ಅಗ್ಗದ ಬೆಲೆಗೆ ಸಿಗುತ್ತಿದೆ ಈ ಐದು Washing Machine, ಖರೀದಿ ಹೇಗೆ ತಿಳಿಯಿರಿ

ವಾಶಿಂಗ್ ಮೆಷಿನ್ ಇಂದಿನ ಕಾಲದ ಅವಶ್ಯಕತೆಗಳಲ್ಲಿ ಒಂದು.  ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡಿನ ವಾಶಿಂಗ್ ಮೆಷಿನ್ ಗಳಿವೆ.

Written by - Ranjitha R K | Last Updated : Jul 15, 2021, 08:54 PM IST
  • ಅಗ್ಗದ Washing Machine ಪಟ್ಟಿ ಇಲ್ಲಿದೆ ನೋಡಿ
  • 5 ಸ್ಟಾರ್ ರೇಟಿಂಗ್ ಹೊಂದಿರುವ್ ಮೆಷಿನ್ ಗಳು
  • ಕಡಿಮೆ ಬೆಲೆಗೆ ಸಿಗುತ್ತಿವೆ ಸ್ಯಾಮ್‌ಸಂಗ್‌ನಿಂದ ಐಎಫ್‌ಬಿಯವರೆಗಿನ ವಾಷಿಂಗ್ ಮೆಷಿನ್
ಅಗ್ಗದ ಬೆಲೆಗೆ ಸಿಗುತ್ತಿದೆ ಈ ಐದು Washing Machine, ಖರೀದಿ ಹೇಗೆ ತಿಳಿಯಿರಿ title=
ಅಗ್ಗದ Washing Machine ಪಟ್ಟಿ ಇಲ್ಲಿದೆ ನೋಡಿ (photo zee news)

ನವದೆಹಲಿ : ವಾಶಿಂಗ್ ಮೆಷಿನ್ ಇಂದಿನ ಕಾಲದ ಅವಶ್ಯಕತೆಗಳಲ್ಲಿ ಒಂದು.  ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡಿನ ವಾಶಿಂಗ್ ಮೆಷಿನ್ ಗಳಿವೆ. ಈ ಯಂತ್ರಗಳು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಪೈಕಿ ಕೆಲವು ಮೆಷಿನ್ ಗಳು ಕಡಿಮೆ ಬೆಲೆಗೆ ಸಿಗುತ್ತಿವೆ. 

MarQ5 ವಾಶಿಂಗ್ ಮೆಷಿನ್ :  
ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ (flipkart sale) ಮಾಡಲಾಗುತ್ತದೆ. ಈ ಮೆಷಿನ್ ನ  ದೊಡ್ಡ ವೈಶಿಷ್ಟ್ಯವೆಂದರೆ ಅದರ ಬೆಲೆಯೂ ಬಹಳ ಕಡಿಮೆ. ಇದು 5 ಸ್ಟಾರ್ ರೇಟಿಂಗ್ ಹೊಂದಿದ್ದು, 7190 ರೂ.ಗೆ ಇದನ್ನು ಖರೀದಿಸಬಹುದು.  

ಇದನ್ನೂ ಓದಿ : WhatsApp Multi-Device Support Rolled Out: ಬಿಡುಗಡೆಯಾಗಿದೆ ವಾಟ್ಸ್ ಆಪ್ ನ ಈ ಬಹುನಿರೀಕ್ಷಿತ ವೈಶಿಷ್ಟ್ಯ, ನಿಮಗೂ ಸಿಕ್ಕಿದೇಯಾ ಪರೀಕ್ಷಿಸಿ

ಸ್ಯಾಮ್‌ಸಂಗ್ 6.5 ಕೆಜಿ (SAMSUNG 6.5 kg):
ಸ್ಯಾಮ್‌ಸಂಗ್ (Samsung) 6.5 ಕೆಜಿ ಕೂಡಾ 5 ಸ್ಟಾರ್ ರೇಟಿಂಗ್ ಹೊದಿದೆ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ .9,490 ಕ್ಕೆ ಖರೀದಿಸಬಹುದು. ಇದರ ಸಾಮರ್ಥ್ಯ 6.5 ಕೆ.ಜಿ. ಈ ಮೆಷಿನ್ ಮೇಲೆ ಎರಡು ವರ್ಷಗಳ ಗ್ಯಾರಂಟಿ ಸಿಗುತ್ತದೆ. ಇನ್ನು ಇದರ ಮೋಟಾರು ಮೇಲೆ 5 ವರ್ಷಗಳ ಗ್ಯಾರಂಟಿ ಇದ್ದು, ಇದರ ಬೆಲೆ ಕೇವಲ 9,490 ರೂ.

