ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿ 60 ಸಾವಿರ ರೂ ಮೌಲ್ಯದ iPhone..!

Apple iPhone 12 Miniನ 64 GB ಮಾಡೆಲ್‌ನ ಬಿಡುಗಡೆಯ ಬೆಲೆ 59,900 ರೂ. ಆಗಿದೆ, ಆದರೆ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು  49,999 ರೂ. ಗೆ ಲಿಸ್ಟ್ ಮಾಡಲಾಗಿದೆ. 

Written by - Ranjitha R K | Last Updated : May 27, 2022, 10:57 AM IST
  • ಆಪಲ್‌ನ ಐಫೋನ್‌ಗಳು ತುಂಬಾ ದುಬಾರಿಯಾಗಿದೆ.
  • ಅಗ್ಗದ ಬೆಲೆಗೆ ಐಫೋನ್ 12 ಮಿನಿ ಅನ್ನು ಖರೀದಿಸಬಹುದು.
  • ಗ್ರಾಹಕರು 20,000 ರೂ.ಗೆ iPhone 12 Mini ತಮ್ಮದಾಗಿಸಿಕೊಳ್ಳಬಹುದು.
ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿ 60  ಸಾವಿರ ರೂ ಮೌಲ್ಯದ  iPhone..! title=
flipkart offer on iphone

ಬೆಂಗಳೂರು : ಆಪಲ್‌ನ ಐಫೋನ್‌ಗಳು ತುಂಬಾ ದುಬಾರಿಯಾಗಿದೆ. ಈ ಕಾರಣಕ್ಕಾಗಿಯೇ ಜನರು ಇದನ್ನೂ ಖರೀದಿಸಲು ಮುಂದೆ ಹಿಂದೆ ಯೋಚಿಸುತ್ತಾರೆ.  ಆದರೆ ಈಗ ಅಗ್ಗದ ಬೆಲೆಗೆ ಐಫೋನ್ 12 ಮಿನಿ ಅನ್ನು ಖರೀದಿಸಬಹುದು.. ಫ್ಲಿಪ್ ಕಾರ್ಟ್ ನಲ್ಲಿ 64GB ಮಾದರಿಯಲ್ಲಿ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇಲ್ಲಿ ನೀಡಲಾಗಿರುವ ಆಫರ್ ಮೂಲಕ ಗ್ರಾಹಕರು 20,000 ರೂ.ಗೆ iPhone 12 Mini ತಮ್ಮದಾಗಿಸಿಕೊಳ್ಳಬಹುದು. 

Apple iPhone 12 Mini ಕೊಡುಗೆಗಳು ಮತ್ತು ರಿಯಾಯಿತಿಗಳು : 
Apple iPhone 12 Miniನ 64 GB ಮಾಡೆಲ್‌ನ ಬಿಡುಗಡೆಯ ಬೆಲೆ 59,900 ರೂ. ಆಗಿದೆ, ಆದರೆ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು  49,999 ರೂ. ಗೆ ಲಿಸ್ಟ್ ಮಾಡಲಾಗಿದೆ. ಅಂದರೆ, ಫೋನ್ ಮೇಲೆ 9,901 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ : Electricity: ಮತ್ತೆ ಮತ್ತೆ ಪವರ್ ಕಟ್ ಆಗ್ತೀದ್ಯಾ? ಈ ಕೆಲಸ ಮಾಡಿ ಕರೆಂಟ್ ಇಲ್ಲದೆಯೂ ಓಡುತ್ತೆ ಎಸಿ-ಕೂಲರ್

Apple iPhone 12 Mini Exchange ಆಫರ್ :
ಅಲ್ಲದೆ, ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ ಬದಲಿಗೆ ಹೊಸ ಫೋನ್ ಖರೀದಿಸುವುದಾದರೆ ಫ್ಲಿಪ್‌ಕಾರ್ಟ್ 30,000 ರೂಪಾಯಿಗಳವರೆಗೆ ವಿನಿಮಯ ಮೌಲ್ಯವನ್ನು ನೀಡುತ್ತಿದೆ. ಎಕ್ಸ್‌ಚೇಂಜ್ ಆಫರ್‌ನ ಲಾಭವನ್ನು ಪಡೆಯುವ ಮೂಲಕ ಗ್ರಾಹಕರು iPhone 12 Mini ಅನ್ನು 20,000 ರೂ .ಗೆ ಖರೀದಿಸಲು ಸಾಧ್ಯವಾಗುತ್ತದೆ. ಆದರೆ ನೆನಪಿರಲಿ ಫೋನ್ ಎಕ್ಸ್ಚೇಂಜ್ ಮಾಡಬೇಕಾದರೆ ಅದರ ಸ್ಥಿತಿ, ಮಾದರಿಯನ್ನು ಪರಿಶೀಲಿಸಲಾಗುತ್ತದೆ. ಫೋನ್ ಸುಸ್ಥಿತಿಯಲ್ಲಿದ್ದು, ಅದರ ಮಾಡೆಲ್ ಇತ್ತೀಚಿನದ್ದಾಗಿದ್ದರೆ ಮಾತ್ರ ಪೂರ್ತಿ ಡಿಸ್ಕೌಂಟ್ ಸಿಗುತ್ತದೆ.  

Apple iPhone 12 Mini Bank ಆಫರ್ :
ಫ್ಲಿಪ್‌ಕಾರ್ಟ್ ಐಫೋನ್ 12 ಮಿನಿಯೊಂದಿಗೆ ಹಲವಾರು ಬ್ಯಾಂಕ್ ಆಫರ್ ಗಳನ್ನೂ ಕೂಡಾ ಲಿಸ್ಟ್ ಮಾಡಲಾಗಿದೆ. RBL ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. Flipkart Axis ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ನೀಡಲಾಗುವುದು.

ಇದನ್ನೂ ಓದಿ : Instagram Reels ತಯಾರಿಸುವುದು ಇನ್ಮುಂದೆ ಮತ್ತಷ್ಟು ಉತ್ತಮ ಅನುಭವ ನೀಡಲಿದೆ, ಹೊಸ ವೈಶಿಷ್ಯದಿಂದ ನೀವು ಈ ಕೆಲಸ ಮಾಡಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News