ನವದೆಹಲಿ: ಆಪಲ್ ಪ್ರಿಯರು ಐಫೋನ್‌ಗಳಿಗಾಗಿ ಅದರ ಮುಂದಿನ iOS 16 ಸಾಫ್ಟ್‌ವೇರ್ (Android 13 Latest News) ಅಪ್‌ಡೇಟ್ ಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ Android ಪ್ರೇಮಿಗಳು Android 13 ಗಾಗಿ ಉತ್ಸುಕರಾಗಿದ್ದಾರೆ. ಗೂಗಲ್ ಈ ಮೊಬೈಲ್ ಸಾಫ್ಟ್ವೇರ್ ಕುರಿತು ಕಳೆದ ಫೆಬ್ರವರಿಯಲ್ಲಿ ಅಧಿಕೃತ ಘೋಷಣೆ ಮಾಡಿದೆ. ಆದರೆ, ಕಂಪನಿ ಇದುವರೆಗೆ ಬಿಡುಗಡೆಯನ್ನು ಡೆವೆಲಪರ್ ಬೀಟಾ ಲೆವಲ್ ಗೆ ಮಾತ್ರ ಸೀಮಿತಗೊಳಿಸಿದೆ. ಪಬ್ಲಿಕ್ ಬೀಟಾ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ನಡೆಯಲಿರುವ Google IO 2022 ಕಾನ್ಫರೆನ್ಸ್ ಸಮೀಪಿಸುತ್ತಿದ್ದಂತೆ ಗೂಗಲ್ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ. ಆದರೆ, ಎಲ್ಲಾ OEMಗಳು ತಮ್ಮ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿ ಹೊಸ OS ಅನ್ನು ಯಾವಾಗ ರೋಲ್ ಔಟ್ ಮಾಡಲಿವೆ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಹೊಸ ವರದಿಯ ಪ್ರಕಾರ ಸ್ಯಾಮ್ಸಂಗ್ ಬಳಕೆದಾರರಿಗೆ ಎಲ್ಲಕ್ಕಿಂತ ಮೊದಲು Android 13 ಸಿಗುವ ಸಾಧ್ಯತೆಯನ್ನು ವರ್ತಿಸಲಾಗಿದೆ.
ಇದನ್ನೂ ಓದಿ-ಬ್ರಹ್ಮಾಂಡದಲ್ಲಿ ಸೂರ್ಯನಿಗೂ ಬೆಳಕನ್ನು ನೀಡುವ ಅತ್ಯಂತ ಸೂಕ್ಷ್ಮ ಕಣವಿದೆ ಎಂಬುದು ನಿಮಗೆ ತಿಳಿದಿದೆಯಾ?
OneUI 5.0 ಬೀಟಾ ಆವೃತ್ತಿಯ ರೂಪದಲ್ಲಿ ಸ್ಯಾಮ್‌ಸಂಗ್ ಮೊದಲ ಬಾರಿಗೆ Android 13 ಸಾಫ್ಟ್‌ವೇರ್ ನವೀಕರಣವನ್ನು ಪಡೆಯಲಿದೆ ಎಂದು ವರದಿಯಾಗಿದೆ. ಈ ಆವೃತ್ತಿಯು ಜುಲೈ ವೇಳೆಗೆ ಬರುವ ನಿರೀಕ್ಷೆ ಇದೆ ಎಂದು SamMobile ಹೇಳಿದೆ. ಇದು ದಕ್ಷಿಣ ಕೊರಿಯಾದ ಟೆಕ್ ಸಂಸ್ಥೆಗೆ ಈ ವರ್ಷದ ನಂತರ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡುವ ಮೊದಲು ಆಂಡ್ರಾಯ್ಡ್ 13 ಅನ್ನು ಸರಿಪಡಿಸಲು ಮತ್ತು ಪರೀಕ್ಷಿಸಲು ಸಾಕಷ್ಟು ಸಮಯವನ್ನು ನೀಡಲಿದೆ.
ಇದನ್ನೂ ಓದಿ-WhatsApp Update: ವಾಟ್ಸ್ ಆಪ್ ನಿಂದ ಜಬರ್ದಸ್ತ್ ಸೆಕ್ಯೂರಿಟಿ ಅಪ್ಡೇಟ್ ಬಿಡುಗಡೆ
ಸಾಫ್ಟ್ವೆಯರ್ ಅಪ್ಡೇಟ್ (Android 13 Latest Update,) ನೊಂದಿಗೆ ಸ್ಯಾಮ್ಸಂಗ್ ಕನ್ಸಿಸ್ಟೆನ್ಸಿ
Android 13 ಗಾಗಿ Google ನ ಬಿಡುಗಡೆ ವೇಳಾಪಟ್ಟಿಯ ಪ್ರಕಾರ, ಸಾಫ್ಟ್‌ವೇರ್ ಜುಲೈ-ಆಗಸ್ಟ್ ಸಮಯದ ಚೌಕಟ್ಟಿನಲ್ಲಿ ಬರುವ ಸಾಧ್ಯತೆ ಇದೆ. ಇದರೊಂದಿಗೆ, ಇದರಿಂದ ಸ್ಯಾಮ್‌ಸಂಗ್ ಬಳಕೆದಾರರು ರೋಲ್ ಔಟ್ ಮತ್ತು ನವೀಕರಣ ವಿಷಯದಲ್ಲಿ ತಾವು ಇತರರಿಗಿಂತ ಹಿಂದುಳಿದಿದ್ದೇವೆ ಎಂದು ಭಾವಿಸುವುದಿಲ್ಲ. ಇದರ ಜೊತೆಗೆ, Samsung ತನ್ನ ಸಾಫ್ಟ್‌ವೇರ್ (Android 13 Update For Samsung) ಮತ್ತು ಭದ್ರತಾ ನವೀಕರಣ ರೋಲ್‌ಔಟ್ ಪ್ರಕ್ರಿಯೆಯನ್ನು ಗಣನೀಯವಾಗಿ ಸುಧಾರಿಸಿದೆ. Pixel ಮಾಡೆಲ್‌ಗಳಿಗಿಂತಲೂ ಮುಂಚೆಯೇ ಪ್ರತಿ ತಿಂಗಳು ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಇತ್ತೀಚಿನ ಭದ್ರತಾ ನವೀಕರಣಗಳು ಬರುತ್ತಿವೆ. ಕಳೆದ ವರ್ಷ, ಗೂಗಲ್ ಮೊದಲ ಬಾರಿಗೆ ಪಿಕ್ಸೆಲ್ ಹ್ಯಾಂಡ್‌ಸೆಟ್‌ಗಳಲ್ಲಿ ಪರಿಚಯಿಸಿದ ಸುಮಾರು 30-40 ದಿನಗಳ ನಂತರ ಕಂಪನಿಯು ಆಂಡ್ರಾಯ್ಡ್ 12 ಅನ್ನು ತನ್ನ ಸಾಧನಗಳಿಗೆ ತಂದಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.