Car Price Hike: ವಾಹನ ಖರೀದಿದಾರರಿಗೆ ಬಿಗ್ ಶಾಕ್: ಹೊಸ ವರ್ಷಕ್ಕೆ ಈ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

Tata Motors Cars Price Hike: ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನಗಳು) ಶೈಲೇಶ್ ಚಂದ್ರ ಮಾತನಾಡಿ, ಬೆಲೆ ಏರಿಕೆಯಿಂದ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Dec 6, 2022, 01:20 PM IST
    • ಪ್ಯಾಸೆಂಜರ್ ವೆಹಿಕಲ್ಸ್ ಬೆಲೆಗಳಲ್ಲಿ ಹೆಚ್ಚಳ ಮಾಡುವ ಸಾಧ್ಯತೆ
    • ದೇಶದ ಜನಪ್ರಿಯ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಶಾಕ್
    • ಮಾನದಂಡಗಳಿಗೆ ಅನುಗುಣವಾಗಿ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಚಿಂತನೆ
Car Price Hike: ವಾಹನ ಖರೀದಿದಾರರಿಗೆ ಬಿಗ್ ಶಾಕ್: ಹೊಸ ವರ್ಷಕ್ಕೆ ಈ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ title=
car

Tata Motors Cars Price Hike: ದೇಶದ ಜನಪ್ರಿಯ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಗ್ರಾಹಕರಿಗೆ ಶಾಕ್ ನೀಡಲಿದೆ. ಮುಂದಿನ ತಿಂಗಳಿನಿಂದ ಕಂಪನಿಯು ತನ್ನ ಪ್ಯಾಸೆಂಜರ್ ವೆಹಿಕಲ್ಸ್ (ಪಿವಿ) ಬೆಲೆಗಳಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಎಪ್ರಿಲ್ 1, 2023 ರಿಂದ ಜಾರಿಗೆ ಬರಲಿರುವ ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಟಾಟಾ ಮೋಟಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನಗಳು) ಶೈಲೇಶ್ ಚಂದ್ರ ಮಾತನಾಡಿ, ಬೆಲೆ ಏರಿಕೆಯಿಂದ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮವೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿ ಈ ಡಿವೈಸ್ ಇದ್ದರೆ ಬಿಸಿಲಿನಿಂದಲೇ ಚಾರ್ಜ್ ಆಗುತ್ತದೆ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್

ಏಪ್ರಿಲ್‌ನಿಂದ ಕಠಿಣ ನಿಯಮಗಳು ಅನ್ವಯ:

ಏಪ್ರಿಲ್‌ನಿಂದ ಜಾರಿಗೆ ಬರಲಿರುವ ಕಟ್ಟುನಿಟ್ಟಾದ ಹೊರಸೂಸುವಿಕೆ ನಿಯಮಗಳು ಕಾರು ತಯಾರಿಕೆಯ ವೆಚ್ಚದ ಮೇಲೆ ಪರಿಣಾಮ ಬೀರಲಿವೆ ಎಂದು ಶೈಲೇಶ್ ಚಂದ್ರ ಹೇಳಿದ್ದಾರೆ. ಬ್ಯಾಟರಿಗಳ ಬೆಲೆಯೂ ಹೆಚ್ಚಿದ್ದು, ಇನ್ನೂ ಅದರ ಹೊರೆಯನ್ನು ಮಾರುಕಟ್ಟೆಗೆ ಹಾಕಿಲ್ಲ ಎಂದರು. ಈ ಎಲ್ಲ ಅಧಿಕ ಬೆಲೆಯಿಂದಾಗಿ ನಾವೂ ಕೂಡ ಬೆಲೆ ಏರಿಕೆ ಮಾಡುವ ಚಿಂತನೆ ನಡೆಸುತ್ತಿದ್ದೇವೆ. ಬ್ಯಾಟರಿ ಬೆಲೆಗಳು ಮತ್ತು ಹೊಸ ನಿಯಮಗಳು EV ವಿಭಾಗದ ಮೇಲೆ ಪರಿಣಾಮ ಬೀರಿವೆ ಎಂದು ಸ್ಪಷ್ಟನೆಯನ್ನು ನೀಡಿದರು.

ಹೊಸ ಎಮಿಷನ್ ಮಾನದಂಡಗಳಿಗೆ ವಿವಿಧ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಕೂಡ ವೆಚ್ಚವಾಗಲಿದೆ ಎಂದು ಅವರು ಹೇಳಿದರು. ಟಾಟಾ ಮೋಟಾರ್ಸ್ ದೇಶೀಯ ಮಾರುಕಟ್ಟೆಯಲ್ಲಿ ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯಂತಹ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತವೆ. ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ, ಕಂಪನಿಯು ನೆಕ್ಸನ್ ಇವಿ, ಟಿಗೊರ್ ಇವಿ ಮತ್ತು ಟಿಯಾಗೊ ಇವಿಯಂತಹ ಉತ್ಪನ್ನಗಳನ್ನು ಹೊಂದಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ .! ನಿಮ್ಮ ಫೋನ್ ಈ ರೀತಿ ಹ್ಯಾಕ್ ಆಗಿ ಬಿಡಬಹುದು.!

ಟಾಟಾ ನೆಕ್ಸಾನ್ ನಂಬರ್ ವನ್ ಎಸ್‌ಯುವಿ:

ನವೆಂಬರ್ ತಿಂಗಳಲ್ಲಿ, ಟಾಟಾ ನೆಕ್ಸಾನ್ ದೇಶದ ಅತಿ ಹೆಚ್ಚು ಮಾರಾಟವಾದ SUV ಆಗಿದೆ. ಕಳೆದ ತಿಂಗಳು 15,871 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ವಾಹನಗಳ ಪಟ್ಟಿಯಲ್ಲಿ ಮಾರುತಿ ಬಾಲೆನೊ ನಂತರ ಎರಡನೇ ಸ್ಥಾನದಲ್ಲಿದೆ. ಪ್ರಸ್ತುತ, ಈ SUV ಯ ಬೆಲೆ 7.70 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News