ಏರುತ್ತಿರುವ ರಿಚಾರ್ಜ್ ಪ್ಲಾನ್ ಬೆಲೆ ನಡುವೆ BSNL ನೀಡುತ್ತಿದೆ ಕೇವಲ 185 ರೂ.ಗೆ 2GB ಡೈಲಿ ಡೇಟಾ

BSNL ಶೀಘ್ರದಲ್ಲೇ ತನ್ನ 4G ಸೇವೆಯನ್ನು ಇಡೀ ದೇಶದಲ್ಲಿ ಪ್ರಾರಂಭಿಸಲಿದೆ. ಈ ಸುದ್ದಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. 

Written by - Ranjitha R K | Last Updated : Jul 15, 2024, 11:47 AM IST
  • 4G ಸೇವೆ ಆರಂಭಿಸಲಿರುವ BSNL
  • ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ
  • ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್
ಏರುತ್ತಿರುವ ರಿಚಾರ್ಜ್ ಪ್ಲಾನ್ ಬೆಲೆ ನಡುವೆ  BSNL  ನೀಡುತ್ತಿದೆ ಕೇವಲ  185 ರೂ.ಗೆ   2GB ಡೈಲಿ ಡೇಟಾ  title=

ಬೆಂಗಳೂರು : ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ BSNL ಶೀಘ್ರದಲ್ಲೇ ತನ್ನ 4G ಸೇವೆಯನ್ನು ಇಡೀ ದೇಶದಲ್ಲಿ ಪ್ರಾರಂಭಿಸಲಿದೆ. ಈ ಸುದ್ದಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಜುಲೈ 2024ರಲ್ಲಿ ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದ್ದರಿಂದ ಹೀಗಾಗುತ್ತಿದೆ. BSNL ಸಂಪೂರ್ಣ 395 ದಿನಗಳವರೆಗೆ ಕಾರ್ಯನಿರ್ವಹಿಸುವ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ.ಈ ಯೋಜನೆಯಲ್ಲಿ,ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ಇತರ ಹಲವು ಪ್ರಯೋಜನಗಳನ್ನು ನೀಡಲಾಗುತ್ತಿದೆ.  

BSNL 2,399 ಯೋಜನೆ :
ಈ ಪ್ಲಾನ್‌ನ ಬೆಲೆ 2399 ರೂ.ಅಂದರೆ ಪ್ರತಿ ತಿಂಗಳು ಸುಮಾರು 185 ರೂ. ಈ ಯೋಜನೆಯಲ್ಲಿ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ SMS ಮತ್ತು ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ  ಅನಿಯಮಿತ ಕರೆಯ ಪ್ರಯೋಜನ ಸಿಗುತ್ತದೆ.ಇದಲ್ಲದೆ,ಈ ಯೋಜನೆಯು ಇಡೀ ದೇಶದಲ್ಲಿ ಉಚಿತ ರೋಮಿಂಗ್ ಅನ್ನು ಸಹ ಹೊಂದಿದೆ.ಜಿಂಗ್ ಮ್ಯೂಸಿಕ್, ಬಿಎಸ್‌ಎನ್‌ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್ ಮತ್ತು ಗೇಮ್‌ಆನ್ ಆಸ್ಟ್ರೋ ಟೇಲ್‌ನಂತಹ ಅನೇಕ ಪ್ರಯೋಜನಗಳನ್ನು  ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : OnePlus Nord 4 ತೆಗೆದುಕೊಳ್ಳುವವರಿಗೆ ಲಾಟರಿ; ಇತಿಹಾಸದಲ್ಲಿ ಇದೇ ಮೊದಲು!!!!

ದುಬಾರಿ  ಪ್ಲಾನ್ ನಿಂದ ತಲೆನೋವು : 
ಈ ಮಧ್ಯೆ, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ನಂತಹ ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಅನೇಕ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿವೆ.ಇದರಿಂದ  ಪ್ರಿಪೈಡ್ ಮತ್ತು ಪೋಸ್ಟ್  ಪೈಡ್  ಎರಡೂ ಗ್ರಾಹಕರು ನಷ್ಟ ಅನುಭವಿಸುವ ಹಾಗಾಗಿದೆ. ಈ ಕಂಪನಿಗಳು ಇನ್ನೂ ಒಂದು ತಿಂಗಳು, ಮೂರು ತಿಂಗಳು ಮತ್ತು ಒಂದು ವರ್ಷದ ಯೋಜನೆಗಳೊಂದಿಗೆ ಮುಂದುವರಿಯುತ್ತಿವೆ.

