕ್ಷಿಸಿದವರು ಕೂಡಾ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

 

Trending News