Whatsapp ಗ್ರೂಪ್ ನಲ್ಲಿ ನಿಮ್ಮನ್ನು ಯಾರೂ ಸೇರಿಸದಂತೆ ತಡೆಯಲು ಈ ಟ್ರಿಕ್ ಬಳಸಿ

Whatsapp Tips And Tricks : ಈ ಟ್ರಿಕ್‌ಗಾಗಿ ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕು. ನಿಮ್ಮ ವಾಟ್ಸಾಪ್ ಅಪ್ಡೇಟ್ ಆಗಿರದಿದ್ದರೆ, ಮೊದಲು ಅಪ್ಡೇಟ್ ಮಾಡಿಕೊಳ್ಳಿ.

Written by - Ranjitha R K | Last Updated : Jul 26, 2021, 05:53 PM IST
  • ವಾಟ್ಸಾಪ್ ನ ಈ ಟ್ರಿಕ್ ನೊಂದಿಗೆ ಯಾರೂ ನಿಮ್ಮನ್ನು ಯಾವುದೇ ಗುಂಪಿಗೆ ಸೇರಿಸಲು ಸಾಧ್ಯವಾಗುವುದಿಲ್ಲ.
  • ಮೊದಲಿಗೆ, ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು
  • ಈ ಸ್ಟೆಪ್ ಅಳವಡಿಸಿದರೆ ಯಾರೂ ನಿಮ್ಮನ್ನು ಯಾವುದೇ ಗುಂಪಿಗೆ ಸೇರಿಸಲು ಸಾಧ್ಯವಾಗುವುದಿಲ್ಲ.
Whatsapp ಗ್ರೂಪ್ ನಲ್ಲಿ ನಿಮ್ಮನ್ನು ಯಾರೂ ಸೇರಿಸದಂತೆ ತಡೆಯಲು ಈ ಟ್ರಿಕ್ ಬಳಸಿ  title=
Whatsapp Tips And Tricks (photo zee news)

ನವದೆಹಲಿ :  Whatsapp Tips And Tricks : ಭಾರತದಲ್ಲಿ ಲಕ್ಷಾಂತರ ಜನರು ವಾಟ್ಸಾಪ್ ಬಳಸುತ್ತಾರೆ. ಈ ಅಪ್ಲಿಕೇಶನ್‌ನಲ್ಲಿ ಚಾಟ್ ಮಾಡುವುದರ ಜೊತೆಗೆ, ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಸಹ ಮಾಡಬಹುದು. ಈ ಅಪ್ಲಿಕೇಶನ್‌ನಲ್ಲಿ, ಯಾವಾಗ ಬೇಕಾದರೂ ಮತ್ತು ಯಾರೊಂದಿಗೆ ಬೇಕಾದರೂ ಒಂದು ಕ್ಲಿಕ್‌ನಲ್ಲಿ ಮಾತನಾಡಬಹುದು. Whatsapp ನಲ್ಲಿ ಆಗಾಗ ಜನರು ಗ್ರೂಪ್ ಮಾಡುತ್ತಿರುತ್ತಾರೆ. ಹೀಗೆ ಮಾಡಿದ ಗ್ರೂಪ್ ನಲ್ಲಿ (Whatsapp group) ಅನಗತ್ಯವಾಗಿ ನಮ್ಮನ್ನೂ ಸೇರಿಸಿ ಬಿಡುತ್ತಾರೆ. ಕೆಲವೊಮ್ಮೆ ಯಾರು ಗ್ರೂಪ್ ಮಾಡಿದ್ದಾರೆ , ಯಾರು ನಮ್ಮನ್ನು ಗ್ರೂಪ್ ಗೆ ಸೇರಿಸಿದ್ದಾರೆ ಎನ್ನುವುದು ಕೂಡಾ ತಿಳಿದಿರುವುದಿಲ್ಲ. ಈ ಸಂದರ್ಭದಲ್ಲಿ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಇರುವ ಏಕೈಕ ಆಯ್ಕೆ ಎಂದರೆ ಗ್ರೂಪ್ ನಿಂದ ಎಕ್ಸಿಟ್ ಆಗುವುದು. ಆದರೆ, ಗ್ರೂಪ್ ನಿಂದ ಹೊರ ಬರುತ್ತಿದ್ದಂತೆ ಎಲ್ಲರಿಗೂ ನೀವು ಗ್ರೂಪ್ ನಿಂದ ಹೊರ ಬಂದಿರುವುದು ತಿಳಿಯುತ್ತದೆ.  ಇಂದು ನಾವು ನಿಮಗೆ ಒಂದು ಸುಲಭ ಟ್ರಿಕ್ ಹೇಳಲಿದ್ದೇವೆ. ಈ ಟ್ರಿಕ್ (Whatsapp tricks) ಅನ್ನು ಅನುಸರಿಸಿದರೆ ಯಾರೂ ನಿಮ್ಮನ್ನು ಗ್ರೂಪ್ ಗೆ ಸೇರಿಸಲು ಸಾಧ್ಯವಾಗುವುದಿಲ್ಲ.

