Tulsi Health Benefits: ನಾವು ಪ್ರತಿನಿತ್ಯ ಸೇವಿಸುವ ಆಹಾರ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ತಿಳಿಸಿಕೊಡುತ್ತದೆ ಎನ್ನುತ್ತಾರೆ. ನಮಗೆ ಗೊತ್ತಿಲ್ಲದೆ ಹಲವಾರು ಗಿಡಮೂಲಿಕೆಗಳಿವೆ. ಇವೆಲ್ಲವೂ ನಮ್ಮ ಹೊಟ್ಟೆಯಲ್ಲಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ.
Tulsi Health Benefits: ನಾವು ಪ್ರತಿನಿತ್ಯ ಸೇವಿಸುವ ಆಹಾರ ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ತಿಳಿಸಿಕೊಡುತ್ತದೆ ಎನ್ನುತ್ತಾರೆ. ನಮಗೆ ಗೊತ್ತಿಲ್ಲದೆ ಹಲವಾರು ಗಿಡಮೂಲಿಕೆಗಳಿವೆ. ಇವೆಲ್ಲವೂ ನಮ್ಮ ಹೊಟ್ಟೆಯಲ್ಲಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಹೀಗೆ ನಮಗೆ ಗೊತ್ತಿಲ್ಲದೆ ಇರುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಅನೇಕ ಸ್ಯಗಳು ನಮ್ಮ ಸುತ್ತಲೂ ಇವೆ. ಅದರಲ್ಲಿ ಒಂದು ತುಳಸಿ. ಆಯುರ್ವೇದದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ತುಳಸಿಯನ್ನು ಬಳಸುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ತುಳಸಿ ಎಲೆಯನ್ನು ಕೇವಲ ಪೂಜೆಗೆ ಮಾತ್ರವಲ್ಲ, ಅದರಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳಿಗೆ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತವೆ.
ತುಳಸಿ ನೀರನ್ನು ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆ. ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಕಳಪೆ ರಕ್ತ ಪರಿಚಲನೆ ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮೊಡವೆಗಳು ಬೆಳೆಯಲು ಕಾರಣವಾಗುತ್ತದೆ. ಇದಲ್ಲದೇ ತುಳಸಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಫಂಗಲ್ ಗುಣಗಳು ಚರ್ಮವನ್ನು ಕಾಂತಿಯುತವಾಗಿ ಮತ್ತು ಮೃದುವಾಗಿಸಲು ಸಹಾಯ ಮಾಡುತ್ತದೆ.
ತುಳಸಿ ಎಲೆಯ ಸೇವನೆಯಿಂದ ಮೊಡವೆಗಳು ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ. ನೆತ್ತಿಯ ತುರಿಕೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸುವುದರಿಂದ ತಲೆಹೊಟ್ಟು ಮತ್ತು ಹೇನುಗಳಂತಹ ಸಮಸ್ಯೆಗಳು ದೂರವಾಗುತ್ತವೆ.
ತುಳಸಿಯನ್ನು ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ತುಳಸಿ ಎಲೆಗಳಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಫಂಗಲ್, ಆ್ಯಂಟಿ ಸೆಪ್ಟಿಕ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಹೇರಳವಾಗಿವೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ತುಳಸಿ ನೀರನ್ನು ಕುಡಿಯುವುದರಿಂದ ಗಂಟಲು ನೋವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಮಲಬದ್ಧತೆಯನ್ನೂ ಕಡಿಮೆ ಮಾಡಲು ಸಹಾಯ ಮಡುತ್ತದೆ. ಇದಲ್ಲದೆ, ಕೊಲೆಸ್ಟ್ರಾಲ್ ಮತ್ತು ಮಧುಮೇಹ ಕಡಿಮೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಹಲ್ಲಿನ ಆರೋಗ್ಯ ಸುಧಾರಿಸುತ್ತದೆ.
ನಾಲ್ಕು ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು, ತೊಳೆದು ಎರಡು ಲೋಟ ನೀರಿನಲ್ಲಿ ಹಾಕಿ. ರಾತ್ರಿಯಿಡೀ ಮುಚ್ಚಿಡಿ. ಮರುದಿನ, ಈ ನೀರನ್ನು ಅರ್ಧದಷ್ಟು ಕುದಿಸಿ. ಖಾಲಿ ಹೊಟ್ಟೆಯಲ್ಲಿ ಬಿಸಿಯಾಗಿ ಕುಡಿಯಿರಿ.
ಪ್ರತಿದಿನ ಈ ರೀತಿ ತುಳಸಿ ನೀರನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ದೂರವಾಗಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ.