Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ

Fake SIM Card - ನಿಮ್ಮ ಹೆಸರಿನಲ್ಲಿಯೂ ಕೂಡ ನಕಲಿ SIM ಕಾರ್ಡ್ ಚಾಲ್ತಿಯಲ್ಲಿ ಇಲ್ಲ ಎಂಬುದರ ಬಗ್ಗೆ ನೀವು ಎಚ್ಚರಿಕೆಯನ್ನು ವಹಿಸಬೇಕು.

Written by - Nitin Tabib | Last Updated : May 24, 2021, 12:54 PM IST
  • ನಿಮ್ಮ ಹೆಸರಿನಲ್ಲಿಯೂ ಕೂಡ ಯಾರಾದರು ನಕಲಿ ಸಿಮ್ ಪಡೆದಿದ್ದಾರೆಯೇ?
  • ಒಂದು ವೇಳೆ ಪಡೆದುಕೊಂಡಿದ್ದರೆ ಏನು ಮಾಡಬೇಕು?
  • ಅದನ್ನು ಹೇಗೆ ಪತ್ತೆಹಚ್ಚಬೇಕು? ಮತ್ತು ಅದನ್ನು ಹೇಗೆ ಬ್ಲಾಕ್ ಮಾಡಬೇಕು?
Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ  title=
Fake SIM Card (File Photo)

ನವದೆಹಲಿ: Fake SIM Card - ಹಲವು ಬಾರಿ ಜನರು ತಮ್ಮ ಗುರುತಿನ ಚೀಟಿಯ ಆಧಾರದ ಮೇಲೆ ನಕಲಿ SIM ಚಾಲ್ತಿಯಲ್ಲಿರುವುದರ ಕುರಿತು ದೂರುತ್ತಾರೆ. ದೇಶದಲ್ಲಿ ಅಪರಾಧಿ ಕೃತ್ಯಗಳನ್ನು ಎಸಗಲು ಹಲವು ಬಾರಿ ಅಪರಾಧಿಗಳು ನಕಲಿ ಸಿಮ್ ಕಾರ್ಡ್ ಬಳಸುತ್ತಾರೆ ಹಾಗೂ ಅಪರಾಧಗಳನ್ನು ಎಸಗಲು ಅವುಗಳನ್ನು ಅಕ್ರಮವಾಗಿ ಬಳಸುತ್ತಾರೆ. ಹೀಗಾಗಿ ನಿಮ್ಮ ಹೆಸರ ಮೇಲೂ ಕೂಡ ನಕಲಿ ಸಿಮ್ ಕಾರ್ಡ್ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತರಿಪಡಿಸುವುದು ಮತ್ತು ಎಚ್ಚರಿಕೆ ವಹಿಸುವುದು ತುಂಬಾ ಆವಶ್ಯವಾಗಿದೆ.

ಆನ್ಲೈನ್ ನಲ್ಲಿ ಇದನ್ನು ಪತ್ತೆಹಚ್ಚಬಹುದು (You can check online)
ಜನರ ಇಂತಹ ಸಮಸ್ಯೆಗಳನ್ನು ಪರಿಹರಿಸಲು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಆನ್‌ಲೈನ್ ಪೋರ್ಟಲ್ (Online Portal) ಅನ್ನು ಪ್ರಾರಂಭಿಸಿದೆ. ತಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಯಾರಾದರೂ ಬಯಸಿದರೆ, ಅವರು tafcop.dgtelecom.gov.in ವೆಬ್ ಪೋರ್ಟಲ್‌ಗೆ ಸುಲಭವಾಗಿ ಭೇಟಿ ನೀಡಿ ಅದನ್ನು ಪರಿಶೀಲಿಸಬಹುದು.

ಒಂದು ವೇಳೆ ನಿಮ್ಮ ಐಡಿ ಪ್ರೂಫ್ ಆಧಾರದ ಮೇಲೆ ಯಾವುದೇ ಓರ್ವ ವ್ಯಕ್ತಿ ನಕಲಿ ಸಿಮ್ ಬಳಸುತ್ತಿದ್ದರೆ, ನೀವೂ ಕೂಡ ಈ ಪೋರ್ಟಲ್ ಮಾಧ್ಯಮದ ಮೂಲಕ ನಂಬರ್ ಬ್ಲಾಕ್ ಮಾಡಬಹುದು. ಒಂದು ಐಡಿ ಪ್ರೂಫ್ ಆಧಾರದ ಮೇಲೆ ಕೇವಲ 9 ಸಿಮ್ ಕಾರ್ಡ್ ಗಳನ್ನು ಮಾತ್ರ ಜಾರಿಗೊಳಿಸಬಹುದು ಎಂಬುದು ನಿಮಗೆ ತಿಳಿದಿರಲಿ.

ಇದನ್ನೂ ಓದಿ- face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ..

ಇದರ ಪ್ರಕ್ರಿಯೆ ಏನು?  (Process To Block SIM Card)
- ಇದಕ್ಕಾಗಿ ನೀವು ಮೊದಲು ದೂರ ಸಂಪರ್ಕ ಇಲಾಖೆಯ  ವೆಬ್ ಪೋರ್ಟಲ್ tafcop.dgtelecom.gov.in ಗೆ ಭೇಟಿ ನೀಡಬೇಕು (How To Block Fake SIM Card).

- ಬಳಿಕ ವೆಬ್ ಸೈಟ್ ನಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

- ಈಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ OTP ಬರಲಿದೆ.

- ಇದಾದ ಬಳಿಕ ನಿಮಗೆ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ನಿಮ್ಮ ಐಡಿ ಪ್ರೂಫ್ ಬಳಸಿ ಪಡೆದುಕೊಳ್ಳಲಾದ ಮತ್ತು ಚಾಲ್ತಿಯಲ್ಲಿರುವ SIM ಗಳ ಪಟ್ಟಿ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ-WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್

- ಒಂದು ವೇಳೆ ನಿಮ್ಮ ಐಡಿ ಪ್ರೂಫ್ ಆಧಾರದ ಮೇಲೆ ಯಾರಾದರೊಬ್ಬರು ನಕಲಿ SIM ಬಳಸುತ್ತಿದ್ದರೆ. ಅಲ್ಲಿಯೇ ನೀವು ಈ ಕುರಿತು ರಿಪೋರ್ಟ್ ಮಾಡಬಹುದು. 

- ಪೋರ್ಟಲ್ ಮೇಲೆ ನಿಮ್ಮ ದೂರನ್ನು ದಾಖಲಿಸಿಕೊಂಡು ಅದರ ತನಿಖೆ ಕೂಡ ನಡೆಸಲಾಗುವುದು. 

- ನಿಮ್ಮ ದೂರು ಒಂದು ವೇಳೆ ನಿಜ ಎಂದು ಸಾಬೀತಾದಲ್ಲಿ ಆ ನಕಲಿ ಖಾತೆಗಳನ್ನು ಬ್ಲಾಕ್ ಮಾಡಲಾಗುವುದು.

ಇದನ್ನೂ ಓದಿ- CoWIN ಅಪ್ಲಿಕೇಶನ್‌ನಲ್ಲಿ ನೋಂದಣಿ ಇನ್ನಷ್ಟು ಸುಲಭ, ಶೀಘ್ರದಲ್ಲೇ ಸಿಗಲಿದೆ ಈ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News