Eng vs Ban: ಇಂಗ್ಲೆಂಡ್ 137 ರನ್ಗಳ ಬೃಹತ್ ಅಂತರದಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ 365 ರನ್ಗಳ ಗುರಿ ಪಡೆದಿದ್ದರೆ, ಶಕೀಬ್ ಅಲ್ ಹಸನ್ ಪಡೆ 48.2 ಓವರ್ಗಳಲ್ಲಿ ಕೇವಲ 227 ರನ್ಗಳಿಗೆ ಸೀಮಿತವಾಯಿತು. ಈ ಮೂಲಕ ಜೋಸ್ ಬಟ್ಲರ್ ನಾಯಕತ್ವದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮೊದಲ ಜಯ ದಾಖಲಿಸಿತು.
Kusal Mendis breaks Kumar Sangakkara's record: ಕುಸಾಲ್ ಮೆಂಡಿಸ್ ಅವರು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದ ವಿಕೆಟ್ಕೀಪರ್ ಕುಮಾರ ಸಂಗಕ್ಕಾರ ಅವರ 112 ರನ್ಗಳ ದಾಖಲೆಯನ್ನು ಮುರಿದಿದ್ದಾರೆ.
Mitchell Santner impossible achievement: ನ್ಯೂಜಿಲೆಂಡ್ ಇನ್ನಿಂಗ್ಸ್ನ ಅಂತಿಮ ಎಸೆತದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಬಾಸ್ ಡಿ ಲೀಡೆ ಎಸೆತದಲ್ಲಿ ನ್ಯೂಜಿಲೆಂಡ್’ನ ಕ್ರಿಕೆಟಿಗ ಮಿಚೆಲ್ ಸ್ಯಾಂಟ್ನರ್ 13 ರನ್ ಕಲೆ ಹಾಕಿದ್ದಾರೆ. ಅಷ್ಟಕ್ಕೂ ಅದ್ಹೇಗೆ ಸಾಧ್ಯ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ವಿವರ.
PAK vs SL Match Updates: ಕುಸಾಲ್ ಮೆಂಡಿಸ್ ಅವರು ಪಾಕಿಸ್ತಾನ ವಿರುದ್ಧದ ವಿಶ್ವಕಪ್ನ 8ನೇ ಲೀಗ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಶ್ರೀಲಂಕಾ ಪರ ಅತಿವೇಗದ ಶತಕ ಬಾರಿಸಿದ ಮೊದಲ ಶ್ರೀಲಂಕಾ ಆಟಗಾರ ಎನಿಸಿಕೊಂಡಿದ್ದಾರೆ.
Shubman Gill Absence : ಅನಾರೋಗ್ಯದ ಕಾರಣ ಶುಭಮನ್ ಗಿಲ್ ಮೊದಲ ಪಂದ್ಯದಂತೆ ಅಫ್ಘಾನಿಸ್ತಾನ ವಿರುದ್ಧದ (IND vs AFG) ಮುಂದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Pakistani presenter Zainab Abbas: ಪಾಕಿಸ್ತಾನಿ ಟಿವಿ ನಿರೂಪಕಿ ಝೈನಾಬ್ ಅಬ್ಬಾಸ್ ಈ ಹಿಂದೆ ತನ್ನದೇ ದೇಶದ ಕ್ರಿಕೆಟಿಗ ಮತ್ತು ನಾಯಕ ಬಾಬರ್ ಆಜಮ್ ಬಗ್ಗೆ ಮಾಡಿದ ಟ್ವೀಟ್’ನಿಂದ ವಿವಾದಕ್ಕೆ ಒಳಗಾಗಿದ್ದರು. 2018 ರಲ್ಲಿ, ಜೈನಾಬ್ ಅಬ್ಬಾಸ್ ಮಾಡಿದ ಟ್ವೀಟ್’ನಿಂದಾಗಿ ಬಾಬರ್ ಆಜಮ್ ಕೋಪಗೊಂಡಿದ್ದರು.
