Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್

Flipkart Big Saving Days Sale:ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದೆ. ಈ ಸೇಲ್ ಜನವರಿ 17 ರಿಂದ ಅಂದರೆ ಇಂದಿನಿಂದ ಆರಂಭವಾಗಿದ್ದು, ಜನವರಿ 22 ರವರೆಗೆ ನಡೆಯಲಿದೆ.

Written by - Ranjitha R K | Last Updated : Jan 17, 2022, 10:44 AM IST
  • ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್
  • ಜನವರಿ 17 ರಿಂದ ಪ್ರಾರಂಭವಾಗಿದ್ದು, ಜನವರಿ 22 ರವರೆಗೆ ನಡೆಯಲಿದೆ.
  • iPhone 12 Mini ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹು
Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್ title=
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ (file photo)

ನವದೆಹಲಿ : Flipkart Big Saving Days Sale:ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದೆ. ಈ ಸೇಲ್ ಜನವರಿ 17 ರಿಂದ ಅಂದರೆ ಇಂದಿನಿಂದ ಆರಂಭವಾಗಿದ್ದು, ಜನವರಿ 22 ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಗ್ಯಾಜೆಟ್‌ಗಳು, ಪರಿಕರಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳಂತಹ ಎಲ್ಲಾ ವರ್ಗಗಳ ವಸ್ತುಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ  ಐಫೋನ್ 12 ಸರಣಿಯಲ್ಲಿ ಬಂಪರ್ ರಿಯಾಯಿತಿಯನ್ನು (Bumper discount) ನೀಡಲಾಗುತ್ತಿದೆ. ನೀವು iPhone 12 Mini ಖರೀದಿಸಲು ಯೋಜಿಸುತ್ತಿದ್ದರೆ, ಈ ಸೇಲ್ ನಿಮಗೆ ಉಪಯುಕ್ತವಾಗಬಹುದು. ಬ್ಯಾಂಕ್ ಕೊಡುಗೆಗಳು (Bank offer) ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆದರೆ, ಅರ್ಧಕ್ಕಿಂತ ಕಡಿಮೆ ಬೆಲೆಗೆ iPhone 12 Mini ಅನ್ನು ಖದಿಸುವುದು ಸಾಧ್ಯವಾಗುತ್ತದೆ. 

ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: iPhone 12 Mini ಕೊಡುಗೆಗಳು ಮತ್ತು ರಿಯಾಯಿತಿಗಳು :
ಐಫೋನ್ 12 ಮಿನಿ (iphone 12 mini) ಲಾಂಚಿಂಗ್ ಬೆಲೆ 59,900 ರೂ. ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ  (Flipkart sale) ಈ ಫೋನ್ 41,999 ರೂಗಳಿಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ ಶೇ.29ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಫೋನ್ ಮೇಲೆ ರೂ.17,901 ರಿಯಾಯಿತಿ (Discount) ನೀಡಲಾಗುತ್ತಿದೆ. ಇನ್ನು  ಬ್ಯಾಂಕ್ ಆಫರ್ ಮತ್ತು ವಿನಿಮಯ ಕೊಡುಗೆಗಳು ಕೂಡಾ ಸೇರಿವೆ. ಇದು ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

iPhone 12 Mini

ಇದನ್ನೂ ಓದಿ : Experts Alert! ಖಾತೆಗಳಿಗೆ ಕನ್ನ ಹಾಕಲು QR ಕೋಡ್ ಬಳಕೆ! ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ

iPhone 12 ಮಿನಿ ಬ್ಯಾಂಕ್ ಕೊಡುಗೆಗಳು :
ನೀವು ICICI ಕ್ರೆಡಿಟ್ ಕಾರ್ಡ್‌ನೊಂದಿಗೆ ಫೋನ್ ಬಿಲ್ ಪಾವತಿಸಿದರೆ, 750 ರೂಪಾಯಿ ರಿಯಾಯಿತಿ ಸಿಗುತ್ತದೆ. ಅಂದರೆ, ಫೋನ್ ಬೆಲೆ 41,249 ರೂವಾಗುತ್ತದೆ. ಇದಲ್ಲದೆ ವಿನಿಮಯ ಕೊಡುಗೆಯೂ ಇದೆ.

iPhone 12 Mini Exchange ಆಫರ್ :
iPhone 12 Mini ಮೇಲೆ 11,750 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ನೀವು ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು. ನಿಮ್ಮ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನೀವು 11,750 ರೂಪಾಯಿಗಳ  Exchange ಆಫರ್ ಪಡೆಯುತ್ತೀರಿ.  ಸಂಪೂರ್ಣ ರಿಯಾಯಿತಿ ಪಡೆಯುವುದು ಸಾಧ್ಯವಾದರೆ, ಫೋನ್‌ನ ಬೆಲೆ 29,499 ರೂ.ಗೆ ಇಳಿಯುತ್ತದೆ. ಅಂದರೆ, ಈ  ಫೋನ್‌ನಲ್ಲಿ 30,401 ರೂಪಾಯಿಗಳ ರಿಯಾಯಿತಿಯನ್ನು ಪಡೆದಂತಾಗುತ್ತದೆ. 

ಇದನ್ನೂ ಓದಿ : New Invention: ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೊಂದು ಸಂತಸದ ಸುದ್ದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News