ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಸೂಚನೆ..! 3 ದಿನ ದರ್ಶನ ರದ್ದು 

Srisaila temple timings : ದ್ವಾದಶ ಜೋತಿರ್ಲಿಂಗ ಕ್ಷೇತ್ರಗಳ ಪೈಕಿ ಎರಡನೇ ಜೋತಿರ್ಲಿಂಗ ಕ್ಷೇತ್ರ, ಭೂಲೋಕ ಕೈಲಾಸ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದಂಡು ಹೆಚ್ಚಿದ ಹಿನ್ನೆಲೆ ಭಕ್ತಾಧಿಗಳಿಗೆ ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ಸೂಚನೆ ಹೊರಡಿಸಿದೆ..

Written by - Krishna N K | Last Updated : Jun 15, 2024, 07:31 PM IST
    • ಭೂಲೋಕ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಎರಡನೇ ಜೋತಿರ್ಲಿಂಗ ಕ್ಷೇತ್ರ ಶ್ರೀಶೈಲ
    • ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು ಶ್ರೀಶೈಲಕ್ಕೆ ಹರಿದು ಬರುತ್ತಿದೆ.
    • ಶ್ರೀಶೈಲ ಕ್ಷೇತ್ರಕ್ಕೆ ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಗೊಳಿಸಲಾಗುತ್ತಿದೆ
ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಮಹತ್ವದ ಸೂಚನೆ..! 3 ದಿನ ದರ್ಶನ ರದ್ದು  title=

Srisaila sparsha darshan timings today : ಜೋತಿರ್ಲಿಂಗಗಳಲ್ಲಿ ಒಂದಾದ ಭೂಲೋಕ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಎರಡನೇ ಜೋತಿರ್ಲಿಂಗ ಕ್ಷೇತ್ರವಾಗಿರುವ ಶ್ರೀಶೈಲ ಶ್ರೀ ಭ್ರಮರಾಂಭಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ತೆಲಂಗಾಣ, ಆಂಧ್ರ, ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು ಶ್ರೀಶೈಲಕ್ಕೆ ಹರಿದು ಬರುತ್ತಿದೆ.

ಶ್ರೀಶೈಲ ಕ್ಷೇತ್ರಕ್ಕೆ ಭಕ್ತಾದಿಗಳ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಗೊಳಿಸಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿಯ ದರ್ಶನ ಪಡೆಯಲು ವಿವಿಧ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..?

ಶ್ರೀಶೈಲ ಕ್ಷೇತ್ರದಲ್ಲಿ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ ಹಿನ್ನೆಲೆ ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನಗಳ ಕಾಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ರದ್ದುಪಡಿಸಲಾಗಿದೆ ಎಂದು ದೇವಸ್ಥಾನದ ಇಒ ತಿಳಿಸಿದ್ದಾರೆ. ಮಂಗಳವಾರದಿಂದ ಶುಕ್ರವಾರದವರೆಗೆ ಸ್ವಾಮಿಯ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ. 

ಶ್ರೀಶೈಲದಲ್ಲಿ ನೆಲೆಗೊಂಡಿರುವ ಭ್ರಮರಾಂಭಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ ದ್ವಾದಶ ಜೋತಿರ್ಲಿಂಗದಲ್ಲಿ ಎರಡನೇ ಜೋತಿರ್ಲಿಂಗವಾಗಿ ಖ್ಯಾತಿ ಪಡೆದಿದೆ. ಅಷ್ಟಾದಶ ಶಕ್ತಿ ಪೀಠಗಳಲ್ಲಿ 6ನೇ ಶಕ್ತಿ ಪೀಠದಲ್ಲಿ ನೆಲೆಗೊಂಡಿರುವ ಅರ್ಧನಾರೀಶ್ವರರು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಇದನ್ನೂ ಓದಿ:ಇಂದಿರಾ ಗಾಂಧಿ ಅವರನ್ನು 'ಮದರ್ ಇಂಡಿಯಾ' ಎಂದು ಬಣ್ಣಿಸಿದ ಬಿಜೆಪಿ ಮಂತ್ರಿ

ಶ್ರೀಶೈಲವನ್ನು ತಲುಪಿದಾಗ ಮೊದಲು ಸಾಕ್ಷಿ ಗಣಪಯ್ಯನ ದರ್ಶನ ಮಾಡಿ ನಂತರ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮಾಡುವುದು ಇಲ್ಲಿ ವಾಡಿಕೆ. ಶ್ರೀಶೈಲ ಕ್ಷೇತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಮಲ್ಲಿಕಾರ್ಜುನ ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News