ಏರ್ಟೆಲ್ ಯೋಜನೆಗಳು : 
ಏರ್‌ಟೆಲ್ ತನ್ನ ಹಲವು ಜನಪ್ರಿಯ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.ಈ ಮೂಲಕ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.ಕೆಲವು ಪ್ರಮುಖ ಬದಲಾವಣೆಗಳ ಬಗ್ಗೆ ಹೇಳುವುದಾದರೆ ಈ ಮೊದಲು 28 ದಿನಗಳವರೆಗೆ 1 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ 265 ರೂ ಆಗಿದ್ದು, ಅದು ಈಗ 299 ರೂಗೆ ಏರಿದೆ. 28 ದಿನಗಳವರೆಗೆ 1.5 GB ದೈನಂದಿನ ಡೇಟಾವನ್ನು ಹೊಂದಿರುವ ಯೋಜನೆಯ ಬೆಲೆ 299 ರೂ.ನಿಂದ 349 ರೂ.ಗೆ ಏರಿದೆ.28 ದಿನಗಳವರೆಗೆ 2 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ ಈಗ 409 ರೂ ಆಗಿದೆ. ಮೊದಲು ಈ ಪ್ಲಾನ್  ಬೆಲೆ 359 ರೂ ಆಗಿತ್ತು.84 ದಿನಗಳವರೆಗೆ 1.5 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ 719 ರೂ.ನಿಂದ 859 ರೂ.ಗೆ ಏರಿಕೆಯಾಗಿದೆ. ಅಲ್ಲದೆ, 84 ದಿನಗಳವರೆಗೆ 2 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ ಈಗ 979 ರೂ ಆಗಿದೆ. ಇಡೀ ವರ್ಷಕ್ಕೆ 2.5 GB ದೈನಂದಿನ ಡೇಟಾವನ್ನು ಹೊಂದಿರುವ ಯೋಜನೆಯ ಬೆಲೆ 3599 ರೂ ಆಗಿದೆ. ಮೊದಲು ಈ ಪ್ಲಾನ್ 2999 ರೂ.ಗೆ ಬರುತ್ತಿತ್ತು. 

ಇದನ್ನೂ ಓದಿ : Best 32 Inch Smart TV: 20 ಸಾವಿರಕ್ಕಿಂತ ಕಡಿಮೆ ಬೆಲೆಯ 32 ಇಂಚಿನ‌ ಟಾಪ್ ಸ್ಮಾರ್ಟ್‌ಟಿವಿಗಳು!

ಜಿಯೋ ಯೋಜನೆಗಳು : 
ರಿಲಯನ್ಸ್ ಜಿಯೋ ಕೂಡಾ ತನ್ನ ಹಲವು ಜನಪ್ರಿಯ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.ಕಂಪನಿಯ ಎರಡು ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳು ಮೊದಲು  1559 ಮತ್ತು  2999 ರೂಪಾಯಿಯಲ್ಲಿ ಲಭ್ಯವಿತ್ತು. ಆದರೆ ಈಗ ಅವುಗಳ ಬೆಲೆಯನ್ನು 1899 ಮತ್ತು 3599 ರೂಪಾಯಿಗೆ ಹೆಚ್ಚಿಸಲಾಗಿದೆ.ಇತರ ಕೆಲವು ಬದಲಾವಣೆಗಳೆಂದರೆ 28 ದಿನಗಳವರೆಗೆ 2 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ ಈಗ 349 ರೂ ಆಗಿದೆ. 28 ದಿನಗಳವರೆಗೆ 1.5 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆ ಈಗ 299 ರೂ. ಆಗಿದೆ.28 ದಿನಗಳವರೆಗೆ 3 GB ದೈನಂದಿನ ಡೇಟಾದೊಂದಿಗೆ ಪ್ಲಾನ್‌ನ ಬೆಲೆಯನ್ನು ಮೊದಲಿನಂತೆಯೇ 449 ರೂಗಳಲ್ಲಿ ಇರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News