ಈ ಕಡ್ಡಿಗಳನ್ನು ನೀರಿನ ಟ್ಯಾಂಕ್‌ನಲ್ಲಿ ಹಾಕಿದ್ರೆ ವರ್ಷಗಳಾದ್ರೂ ನೀರು ಸ್ವಚ್ಛವಾಗಿರುತ್ತೆ...! ಹೇಗೆ ಗೊತ್ತಾ..? 

Guava sticks health benefits : ಈ ಮೇಲಿನ ಫೋಟೋದಲ್ಲಿರುವ ಕೋಲಿನಲ್ಲಿರುವ ಫೈಟೊಕೆಮಿಕಲ್ಸ್ ಸಿಗ್ಗಿಯಂ ಕ್ಯುಮಿನಿ ಸ್ಕಿಲ್ಸ್ ನೀರಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘಕಾಲದವರೆಗೆ ನೀರನ್ನು ತಾಜಾವಾಗಿರಿಸುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..

Written by - Krishna N K | Last Updated : Nov 8, 2024, 03:04 PM IST
    • ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ನೀರಿನ ಟ್ಯಾಂಕರ್‌ ಅಳವಡಿಸಿರುತ್ತಾರೆ.
    • ತಿಂಗಳಿಗೊಮ್ಮೆ ಅದನ್ನು ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಕೆಲಸ
    • ನೀರನ್ನು ಸ್ವಚ್ಛವಾಗಿರಿಸುವ ಉಪಾಯವೊಂದನ್ನು ಇಂದು ನಾವು ತಿಳಿದುಕೊಳ್ಳೋಣ ಬನ್ನಿ..
ಈ ಕಡ್ಡಿಗಳನ್ನು ನೀರಿನ ಟ್ಯಾಂಕ್‌ನಲ್ಲಿ ಹಾಕಿದ್ರೆ ವರ್ಷಗಳಾದ್ರೂ ನೀರು ಸ್ವಚ್ಛವಾಗಿರುತ್ತೆ...! ಹೇಗೆ ಗೊತ್ತಾ..?  title=

Water tank clean : ಎಲ್ಲರೂ ತಮ್ಮ ತಮ್ಮ ಮನೆಯ ಮೇಲೆ ನೀರಿನ ಟ್ಯಾಂಕರ್‌ ಅಳವಡಿಸಿರುತ್ತಾರೆ. ತಿಂಗಳಿಗೊಮ್ಮೆ ಅದನ್ನು ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಕೆಲಸವಾಗುತ್ತದೆ. ಅದಕ್ಕಾಗಿ ಬಹಳ ದಿನಗಳವರೆಗೆ ನೀರನ್ನು ಸ್ವಚ್ಛವಾಗಿರಿಸುವ ಉಪಾಯವೊಂದನ್ನು ಇಂದು ನಾವು ತಿಳಿದುಕೊಳ್ಳೋಣ ಬನ್ನಿ..

ಪೇರಲ ಮರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ, ಆಂಟಿ-ಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಆಂಟಿ ಅಲರ್ಜಿಯಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಈ ಪೇರಲ ಹಣ್ಣನ್ನು ತಿನ್ನುವುದರಿಂದ ಹಿಡಿದು ಹಲ್ಲುಜ್ಜುವವರೆಗೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಈ ಸಸ್ಯ ನೀಡುತ್ತದೆ.    

ಇದನ್ನೂ ಓದಿ:ಪ್ರತಿದಿನ ಈ 2 ಮಂತ್ರಗಳನ್ನು ಪಠಿಸಿದರೆ ಸಾಕು.. ನಿಮ್ಮ ಮಕ್ಕಳು ಎಂದಿಗೂ ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳಲ್ಲ..!

ಅದರಲ್ಲೂ ಪೇರಲ ಕಡ್ಡಿಯಲ್ಲಿರುವ ಫೈಟೊಕೆಮಿಕಲ್ಸ್ "ಸಿಜಿಯಮ್ ಕ್ಯೂಮಿನಿ ಸ್ಕೀಲ್ಸ್" ನೀರಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಫಂಗಸ್ ಅನ್ನು ನಿಯಂತ್ರಿಸುತ್ತದೆ.. ಇದರಿಂದ ನೀರನ್ನು ದೀರ್ಘಕಾಲ ತಾಜಾವಾಗಿರಿಸುತ್ತದೆ ಎನ್ನಲಾಗಿದೆ. ಈ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು, ನೀವು ನೀರಿನ ತೊಟ್ಟಿ ಅಥವಾ ಟ್ಯಾಂಕರ್‌ನಲ್ಲಿ ಪೇರಲ ಕಡ್ಡಿಗಳನ್ನು ಹಾಕಿದರೆ ಕನಿಷ್ಠ ಹತ್ತು ವರ್ಷಗಳವರೆಗೆ ತೊಟ್ಟಿಯಲ್ಲಿ ಫಂಗಸ್ ಸಮಸ್ಯೆ ಇರುವುದಿಲ್ಲ.. 

ತಜ್ಞರ ಸಲಹೆಯ ಪ್ರಕಾರ, ನೀರು ಕೆಡುವುದನ್ನು ತಡೆಯಲು ಕನಿಷ್ಠ 200 ಗ್ರಾಂ ಪೇರಲ ಕಡ್ಡಿಯನ್ನು 1000 ಲೀಟರ್ ನೀರಿನ ತೊಟ್ಟಿಯಲ್ಲಿ ಹಾಕಲು ಸೂಚಿಸಲಾಗುತ್ತದೆ. ತೊಟ್ಟಿಯ ನೀರಿನಲ್ಲಿ ಕಡ್ಡಿಯೊಂದಿಗೆ ಪೇರಲ ಎಲೆಗಳನ್ನು ಸಹ ಬಳಸಬಹುದು. ಆದರೆ ಪೇರಲದ ಕಡ್ಡಿಯ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣಗಳು ಪ್ರಬಲವಾಗಿರುವ ಕಾರಣ ಅದನ್ನು ಬಳಸುವುದು ಉತ್ತಮ ಎನ್ನುತ್ತಾರೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನವನ್ನು ಅಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರ ತಜ್ಞರ ಮಾಹಿತಿ ಪಡೆಯುವುದು ಉತ್ತಮ.. ಇದನ್ನು Zee Kannada News ಖಚಿತಪಡಿಸಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News