Actor Rami Reddy life : ಒಂದು ಕಾಲದಲ್ಲಿ ಈ ನಟನನ್ನು ತೆರೆ ಮೇಲೆ ನೋಡಿದ್ರೆ ಪ್ರೇಕ್ಷಕರು ಭಯದಿಂದ ನಡುಗುತ್ತಿದ್ದರು. ಸ್ಪಾಟ್ ನಾಗ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಈ ನಟ ತಮ್ಮ ಮೊದಲ ಸಿನಿಮಾದಲ್ಲೇ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ಅದರ ನಂತರ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಪ್ರಶಂಸೆ ಪಡೆದರು. ಆದರೆ ಈ ನಟನ ಕೊನೆಯ ದಿನಗಳ ಬಗ್ಗೆ ನೀವು ತಿಳಿದ್ರೆ, ಕಣ್ಣೀರು ನಿಲ್ಲುವುದಿಲ್ಲ.
ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಖಳನಾಯಕರೆಂದರೆ ತೆರೆಯ ಮೇಲೆ ಮಾತ್ರವಲ್ಲ, ಹೊರಗೆ ಕಾಣಿಸಿಕೊಂಡರೂ ಪ್ರೇಕ್ಷಕರು ಭಯದಿಂದ ನಡುಗುತ್ತಿದ್ದರು. ಕೆಲವು ನಟರು ತಮ್ಮ ಅಭಿನಯದಿಂದ ಬೆಳ್ಳಿತೆರೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರಲ್ಲಿ ರಾಮಿ ರೆಡ್ಡಿ ಕೂಡ ಒಬ್ಬರು.
ಈಗಿನ ಪ್ರೇಕ್ಷಕರಿಗೆ ಇವರ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ 90ರ ದಶಕದಲ್ಲಿ ಇವರ ಹೆಸರು ಕೇಳದ ಸಿನಿಪ್ರೇಮಿಯೇ ಇಲ್ಲ. ಸ್ಪಾಟ್ ನಾಗ ಚಿತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಮಿರೆಡ್ಡಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ನಟಿಸಿ ತಮ್ಮ ಛಾಪು ಮೂಡಿಸಿದ್ದಾರೆ..
ರಾಮಿರೆಡ್ಡಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ಕೊನೆಯ ಚಿತ್ರ ಮರಮ್. ಹೆಚ್ಚಾಗಿ ಇವರು ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಡಿಬಿಡಿ ಗಂಡ, ಲಂಕೇಶ್, ಪೊಲೀಸ್ ಸ್ಟೋರಿ 2, ಸೇರಿದಂತೆ ಹಲವು ಸಿನಿಮಾಗಲ್ಲಿ ನಟಿಸಿದ್ದಾರೆ..
ಬೆರಳೆಣಿಕೆಯಷ್ಟು ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅಗ್ರ ಖಳ ನಟನಾಗಿ ಹೊರಹೊಮ್ಮುತ್ತಿದ್ದ ಸಮಯದಲ್ಲಿ ಅನಿರೀಕ್ಷಿತ ಸಮಸ್ಯೆಯೊಂದು ರಾಮಿರೆಡ್ಡಿಯನ್ನು ಕಾಡಿತ್ತು. ಅವರು ಯಕೃತ್ತಿನ ಕಾಯಿಲೆಯಿಂದ 2011 ರಲ್ಲಿ 55ನೇ ವಯಸ್ಸಿನಲ್ಲಿ ನಿಧನರಾದರು.
ರಾಮಿರೆಡ್ಡಿ ಅವರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾಗಿನಿಂದ ನರಕಯಾತನೆ ಅನುಭವಿಸಿದರು. ಅವರು ಗುರುತಿಸಲಾಗದಷ್ಟು ತೆಳುವಾದರು. ಹಲವಾರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಏಪ್ರಿಲ್ 14, 2011 ರಂದು ನಿಧನರಾದರು.
ರಾಮಿರೆಡ್ಡಿಯವರು ಚಿತ್ತೂರು ಜಿನ್ನಾ ವಾಯಲ್ಪಾಡು ಸಮೀಪದ ಓಬುಲಂವಾರಿಪಲ್ಲೆಯಲ್ಲಿ ಜನಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಉರ್ದು ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು.
ರಾಮಿರೆಡ್ಡಿಯವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ನಟ ಮತ್ತು ಪತ್ರಕರ್ತ ಮಾತ್ರವಲ್ಲದೆ ಬಾಸ್ಕೆಟ್‌ಬಾಲ್ ಆಟಗಾರ ಕೂಡ. ನಟನಾಗಿ ಪ್ರೇಕ್ಷಕರನ್ನು ರಂಜಿಸಿದ ರಾಮಿರೆಡ್ಡಿ ಕೊನೆಯ ದಿನಗಳಲ್ಲಿ ಲಿವರ್ ಸಮಸ್ಯೆಯಿಂದ ನರಳಿ ನರಳಿ ಪ್ರಾಣಬಿಟ್ಟರು..