ಬೆಂಗಳೂರು : Truecaller ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಪ್ರತಿಯೊಬ್ಬರೂ ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಈ ಆಪ್ ಮೂಲಕ ಫೋನ್ ಮಾಡುತ್ತಿರುವವರು ಯಾರು ಎನ್ನುವುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಅಪರಿಚಿತ ಸಂಖ್ಯೆಯಿಂದ ಫೋನ್ ಬಂದಾಗಲೂ ಕರೆ ಮಾಡಿದವರು ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದು. ಈ ಆಪ್ ಮೂಲಕ ಸ್ಪ್ಯಾಮ್ ಕರೆಗಳನ್ನು ಪತ್ತೆ ಹಚ್ಚುವುದು ಕೂಡಾ ಸಾಧ್ಯವಾಗುತ್ತದೆ. ಆದರೆ ಈಗ ಯಾವುದೇ ಅಪ್ಲಿಕೇಶನ್ ಇಲ್ಲದೆಯೇ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ಕಂಡುಹಿಡಿಯಬಹುದು.
TRAI ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ :
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ದೇಶದ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸ್ಪ್ಯಾಮ್ ಕರೆಗಳನ್ನು ತಪ್ಪಿಸಲು ಸಹಾಯ ಮಾಡುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಅನುಕೂಲವಾಗುವಂಥಹ ವ್ಯವಸ್ಥೆಯನ್ನು ರಚಿಸಲು TRAI ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಈ ಒಂದು ಸಾಧನವನ್ನು ಹೊರ ಹಾಕಿದರೆ ಮೂರು ಸಾವಿರದಷ್ಟು ಕಡಿಮೆಯಾಗುತ್ತದೆ ವಿದ್ಯುತ್ ಬಿಲ್
ಕರೆಯ ಸಮಯದಲ್ಲಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ ಹೆಸರು :
TRAI ಕಾರ್ಯನಿರ್ವಹಿಸಲು ಯೋಜಿಸುತ್ತಿರುವ ವ್ಯವಸ್ಥೆಯು ಸ್ಮಾರ್ಟ್‌ಫೋನ್ ಬಳಕೆದಾರರ KYC ವಿವರಗಳನ್ನು ಆಧರಿಸಿರುತ್ತದೆ. ಈ ಹೊಸ ಕಾಲರ್ ಐಡಿ ವೈಶಿಷ್ಟ್ಯವು ಬಳಕೆದಾರರ ಅನುಮತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಕಡ್ಡಾಯವಾಗಿರುವುದಿಲ್ಲ. ಟೆಲಿಕಾಂ ಕಂಪನಿಗಳ ಚಂದಾದಾರರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕೇ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ಪ್ರಸ್ತುತ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, TRAI ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡುತ್ತದೆ. ಈ ಫೀಚರ್ ಬಂದರೆ, ನಂತರ ಟ್ರೂಕಾಲರ್ ನಂತಹ ಆಪ್ ಗಳ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ : Data Plans: ಈ ಟೆಲಿಕಾಂ ಕಂಪನಿಯ ಒಂದು ಡೇಟಾ ಪ್ಲಾನ್ 100ಜಿಬಿ ಹೆಚ್ಚುವರಿ ಡೇಟಾ ಅವಶ್ಯಕತೆಯನ್ನು ಪೂರೈಸುತ್ತದೆ, ಬೆಲೆ ರೂ.19 ರಿಂದ ಆರಂಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