ಮಾರುತಿ ಎರ್ಟಿಗಾಕ್ಕಿಂತಲೂ ಅಗ್ಗ ಈ 7-ಸೀಟರ್ ಕಾರು! ವೈಶಿಷ್ಟ್ಯ ಮಾತ್ರ ಟಾಪ್ ರೇಟೆಡ್ !

ಕಂಪನಿಯು ಹೊಸ 7-ಸೀಟರ್ MPV ಅನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದರ ಆರಂಭಿಕ ಬೆಲೆ ಮಾರುತಿ ಎರ್ಟಿಗಾಕ್ಕಿಂತ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ.

Written by - Ranjitha R K | Last Updated : Feb 7, 2023, 09:34 AM IST
  • ಎಕ್ಸ್-ಟ್ರಯಲ್ ಮತ್ತು ಕಶ್ಕೈ ಎಸ್‌ಯುವಿಗಳ ಬಗ್ಗೆ ಖಚಿತ ಮಾಹಿತಿ
  • ಅವುಗಳು ಪ್ರಸ್ತುತ ಪರೀಕ್ಷಾ ಹಂತದಲ್ಲಿವೆ.
  • ನಿಸ್ಸಾನ್ ಎಕ್ಸ್-ಟ್ರಯಲ್ 2023 ರ ಮಧ್ಯದಲ್ಲಿ ಮಾರಾಟಕ್ಕೆ ಲಭ್ಯ
ಮಾರುತಿ ಎರ್ಟಿಗಾಕ್ಕಿಂತಲೂ ಅಗ್ಗ ಈ  7-ಸೀಟರ್ ಕಾರು! ವೈಶಿಷ್ಟ್ಯ ಮಾತ್ರ ಟಾಪ್ ರೇಟೆಡ್ !  title=

ಬೆಂಗಳೂರು : ಮುಂದಿನ ಕೆಲವು ವರ್ಷಗಳಲ್ಲಿ ನಿಸ್ಸಾನ್ ಇಂಡಿಯಾ ತನ್ನ UV (ಯುಟಿಲಿಟಿ ವೆಹಿಕಲ್)  ಪ್ರಾಡಕ್ಟ್ ಪೋರ್ಟ್ಫೋಲಿಯೊವನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಜಪಾನ್ ವಾಹನ ತಯಾರಕರು ಈಗಾಗಲೇ ಎಕ್ಸ್-ಟ್ರಯಲ್ ಮತ್ತು ಕಶ್ಕೈ ಎಸ್‌ಯುವಿಗಳ  ಬಗ್ಗೆ ಖಚಿತ ಮಾಹಿತಿ ಹಂಚಿಕೊಂಡಿದ್ದಾರೆ. ಅವುಗಳು ಪ್ರಸ್ತುತ ಪರೀಕ್ಷಾ ಹಂತದಲ್ಲಿವೆ. ನಿಸ್ಸಾನ್ ಎಕ್ಸ್-ಟ್ರಯಲ್ 2023 ರ ಮಧ್ಯದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಟೊಯೋಟಾ ಫಾರ್ಚುನರ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಇನ್ನು ವರದಿಗಳ ಪ್ರಕಾರ, ಕಂಪನಿಯು ಹೊಸ 7-ಸೀಟರ್ MPV ಅನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅದು ರೆನಾಲ್ಟ್ ಟೈಬರ್ ಅನ್ನು ಆಧರಿಸಿದೆ. ಈ ಮಾಡೆಲ್ ಅನ್ನು CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು.

ಹೊಸ ನಿಸ್ಸಾನ್ 7-ಸೀಟರ್ MPVಯ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಪವರ್‌ಟ್ರೇನ್ ಮತ್ತು ವೈಶಿಷ್ಟ್ಯಗಳನ್ನು ರೆನಾಲ್ಟ್ ಟ್ರೈಬರ್‌ ನಂತೆ ಇಟ್ಟಿರಬಹುದು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ಇದು 1.0L, 3-ಸಿಲಿಂಡರ್,  ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿರಬಹುದು. ಇದು 71bhp ಪವರ್ ಮತ್ತು 96Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಈ ಕಾರು ತಯಾರಕರು ಹೊಸ MPVಯನ್ನು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಪರಿಚಯಿಸುವ ಸಾಧ್ಯತೆ ಇದೆ. ಮ್ಯಾನ್ಯುವಲ್ ಮತ್ತು AMT ಗೇರ್ ಬಾಕ್ಸ್ ಎರಡನ್ನೂ ನೀಡುವ ಸಾಧ್ಯತೆ ಇದೆ. ಇದರ ಆರಂಭಿಕ ಬೆಲೆ ಮಾರುತಿ ಎರ್ಟಿಗಾಕ್ಕಿಂತ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : Flipkart Valentine Day Sale: ಪ್ರೇಮಿಗಳ ದಿನಕ್ಕೆ ಕಡಿಮೆ ಬೆಲೆಯಲ್ಲಿ ಸೂಪರ್ ಗಿಫ್ಟ್ ನೀಡಬೇಕೇ ? ಹಾಗಿದ್ದರೆ ಇಲ್ಲಿದೆ ಭರ್ಜರಿ ಸೇಲ್

ವಿನ್ಯಾಸದ ವಿಷಯದಲ್ಲಿ, ಹೊಸ ನಿಸ್ಸಾನ್ 7-ಸೀಟರ್ MPV ರೆನಾಲ್ಟ್ ಟೈಬರ್‌ಗಿಂತ ವಿಭಿನ್ನವಾಗಿ ಕಾಣಿಸುತ್ತದೆ. ಅದರ ವಿನ್ಯಾಸದ ಕೆಲವು ಅಂಶಗಳನ್ನು ನಿಸ್ಸಾನ್ ಮ್ಯಾಗ್ನೈಟ್ನಿಂದ ತೆಗೆದುಕೊಳ್ಳಬಹುದು. ಆದರೆ ಆಯಾಮಗಳ ವಿಷಯದಲ್ಲಿ ಇದು ಟ್ರೈಬರ್‌ನಂತೆಯೇ ಇರುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ರಿಮುವೇಬಲ್ ಥರ್ಡ್ ರೋ, ಪುಶ್-ಬಟನ್ ಸ್ಟಾರ್ಟ್, ಎಲ್‌ಇಡಿ ಲೈಟಿಂಗ್ ಸೆಟಪ್,  ಸೆಕೆಂಡ್ ರೋ ರಿಕ್ಲೈನ್ ​​ಮತ್ತು ರೂಫ್ ಮೌಂಟೆಡ್ ಎಸಿ ವೆಂಟ್‌ ನಂತಹ ವೈಶಿಷ್ಟ್ಯಗಳು ಲಭ್ಯವಿರುತ್ತವೆ. 

ಇದನ್ನೂ ಓದಿ : Solar generator: ಈ ಒಂದು ಸಾಧನ ಅಳವಡಿಸಿ ಸಾಕು, ವಿದ್ಯುತ್ ಬಿಲ್ ಕಟ್ಟಲೇ ಬೇಕಿಲ್ಲ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News