ಈ ಟ್ರಿಕ್‌ಗಾಗಿ ನಿಮ್ಮ ವಾಟ್ಸಾಪ್ (Whatsapp) ಅನ್ನು ಅಪ್ಡೇಟ್ ಮಾಡಬೇಕು. ನಿಮ್ಮ ವಾಟ್ಸಾಪ್ ಅಪ್ಡೇಟ್ ಆಗಿರದಿದ್ದರೆ, ಮೊದಲು ಅಪ್ಡೇಟ್ ಮಾಡಿಕೊಳ್ಳಿ. ಹಾಗಿದ್ದರೆ, ಈ ಟ್ರಿಕ್ ಮೂಲಕ ನಿಮ್ಮನ್ನು ಯಾರೂ ಗ್ರೂಪ್ ಗೆ  (Whatsapp group) ಸೇರಿಸದಂತೆ ತಡೆಯುವುದು ಹೇಗೆ ನೋಡೋಣ .. 

ಇದನ್ನೂ ಓದಿ : Google Location History - ಈ ಸಂಗತಿಗಳು Googleಗೆ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಒದಗಿಸುತ್ತವೆ. ಈ ರೀತಿ ಬ್ಲಾಕ್ ಮಾಡಿ

ಈ ವೈಶಿಷ್ಟ್ಯವನ್ನು ಅಕ್ಟಿವೇಟ್ ಮಾಡಿಕೊಳ್ಳಿ : 
1. ಮೊದಲು ವಾಟ್ಸಾಪ್ ತೆರೆಯಿರಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.
2. ಸೆಟ್ಟಿಂಗ್‌ಗಳಲ್ಲಿ ನೀವು ಅನೇಕ ಆಯ್ಕೆಗಳನ್ನು ಕಾಣುತ್ತೀರಿ, ಇಲ್ಲಿ ಅಕೌಂಟ್ ಗೆ ಹೋಗಬೇಕಾಗುತ್ತದೆ.
3. ಅಕೌಂಟ್ ನಲ್ಲಿ ಪ್ರೈವಸಿ, ಸೆಕ್ಯೂರಿಟಿ, ಟು ಸ್ಟೆಪ್ ವೆರಿಫಿಕೆಶನ್ ನಂಥಹ ಆಪ್ಶನ್ ಇರುತ್ತದೆ.
4. ಇಲ್ಲಿ ಪ್ರೈವಸಿ ಮೇಲೆ ಕ್ಲಿಕ್ ಮಾಡಬೇಕು. ಕೆಳಗೆ ಗ್ರೂಪ್ ನ ಆಪ್ಶನ್ ಕಾಣಿಸುತ್ತದೆ. 
5. ಅಲ್ಲಿ everyone, my contacts, nobody ಆಪ್ಶನ್ ಕಾಣಿಸುತ್ತದೆ.  
6. ಇಲ್ಲಿ ಡಿಫಾಲ್ಟ್ ನಲ್ಲಿ everyone ಇರುತ್ತದೆ. ಇದರ ಅರ್ಥ ಯಾರು ಬೇಕಾದರೂ ನಿಮ್ಮನ್ನು ಗ್ರೂಪ್ ಗೆ ಸೇರಿಸಬಹುದು. 
7. ನೀವು ಅದನ್ನು ಬದಲಾಯಿಸಿ, my contacts ಮಾಡಬಹುದು. ಅಂದರೆ ನಿಮ್ಮ ಮೊಬೈಲ್‌ನಲ್ಲಿ (Mobile) ಯಾರ ಸಂಖ್ಯೆ ಸೇವ್ ಆಗಿದೆಯೋ   ಅವರು ಮಾತ್ರ ನಿಮ್ಮನ್ನು ಗ್ರೂಪ್ ಗೆ ಸೇರಿಸಲು ಸಾಧ್ಯವಾಗುತ್ತದೆ.
8. nobodyಯನ್ನು ಆಯ್ಕೆ ಮಾಡಿದರೆ , ನಿಮ್ಮನ್ನು ಯಾರೂ ಗುಂಪಿಗೆ ಸೇರಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : Whatsapp- ವಾಟ್ಸಾಪ್‌ನಲ್ಲಿನ ಒಂದೇ ಒಂದು ಸಣ್ಣ ತಪ್ಪು ನಿಮ್ಮನ್ನು ಜೈಲು ಶಿಕ್ಷೆಗೆ ಗುರಿಯಾಗಿಸಬಹುದು, ಎಚ್ಚರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News