How To Block Spam Calls: ಈ ರೀತಿ ಮಾಡಿದರೆ Spam Calls ಕಾಟ ಕ್ಷಣ ಮಾತ್ರದಲ್ಲಿ ತಪ್ಪುತ್ತದೆ

How To Block Spam Calls:ಸ್ಪ್ಯಾಮ್ ಕರೆಗಳಿಂದ ಕಿರಿಕಿರಿಗೊಂಡಿದ್ದು, ಈ ಕಾಲ್ ಗಳಿಂದ ಮುಕ್ತಿ ಬೇಕಿದ್ದರೆ  ಇಲ್ಲಿದೆ ಸುಲಭ ಉಪಾಯ. ಈ ಅಪ್ಲಿಕೇಶನ್‌ಗಳ ಮೂಲಕ ನಿಮಗೆ ಬೇಡದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : May 31, 2022, 12:37 PM IST
  • Spam Calls ಅನ್ನು ಬ್ಲಾಕ್ ಮಾಡುವುದು ಹೇಗೆ ?
  • ಕೆಲವು ಆ್ಯಪ್‌ ಮೂಲಕ ಈ ಕರೆಗಳನ್ನು ನಿರ್ಬಂಧಿಸಬಹುದು
  • ಕಾಲ್ ಬ್ಲಾಕ್‌ಗಾಗಿ 5 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು
How To Block Spam Calls: ಈ ರೀತಿ ಮಾಡಿದರೆ Spam Calls ಕಾಟ ಕ್ಷಣ ಮಾತ್ರದಲ್ಲಿ ತಪ್ಪುತ್ತದೆ   title=
How To Block Spam Calls (file photo)

ಬೆಂಗಳೂರು : How To Block Spam Calls : ಫೋನ್‌ನಲ್ಲಿ ಸ್ಪ್ಯಾಮ್ ಕರೆಗಬರುವುದು  ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಲೋನ್ ಬೇಕಾ ಎಂದು ಕೇಳಿಕೊಂಡು ಕರೆ ಬಂದರ್, ಇನ್ನು ಕೆಲವೊಮ್ಮೆ ವಿಮೆ ಖರೀದಿಸುವಂತೆ ಕರೆ ಬರುತ್ತವೆ. ಆದರೆ ಇಂಥಹ ಫೋನ್ ಕಾಲ್ ಗಳನ್ನು ಎಷ್ಟು ಬಾರಿ ಕಟ್ ಮಾಡಿದರೂ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ.  ಒಂದು ನಬಾರ್  ಬ್ಲಾಕ್ ಮಾಡಿದರೂ ಬೇರೆ ನಂಬರ್ ಗಳಿಂದ ಕರೆಗಳು ಬರಲಾರಂಭಿಸುತ್ತವೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡು ಕೊಳ್ಳಬಹುದು. 

ಇದಕ್ಕಾಗಿ Call Blocking Appsನ  ಸಹಾಯವನ್ನು ಪಡೆದುಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಂತಹ ಹಲವು ಆ್ಯಪ್‌ಗಳಿದ್ದು, ಫೋನ್‌ಗೆ ಬಂದ ಕರೆ ಸ್ಪ್ಯಾಮ್ ಕರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಈ ಅಪ್ಲಿಕೇಶನ್‌ಗಳ ಮೂಲಕ ನಿಮಗೆ ಬೇಡದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ :  Airtel New Plan: ಮೂರು ಅತ್ಯದ್ಭುತ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಏರ್ಟೆಲ್

ಕಾಲ್ ಬ್ಲಾಕ್‌ಗಾಗಿ 5 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು :
1.Truecaller: ಈ ಅಪ್ಲಿಕೇಶನ್ ಅನ್ನು ಹೆಚ್ಚು ಬಳಸಲಾಗುತ್ತದೆ.  ಯಾರು ನಂಬರ್ ಸೇವ್ ಇಲ್ಲದೆ ಹೋದರೂ ಯಾರು ಕರೆ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯುವುದು ಇದರಿಂದ ಸಾಧ್ಯವಾಗುತ್ತದೆ. ವಂಚನೆ ಕರೆಗಳು ಮತ್ತು ಸ್ಪ್ಯಾಮ್ ಕರೆಗಳನ್ನು ಪತ್ತೆ ಮಾಡಲು ಮತ್ತು ಅವುಗಳನ್ನು ಬ್ಲಾಕ್ ಮಾಡಲು ಇದು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಮೂಲಕ ನೀವು ಯಾವುದೇ ಸಂಖ್ಯೆಯನ್ನು block listಗೆ ಸೇರಿಸಬಹುದು.  

2. Hiya: ಈ ಆ್ಯಪ್  ಕೂಡ ತುಂಬಾ ಸಹಕಾರಿಯಾಗಿದೆ. ಅಪ್ಲಿಕೇಶನ್ ಸ್ಪ್ಯಾಮ್ ಕರೆಗಳನ್ನು ಪತ್ತೆ ಮಾಡುತ್ತದೆ ಮತ್ತು ನಿರ್ಬಂಧಿಸುತ್ತದೆ. Hiya ಮೂಲಕ ಫೋನ್ ಬುಕ್ ಸಂಪರ್ಕಗಳಿಗೆ ಹೆಸರು ಮತ್ತು ವಿಳಾಸವನ್ನು ಕೂಡ ಸೇರಿಸಬಹುದು.

3. Calls Blacklist : ಇದು ಕೂಡ ಉತ್ತಮವಾದ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ ಕರೆ ಮತ್ತು SMS ಸಂದೇಶಗಳೆರಡಕ್ಕೂ ಕಾಲ್ ಬ್ಲಾಕರ್ ಆಗಿದೆ. 

ಇದನ್ನೂ ಓದಿ :  Facebook Messenger Scam 2022: 'ಈ ವಿಡಿಯೋದಲ್ಲಿ ನೀವಿದ್ದೀರಾ?' ಈ ಪ್ರಶ್ನೆಗೆ ಉತ್ತರ ನಿಮ್ಮನ್ನು ಬೀದಿಗೆ ತರಬಹುದು, ಎಚ್ಚರ!

4. Should I Answer? : ಈ ಅಪ್ಲಿಕೇಶನ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಈ ಅಪ್ಲಿಕೇಶನ್ ಸ್ಪ್ಯಾಮ್ ಸಂಖ್ಯೆಗಳ ದೊಡ್ಡ ಡೇಟಾಬೇಸ್ ಅನ್ನು ಹೊಂದಿದೆ. ಮಾತ್ರವಲ್ಲ ಅದನ್ನು ನಿರಂತರವಾಗಿ ಅಪ್ಡೇಟ್ ಮಾಡಲಾಗುತ್ತದೆ.  ಯಾರಾದರೂ ಕರೆ ಮಾಡಲು ಪ್ರಯತ್ನಿಸಿದರೆ, ಅದು ತಕ್ಷಣ ಆ ಕರೆಯನ್ನು ನಿರ್ಬಂಧಿಸುತ್ತದೆ.  ಈ ಆ್ಯಪ್ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನೂ ನಿರ್ಬಂಧಿಸಬಹುದಾಗಿದೆ. 

5. Call Blocker: ಈ ಅಪ್ಲಿಕೇಶನ್ ಮೂಲಕ ಕಾಲ್ ಸೆಂಟರ್‌ಗಳು, ಸ್ಪ್ಯಾಮ್ ಸಂಖ್ಯೆಗಳು, ರೋಬೋಕಾಲ್‌ಗಳು, ಟೆಲಿಮಾರ್ಕೆಟಿಂಗ್ ಇತ್ಯಾದಿಗಳಿಂದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News