ಐಎಫ್ ಬಿ 8 ಕೆ.ಜಿ (IFB 8 kg)   :  
ಈ ಮೆಷಿನ್ ಮೇಲೆ ಸ್ವಲ್ಪ ಹೆಚ್ಚು ಖರ್ಚು ಮಾಡಬೇಕಾಗಬಹುದು. ಇದು 35,990 ರೂಗಳಿಗೆ ಲಭ್ಯವಿದೆ. ಇದು ಫುಲ್ ಆಟೋ ಮ್ಯಟಿಕ್ ಫ್ರಂಟ್ ಲೋಡೆಡ್ ಆಗಿದೆ. ಇದರ ಸಾಮರ್ಥ್ಯ 8 ಕೆ.ಜಿ. ಇದು 14 ವಾಶ್ ಪ್ರೋಗ್ರಾಂ ಹೊಂದಿದೆ. ಇದರಲ್ಲಿ, ಕಂಪನಿಯು 10 ವರ್ಷಗಳ ಕಾಲ ಸ್ಪೇರ್ ಪಾರ್ಟ್ ಸಪೋರ್ಟ್ ನೀಡುತ್ತದೆ. 

ಇದನ್ನೂ ಓದಿ:  ಕೇವಲ 11 ರೂಪಾಯಿಗೆ ಸಿಗಲಿದೆ 1 GB data, ಇಲ್ಲಿದೆ Jio ಅಗ್ಗದ ರಿಚಾರ್ಜ್ ಆಫರ್

ಸ್ಯಾಮ್‌ಸಂಗ್ 8.5 ಕೆಜಿ  (SAMSUNG 8.5 kg) : 
 ಇದರ ಬೆಲೆ 13,290 ರೂಗಳಾಗಿವೆ. ಇದು ಪ್ರಕೃತಿ ಸ್ನೇಹಿಯಾಗಿದೆ ಎಂದು ಕಂಪನಿ (Company) ಹೇಳಿಕೊಂಡಿದೆ. ಇದು ಮ್ಯಾಜಿಕ್ ಫಿಲ್ಟರ್‌ನೊಂದಿಗೆ ಬರುತ್ತದೆ ಅದು ನಿಮ್ಮ ಬಟ್ಟೆಗಳನ್ನು ಲಿಂಟ್ ಫ್ರೀ ಯಾಗಿರಿಸುತ್ತದೆ.  ಒಳಚರಂಡಿ ವ್ಯವಸ್ಥೆ ಜಾಮ್ ಆಗಲು ಬಿಡುವುದಿಲ್ಲ. 

ಒನಿಡಾ 8 ಕೆಜಿ (ONIDA 8 kg) :
ಒನಿಡಾ (Onida)  ವಾಷಿಂಗ್ ಮೆಷಿನ್ 9,490 ರೂಗಳಿಗೆ ಸಿಗುತ್ತದೆ. ಇದರಲ್ಲಿ ತುಕ್ಕು ಹಿಡಿಯುವುದಿಲ್ಲ. ಈ ಮೆಷಿನ್ ನಲ್ಲಿ ಅಳವಡಿಸಲಾಗಿರುವ ಹೆಕ್ಸಾಫಿನ್ ಪಲ್ಸೇಟರ್ ಫಿಲ್ಟರ್ ನಿಮ್ಮ ಬಟ್ಟೆಗಳ ಮೇಲಿನ ಕಲೆಗಳಿಂದ ಪರಿಹಾರ ನೀಡುತ್ತದೆ. ಮ್ಯಾಜಿಕ್ ಫಿಲ್ಟರ್ ಬಟ್ಟೆಗಳನ್ನು ಲಿಂಟ್ ಫ್ರೀ ಯಾಗಿರಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News