Amazon: ಕೇವಲ 2,000 ರೂ.ಗೆ OPPO 5G ಸ್ಮಾರ್ಟ್‌ಫೋನ್ ಖರೀದಿಸಿ

Amazon:  ಪ್ರಸ್ತುತ ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ ನಡೆಯುತ್ತಿದೆ. ಈ Oppo ನ 5G ಫೋನ್‌ನಲ್ಲಿ ಭಾರಿ ರಿಯಾಯಿತಿ ದೊರೆಯುತ್ತಿದೆ. OPPO A74 5G ಅನ್ನು ಕೇವಲ 2 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...

Written by - Yashaswini V | Last Updated : Nov 17, 2021, 12:59 PM IST
  • ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ ನಡೆಯುತ್ತಿದೆ
  • Oppo ನ 5G ಫೋನ್‌ನಲ್ಲಿ ಭಾರಿ ರಿಯಾಯಿತಿ ಇದೆ
  • OPPO A74 5G ಅನ್ನು ಕೇವಲ 2 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು
Amazon: ಕೇವಲ 2,000 ರೂ.ಗೆ OPPO 5G ಸ್ಮಾರ್ಟ್‌ಫೋನ್ ಖರೀದಿಸಿ title=
Amazon Deal Of The Day

Amazon: ಅಮೆಜಾನ್‌ನಲ್ಲಿ ದೀಪಾವಳಿ ಮಾರಾಟ ಭರ್ಜರಿಯಾಗಿತ್ತು. ಜನರು ಮಾರಾಟದ ಲಾಭವನ್ನು ಪಡೆದರು ಮತ್ತು ಅತ್ಯಂತ ದುಬಾರಿ ಸ್ಮಾರ್ಟ್ಫೋನ್ ಕೊಡುಗೆಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಿದರು. ಇದೀಗ ದೀಪಾವಳಿ ಮಾರಾಟ ಮುಗಿದಿದೆ. ಆದರೆ ಅನೇಕ ಸ್ಮಾರ್ಟ್‌ಫೋನ್‌ಗಳು ಇನ್ನೂ ಉತ್ತಮ ಕೊಡುಗೆಗಳನ್ನು ಪಡೆಯುತ್ತಿವೆ. ಪ್ರಸ್ತುತ ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ (Smartphone Upgrade Days) ನಡೆಯುತ್ತಿದೆ. ಅಲ್ಲಿ Oppo ಮತ್ತು Samsung ಫೋನ್‌ಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಈ ಸೇಲ್‌ನಲ್ಲಿ 5G ಸ್ಮಾರ್ಟ್‌ಫೋನ್‌ಗಳ ಝೇಂಕಾರವೂ ಇದೆ. Oppo ನ 5G ಫೋನ್‌ನಲ್ಲಿ ಭಾರಿ ರಿಯಾಯಿತಿ ಲಭ್ಯವಾಗುತ್ತಿದೆ. OPPO A74 5G ಅನ್ನು ಕೇವಲ 2 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಹೇಗೆಂದು ತಿಳಿಯೋಣ...

OPPO A74 5G ಕೊಡುಗೆಗಳು ಮತ್ತು ರಿಯಾಯಿತಿಗಳು
OPPO A74 5G ಯ ​​6GB RAM + 128GB ಸ್ಟೋರೇಜ್ ರೂಪಾಂತರದ ಬಿಡುಗಡೆ ಬೆಲೆ 20,990 ರೂ. ಆದರೆ ಈ ಫೋನ್ Amazon ನಲ್ಲಿ 17,990 ರೂ.ಗೆ ಲಭ್ಯವಿದೆ. ಅಂದರೆ ಫೋನ್ ನಲ್ಲಿ 3 ಸಾವಿರ ರೂಪಾಯಿ ಕೊಡುಗೆ ನೀಡಲಾಗುತ್ತಿದೆ. ಆದರೆ ಅನೇಕ ಕೊಡುಗೆಗಳೊಂದಿಗೆ ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 

ಇದನ್ನೂ ಓದಿ- Laptop: ಕೆಲಸ ಮಾಡುವಾಗ ನಿಮ್ಮ ಲ್ಯಾಪ್‌ಟಾಪ್ ಸ್ಲೋ ಆಗುತ್ತಿದೆಯೇ? ಈ 5 ಟಿಪ್ಸ್ ಅನುಸರಿಸಿ

OPPO A74 5G ನಲ್ಲಿ ಬ್ಯಾಂಕ್ ಕೊಡುಗೆಗಳು:
ಫೋನ್ ಖರೀದಿಸಲು ನೀವು ಸಿಟಿಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ (Debit Card) ಪಾವತಿಸಿದರೆ, ನಂತರ ನಿಮಗೆ ಒಂದು ಸಾವಿರ ರೂ.ವರೆಗೆ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ. ಅಂದರೆ, ಫೋನ್ ಬೆಲೆ 16,990 ರೂ.ಗೆ ಇಳಿಕೆಯಾಗಲಿದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರ ಲಾಭವನ್ನೂ ಪಡೆದರೆ ಫೋನ್ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಇದನ್ನೂ ಓದಿ- Jio Vs Vodafone Idea: ಈ ಪ್ರಿಪೇಯ್ಡ್ ಯೋಜನೆಯಲ್ಲಿ 84 ದಿನಗಳವರೆಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ ಸಿಗಲಿದೆ 3GB ಡೇಟಾ

OPPO A74 5G ನಲ್ಲಿ ವಿನಿಮಯ ಕೊಡುಗೆ
OPPO A74 5G ನಲ್ಲಿ 15,000 ರೂಪಾಯಿಗಳವರೆಗೆ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಫೋನ್‌ನ ಸ್ಥಿತಿ ಉತ್ತಮವಾಗಿದ್ದಾಗ ಮತ್ತು ಫೋನ್ ಇತ್ತೀಚಿನದಾಗಿದ್ದರೆ ಮಾತ್ರ ಈ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ. ಇಷ್ಟು ರಿಯಾಯಿತಿ ಪಡೆಯಲು ನೀವು ಯಶಸ್ವಿಯಾದರೆ, ಫೋನ್ ಅನ್ನು ರೂ 1,990 ಗೆ ಖರೀದಿಸಬಹುದು. 

ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಡೇಸ್ ಮಾರಾಟವು ನವೆಂಬರ್ 16 ರಿಂದ 20 ರವರೆಗೆ ನಡೆಯಲಿದೆ. ನೀವು ಫೋನ್ ಅನ್ನು ಸೇಲ್‌ನಲ್ಲಿ ಖರೀದಿಸಿದರೆ, ನಂತರ 6 ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ವಾರಂಟಿ ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News