PM Modi: ಭಾರತದಲ್ಲಿ 6G ಸೇವೆ ಆರಂಭ ಕುರಿತು ಪ್ರಧಾನಿ ಮೋದಿ ಮಹತ್ವದ ಘೋಷಣೆ!

6G Service: ಶೀಘ್ರದಲ್ಲಿಯೇ ಭಾರತದಲ್ಲಿ 5G ಸೇವೆ ಆರಂಭಗೊಳ್ಳುತ್ತಿದೆ. ಏತನ್ಮಧ್ಯೆ 6G ಸೇವೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ನೀವೂ ಕೂಡ ಭಾರತೀಯ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ ಈ ಸುದ್ದಿ ನಿಮಗಾಗಿ.  

Written by - Nitin Tabib | Last Updated : Aug 27, 2022, 04:46 PM IST
  • ಭಾರತದಲ್ಲಿ 5ಜಿ ಸೇವೆ ಆರಂಭದ ಘೋಷಣೆ ಈಗಾಗಲೇ ಮಾಡಲಾಗಿದ್ದು,
  • ಬಹುತೇಕ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಕ್ಕೆ ತನ್ನ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ.
  • ಆದರೆ, 5ಜಿ ಸೇವೆ ಆರಂಭಕ್ಕೂ ಮುನ್ನವೇ 6ಜಿ ಸೇವೆ ಆರಂಭದ ಘೋಷಣೆಯನ್ನು ಭಾರತದಲ್ಲಿ ಮೊಳಗಿಸಲಾಗಿದೆ.
PM Modi: ಭಾರತದಲ್ಲಿ 6G ಸೇವೆ ಆರಂಭ ಕುರಿತು ಪ್ರಧಾನಿ ಮೋದಿ ಮಹತ್ವದ ಘೋಷಣೆ! title=
6G Service In India

6G Service Timeline: ಭಾರತದಲ್ಲಿ 5ಜಿ ಸೇವೆ ಆರಂಭದ ಘೋಷಣೆ ಈಗಾಗಲೇ ಮಾಡಲಾಗಿದ್ದು, ಬಹುತೇಕ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಕ್ಕೆ ತನ್ನ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಆದರೆ, 5ಜಿ ಸೇವೆ ಆರಂಭಕ್ಕೂ ಮುನ್ನವೇ 6ಜಿ ಸೇವೆ ಆರಂಭದ ಘೋಷಣೆಯನ್ನು ಭಾರತದಲ್ಲಿ ಮೊಳಗಿಸಲಾಗಿದೆ. ಗುರುವಾರ ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ಈ ದಶಕದ ಅಂತ್ಯದವರೆಗೆ 6ಜಿ ಸೇವೆ ಪ್ರಸ್ತುತಪಡಿಸುವ ಸಿದ್ಧತೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ. 'ಸ್ಮಾರ್ಟ್ ಇಂಡಿಯಾ ಹ್ಯಾಕ್ ಥಾನ್ 2022'  ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಈ ಘೋಷಣೆಯನ್ನು ಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ 5ಜಿ ಸೇವೆಯನ್ನು ದೇಶದ ಎಲ್ಲಾ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲಾಗುವುದು ಮತ್ತು 5ಜಿ ಸೇವೆ ಅತ್ಯಂತ ಅಗ್ಗದ ಮತ್ತು ಸುಲಭವಾಗಿ ಸಿಗುವ ಸೇವೆಯಾಗಿರಲಿದೆ ಎಂದು ಸರ್ಕಾರ ಈಗಾಗಲೇ ಹೇಳಿದೆ. 

ಈ ದಿನದಿಂದ 5ಜಿ ಸೇವೆ ಆರಂಭಗೊಳ್ಳುತ್ತಿದೆ
ಭಾರತದಲ್ಲಿ ಈಗಾಗಲೇ 5ಜಿ ಸೇವೆ ಆರಂಭದ ದಿನಾಂಕ ಪ್ರಕಟಗೊಂಡಿದೆ. ಶೀಘ್ರದಲ್ಲಿಯೇ 5ಜಿ ಸೇವೆಯನ್ನು ಆರಂಭಿಸಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಅಕ್ಟೋಬರ್ 12 ರವೇಳೆಗೆ ದೇಶಾದ್ಯಂತ 5ಜಿ ಸೇವೆ ಆರಂಭಗೊಳ್ಳಲಿದೆ ಎಂದು ಗುರುವಾರ ಅವರು ಹೇಳಿದ್ದಾರೆ. ಪ್ರತಿಯೊಬ್ಬ ಭಾರತೀಯನ ಪಾಲಿಗೆ ಇದೊಂದು ಮಹತ್ವದ ಸಂಗತಿಯಾಗಿರಲಿದೆಏಕೆಂದರೆ 5G ಸೇವೆಯ ಪ್ರಾರಂಭದ ನಂತರ, ಅನೇಕ ಪ್ರಯೋಜನಗಳು ಲಭ್ಯವಾಗಲಿವೆ. ಬಿಡುಗಡೆಯ ನಂತರ, ಇದನ್ನು ಇತರ ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸಲಾಗುವುದು. ಮಾಹಿತಿಯ ಪ್ರಕಾರ, ಈ ಸೇವೆ ಎರಡರಿಂದ ಮೂರು ವರ್ಷಗಳಲ್ಲಿ ದೇಶದ ಪ್ರತಿಯೊಂದು ಭಾಗಕ್ಕೂ ತಲುಪಲಿವೆ.

5G ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು?
>> 5G ಸ್ಮಾರ್ಟ್‌ಫೋನ್‌ಗಳು ನಿಮಗೆ ಹೆಚ್ಚಿನ ವೇಗದಲ್ಲಿ ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ, ಸಾಮಾನ್ಯವಾಗಿ 4G ನೆಟ್‌ವರ್ಕ್‌ಗಳು ನೀಡುವ 10Mb/s ನಿಂದ 50Mb/s ಗಿಂತ ಇದು ಹೆಚ್ಚು ವೇಗವಾಗಿರಲಿದೆ.

>> ಅಷ್ಟೇ ಅಲ್ಲ, 5G ಸ್ಮಾರ್ಟ್‌ಫೋನ್‌ಗಳು ನಿಮಗೆ ಹೆಚ್ಚಿನ ಡೇಟಾ ವರ್ಗಾವಣೆ ವೇಗವನ್ನು ನೀಡುತ್ತವೆ. ಇಂಟರ್ನೆಟ್‌ ನಿಂದ ನೀವು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾಡಲು ಸಾಧ್ಯವಾಗದ ಎಲ್ಲಾ ಕೆಲಸಗಳನ್ನು 5 ಜಿ ಸ್ಮಾರ್ಟ್ ಫೋನ್ ಗಳಲ್ಲಿ ಮಾಡಲು ಸಾಧ್ಯವಾಗಲಿದೆ.

>> ನೀವು ಯಾವುದೇ ಬಫರಿಂಗ್ ಇಲ್ಲದೆ ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ 4K ಮತ್ತು 8K ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು.

ಇದನ್ನೂ ಓದಿ-ಅಬ್ಬಬ್ಬಾ! ಗಂಟೆಗೆ 325 ಕಿಮೀ ವೇಗದಲ್ಲಿ ಓಡುತ್ತೆ ಈ ಕಾರು: ಇದರ ಬೆಲೆ-ವಿಶೇಷತೆ ಕೇಳಿದ್ರೆ ಶಾಕ್ ಆಗ್ತೀರ!

>> 5G ತಂತ್ರಜ್ಞಾನ 4G ಗಿಂತ ಹೆಚ್ಚಿನ ನೆಟ್‌ವರ್ಕ್ ಸಾಮರ್ಥ್ಯವನ್ನು ಹೊಂದಿದೆ, ಆದ್ದರಿಂದ 4G ನೆಟ್‌ವರ್ಕ್‌ಗೆ ಹೋಲಿಸಿದರೆ ಹೆಚ್ಚಿನ ಸಾಧನಗಳು ಮತ್ತು ಜನರು 5G ನೆಟ್‌ವರ್ಕ್ ಬಳಸಿ ಸಂಪರ್ಕಿಸಬಹುದು.

>> 4G ಸ್ಮಾರ್ಟ್‌ಫೋನ್‌ಗಳಲ್ಲಿ, ನೀವು ಕಾಲ್ ಡ್ರಾಪ್ ಸಮಸ್ಯೆಯನ್ನು ಎದುರಿಸುತ್ತಿರಬಹುದು ಆದರೆ 5G ನೆಟ್‌ವರ್ಕ್‌ನೊಂದಿಗೆ ನೀವು ಈ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ, ಇದು ಮಹತ್ವದ ಸೇವೆಯಾಗಿರಲಿದ್ದು, ಭಾರತೀಯರು ಅದನ್ನು ಅನುಭವಿಸಲಿದ್ದಾರೆ.

ಇದನ್ನೂ ಓದಿ-Dosa Printer Video: ಇಂತಹ ದೋಸಾ ಪ್ರಿಂಟರ್ ಅನ್ನು ನೀವು ನಿಮ್ಮ ಜೀವನದಲ್ಲೇ ನೋಡಿರಲಿಕ್ಕಿಲ್ಲ

>> 4G ಫೋನ್‌ಗಳಲ್ಲಿ ಕರೆ ಮಾಡುವಾಗ ಆಡಿಯೋ ಗುಣಮಟ್ಟವು ಹಲವು ಬಾರಿ ಹದಗೆಡುತ್ತದೆ, ಆದರೆ, 5G ಫೋನ್‌ಗಳಲ್ಲಿ ನಿಮಗೆ ಅಂತಹ ಯಾವುದೇ ಸಮಸ್ಯೆ ಇರುವುದಿಲ್ಲ.

>> ಬೆಲೆಯ ಬಗ್ಗೆ ಹೇಳುವುದಾದರೆ, 4G ಫೋನ್‌ಗೆ ಹೋಲಿಸಿದರೆ 5G ಫೋನ್ ಖರೀದಿಸಲು ನೀವು ಹೆಚ್ಚು ಹಣವನ್ನು ಪಾವತಿಸಬೇಕಾಗಿಲ್ಲ. 5ಜಿ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಕೈಗೆಟುಕುವಂತೆ ಇರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News