World Cup 2023: ಇದು 2023ರ ವಿಶ್ವಕಪ್’ನಲ್ಲಿ ನ್ಯೂಜಿಲೆಂಡ್’ನ ಸತತ ಎರಡನೇ ಗೆಲುವು. ಇದಕ್ಕೂ ಮೊದಲು ಅಕ್ಟೋಬರ್ 5 ರಂದು ನಡೆದ ವಿಶ್ವಕಪ್ 2023 ರ ಮೊದಲ ಪಂದ್ಯದಲ್ಲಿ ಕಿವೀಸ್ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು 9 ವಿಕೆಟ್’ಗಳಿಂದ ಸೋಲಿಸಿತ್ತು. ನೆದರ್ಲೆಂಡ್ ವಿರುದ್ಧವೂ ನ್ಯೂಜಿಲೆಂಡ್ ಅದ್ಭುತ ಫಾರ್ಮ್ ಪ್ರದರ್ಶಿಸಿದೆ.
World Cup 2023 IND vs AFG: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ ಕೇವಲ 3 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈ ಆಗಿದೆ. ಇದೀಗ ಮತ್ತೊಮ್ಮೆ ಈ ಎರಡು ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗಲಿವೆ
India vs Australia: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಕೇವಲ 199 ರನ್’ಗಳಿಗೆ ಸೀಮಿತವಾಯಿತು. ಭಾರತ ತಂಡವು ಕೂಡ ಕೆಟ್ಟ ಆರಂಭವನ್ನು ಪಡೆದರೂ ಸಹ ನಂತರದಲ್ಲಿ ಸುಧಾರಿಸಿಕೊಂಡಿತು.
Virat Kohli Video : 2023ರ ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳಿಂದ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ (85) ಮತ್ತು ಕೆಎಲ್ ರಾಹುಲ್ (97*) ಪ್ರಮುಖ ಕೊಡುಗೆ ನೀಡಿದರು. ಇದೀಗ ವಿರಾಟ್ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ನಿರಾಶೆಗೊಂಡಿದ್ದಾರೆ.
Shubman Gill Health Updates: ಏಕದಿನ ವಿಶ್ವಕಪ್ ಸರಣಿಯ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಗಿಲ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಬಿಸಿಸಿಐ ಮಾಹಿತಿ ಬಿಡುಗಡೆ ಮಾಡಿದೆ.
World cup 2023 :ನೆದರ್ಲೆಂಡ್ಸ್ ವಿರುದ್ಧದ ಎರಡನೇ ಪಂದ್ಯದಿಂದ ತಂಡದ ಸ್ಟಾರ್ ಬ್ಯಾಟ್ಸ್ಮನ್ ಕೇನ್ ವಿಲಿಯಮ್ಸನ್ ಅವರನ್ನು ಕೈಬಿಡಲಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ವಿಲಿಯಮ್ಸನ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
IND vs AUS: ಭಾನುವಾರ (ಅಕ್ಟೋಬರ್ 8) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಆಸಿಸ್ ತಂಡವನ್ನು ಮಣಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಭಾರತದ ನಂಬರ್-01 ಆಲ್ ರೌಂಡರ್ ರವೀಂದ್ರ ಜಡೇಜಾ ವಿಶೇಷ ಸಾಧನೆ ಮಾಡಿದ್ದಾರೆ.
India vs Australia: ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೆ 49.3 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 199 ರನ್’ಗಳಿಗೆ ಆಲೌಟ್ ಆಯಿತು.
India vs Australia, World Cup 2023: ಭಾರತ ತಂಡ ODI ವಿಶ್ವಕಪ್’ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತ್ತು. ರೋಹಿತ್ ಶರ್ಮಾ ನಾಯಕತ್ವದ ತಂಡ ಚೆನ್ನೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಆಗಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.