ನವದೆಹಲಿ : ಜಿಯೋ ತನ್ನ ಗ್ರಾಹಕರಿಗಾಗಿ ಅಗ್ಗದ ಎರಡು ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. 39 ಮತ್ತು 69 ರೂಪಾಯಿಯ ಈ ರೀಚಾರ್ಜ್ ಪ್ಲಾನಲ್ಲಿ ಅನಿಯಮಿತ ಉಚಿತ ಕರೆಯೊಂದಿಗೆ ಡೇಟಾ ಸೌಲಭ್ಯ ಕೂಡಾ ಸಿಗಲಿದೆ. ಈ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಈ ಹೊಸ ಪ್ರಿಪೇಯ್ಡ್ ಯೋಜನೆಗಳಲ್ಲಿ, ಜಿಯೋ (Jio) ಬಳಕೆದಾರರು ಅನಿಯಮಿತ ಉಚಿತ ಕರೆಯೊಂದಿಗೆ ಹೆಚ್ಚುವರಿ ಡೇಟಾ ಕೂಡಾ ಸಿಗಲಿದೆ. ಈ ಎರಡೂ ಪ್ರಿಪೇಯ್ಡ್ ಯೋಜನೆಗಳು ಜಿಯೋಫೋನ್ನ (JioPhone) ಅಗ್ಗದ ಯೋಜನೆಗಳಾಗಿವೆ. ಈ ಎರಡೂ ಪ್ಲಾನ್ 14 ದಿನಗಳವರೆಗೆ ವ್ಯಾಲಿಡಿಟಿ ಇರಲಿದೆ.
ಇದನ್ನೂ ಓದಿ : WhatsAppಗೆ ಟಕ್ಕರ್ ನೀಡಲು ಮುಂದಾದ Telegram
39 ರೂ ಪ್ರಿಪೇಯ್ಡ್ ಯೋಜನೆ :
ಇದು ಜಿಯೋನ (Jio) ಅಗ್ಗದ ಪ್ರಿಪೇಯ್ಡ್ ಯೋಜನೆಯಾಗಿದೆ. ಈ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಉಚಿತ ಕರೆಯೊಂದಿಗೆ (Unlimited free calling) 100MB ಹೈಸ್ಪೀಡ್ ಡೇಟಾ ಸಿಗಲಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 100 ಉಚಿತ ಎಸ್ಎಂಎಸ್ನ (SMS) ಪ್ರಯೋಜನವನ್ನು ಕೂಡಾ ಪಡೆಯುತ್ತಾರೆ. 39 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವ 14 ದಿನಗಳವರೆಗೆ ಇರಲಿದೆ. ಈ ಹಿಂದೆ, ಜಿಯೋಫೋನ್ ಬಳಕೆದಾರರಿಗಾಗಿ ಅಗ್ಗದ ಪ್ರಿಪೇಯ್ಡ್ ಯೋಜನೆ ಅಂದರೆ 75 ರೂಗಳ ಪ್ಲಾನ್ ಆಗಿತ್ತು.
69 ರೂ ಪ್ರಿಪೇಯ್ಡ್ ಯೋಜನೆ :
69 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವ (Validity) ಕೂಡಾ 14 ದಿನಗಳು. ಈ ಯೋಜನೆಯಲ್ಲಿ ಕೂಡಾ , ಬಳಕೆದಾರರಿಗೆ ಅನಿಯಮಿತ ಉಚಿತ ಕರೆಯ ಪ್ರಯೋಜನ ಸಿಗಲಿದೆ. ಇದಲ್ಲದೆ, ಬಳಕೆದಾರರು 500MB ಹೈಸ್ಪೀಡ್ ಡೇಟಾ (High speed data) ಸಿಗಲಿದೆ. ಜೊತೆಗೆ ಪ್ರತಿದಿನ 100 ಫ್ರೀ ಎಸ್ಎಂಎಸ್ ಕೂಡಾ ಇರಲಿದೆ.
ಇದನ್ನೂ ಓದಿ : Airtel: 5.5 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ಪ್ಯಾಕ್ ಘೋಷಿಸಿದ ಭಾರ್ತಿ ಏರ್ಟೆಲ್
ಜಿಯೋಫೋನ್ ಬಳಕೆದಾರರಿಗಾಗಿ ಈ ಪ್ರಿಪೇಯ್ಡ್ ಯೋಜನೆಗಳಲ್ಲಿ ಮತ್ತೊಂದು ಪ್ರಯೋಜನ ಸಿಗಲಿದೆ. ಅದೆಂದರೆ, ಈ ಎರಡರಲ್ಲಿ ಒಂದು ಪ್ಲಾನ್ ಅನ್ನು ರೀಚಾರ್ಜ್ ಮಾಡಿದರೆ, ಅದೇ ಮೊತ್ತದ ಉಚಿತ ರೀಚಾರ್ಜ್ ಸಿಗಲಿದೆ. ಕರೋನಾ (Coronavirus) ಸಾಂಕ್ರಾಮಿಕದ ದೃಷ್ಟಿಯಿಂದ, ಕಂಪನಿಯು ಜಿಯೋಫೋನ್ ಬಳಕೆದಾರರ ನಿಯಮಿತ ಪ್ರಿಪೇಯ್ಡ್ ಯೋಜನೆಯೊಂದಿಗೆ ಉಚಿತ ರೀಚಾರ್ಜ್ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.