ತಲೆ ದಿಂಬಿನ ಪಕ್ಕದಲ್ಲಿಯೇ ಮೊಬೈಲ್ ಇಟ್ಟು ಮಲಗುವ ಅಭ್ಯಾಸ ಬಲು ಅಪಾಯಕಾರಿ! ಇಂದೇ ಬದಲಾಯಿಸಿಕೊಳ್ಳಿ

Smartphone Tips And Tricks : ಹೆಚ್ಚಿನವರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ.  ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.  

Written by - Ranjitha R K | Last Updated : Apr 4, 2023, 10:12 AM IST
  • ಸ್ಮಾರ್ಟ್‌ಫೋನ್‌ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ.
  • ಮಲಗುವಾಗ ಹತ್ತಿರದಲ್ಲಿರಬಾರದು ಮೊಬೈಲ್
  • ಶರ್ಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ
ತಲೆ ದಿಂಬಿನ ಪಕ್ಕದಲ್ಲಿಯೇ ಮೊಬೈಲ್ ಇಟ್ಟು ಮಲಗುವ ಅಭ್ಯಾಸ  ಬಲು ಅಪಾಯಕಾರಿ! ಇಂದೇ ಬದಲಾಯಿಸಿಕೊಳ್ಳಿ  title=

Smartphone Tips And Tricks : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೆ ಯಾವ ಕೆಲಸವೂ ನಡೆಯುವುದಿಲ್ಲ. ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರ ಕೈಯ್ಯಲ್ಲಿಯೂ ಮೊಬೈಲ್ ಕಾಣಬಹುದು. ಇನ್ನು ಕೆಲವರಿಗೆ ನಿದ್ದೆ ಬರುವವರೆಗೂ ಫೋನ್ ನಲ್ಲಿ ವಿಡಿಯೋಗಳನ್ನು ನೋಡುವ ಅಭ್ಯಾಸವಿರುತ್ತದೆ. ಮೊಬೈಲ್‌ ಬಳಸುವ ವೇಳೆ ನಾವು ಮಾಡುವ ಕೆಲವೊಂದು ತಪ್ಪುಗಳು, ನಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಇತ್ತೀಚೆಗೆ ಹಲವು ಫೋನ್ ಸ್ಫೋಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ.  ಇಂಥಹ ಘಟನೆಗಳು ಬಳಕೆದಾರರ ತಪ್ಪಿನಿಂದಲೇ ನಡೆಯುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.  

ಮಲಗುವಾಗ ಹತ್ತಿರದಲ್ಲಿರಬಾರದು  ಮೊಬೈಲ್ : 
ಹೆಚ್ಚಿನವರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ಮೊಬೈಲ್ ತಾಪಮಾನವು ಬಹಳ ಹೆಚ್ಚಿರುತ್ತದೆ. ಈ ತಾಪಮಾನದ ಕಾರಣ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು. 

ಇದನ್ನೂ ಓದಿ : ಆರ್‌ಎಲ್‌ವಿ-ಎಲ್ಇಎಕ್ಸ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ, ಡಿಆರ್‌ಡಿಓ, ಭಾರತೀಯ ವಾಯುಸೇನೆ

ಶರ್ಟ್ ಜೇಬಿನಲ್ಲಿ ಮೊಬೈಲ್ ಇಡಬೇಡಿ :
ಶರ್ಟ್ ಜೇಬಿನಲ್ಲಿ ಇಟ್ಟಿದ್ದ ಫೋನ್‌ಗಳು ಸ್ಫೋಟಗೊಂಡ ಘಟನೆಗಳು ಕೂಡಾ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ಅಂಗಿಯ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಕೂಡಾ ಬದಲಿಸಿಕೊಳ್ಳಿ. ಅಂಗಿಯ ಜೇಬಿನಲ್ಲಿ ಹೆಚ್ಚು ಹೊತ್ತು ಮೊಬೈಲ್ ಇಡಬಾರದು. ಇದು ಸ್ಫೋಟದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 

ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್ ಮಾಡಬೇಡಿ :
ಇನ್ನು ಕೆಲವರಿಗೆ ರಾತ್ರಿ ಇಡೀ ಮೊಬೈಲ್ ಚಾರ್ಜ್ ಗೆ ಇಡುವ ಅಭ್ಯಾಸವಿರುತ್ತದೆ.  ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್‌ ಗೆ ಇಟ್ಟರೆ ಮೊಬೈಲ್‌ನ ಬ್ಯಾಟರಿ ಹಾಳಾಗುತ್ತದೆ. ಚಾರ್ಜ್ ಬೇಗನೆ  ಖಾಲಿಯಾಗುತ್ತಿರುತ್ತದೆ. ಚಾರ್ಜ್ ಬೇಗನೆ ಖಾಲಿಯಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು, ರಾತ್ರಿಯಿಡೀ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿಕೊಂಡು ಬಿಡುತ್ತಾರೆ. ರಾತ್ರಿಯಿಡೀ ಚಾರ್ಜ್ ಗೆ ಹಾಕಿರುವ ಕಾರಣ ಮೊಬೈಲ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.  

ಇದನ್ನೂ ಓದಿ : WhatsApp New Feature: ಈಗ ಬೇರೆಯವರು ನಿಮ್ಮ ಮೇಲೆ ಕಣ್ಣಿಡುವುದು ಅಷ್ಟು ಸುಲಭವಲ್ಲ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News